ಅವಮಾನಗಳನ್ನು ಹೆದರಿಸಿ ಸನ್ಮಾನ ಪ್ರಶಸ್ತಿ ಸರಮಾಲೆ ಧರಿಸಿದ ಶ್ರೇಷ್ಠ ನಟಿ ಶ್ರೀ ಮತಿ ನಿರ್ಮಲ ನಾದನ್.
ರಂಗವೆಂದರೆ ಕಲೆಗಳ ಮತ್ತು ಕಲಾವಿದರ ತವರು…ನಮ್ಮ ಕನ್ನಡ ರಂಗಭೂಮಿ ಬಹಳಷ್ಟು ಕಲಾವಿದರನ್ನು, ರಂಗಕರ್ಮಿಗಳನ್ನು, ಕಲಾ ಸೇವಕರನ್ನು ಕಂಡಿದೆ, ಅಂತಹವರಲ್ಲಿ ಒಬ್ಬರು ಶ್ರೀಮತಿ ನಿರ್ಮಲ ನಾದನ್. ಮೂಲತಃ ಶಿವಮೊಗ್ಗದವರಾದ ನಿರ್ಮಲ ನಾದನ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ರಂಗಭೂಮಿಯಲ್ಲಿ ಸುಮಾರು 15 ವರ್ಷದಿಂದ ಕಲಾ ಸೇವೆ ಮಾಡುತ್ತಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರು ವರೆಗಿನ ಅವರ ಬದುಕು ಹಲವು ತಿರುವುಗಳನ್ನು ಹೊಂದಿದ ರೋಚಕವೇ ಈ ರಂಗ ಪಯಣ. ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ ಮತ್ತು ತಾಯಿಯನ್ನು ಕಳೆದುಕೊಂಡ ನಿರ್ಮಲ ನಾದನ್ ಅವರು ಮಾನಸಿಕವಾಗಿ ವಿಚಲಿತಗೊಂಡಿದ್ದರು, ಕಾರಣ ಸಾಂಸ್ಕೃತಿಕ ವಿಭಾಗದಲ್ಲಿ ಲವಲವಿಕೆಯಿಂದ ಇರುತ್ತಿದ್ದ ಅವರು ಪೋಷಕರನ್ನು ಮತ್ತು ಅವರ ಪ್ರೋತ್ಸಾಹಗಳನ್ನು ಕಳೆದುಕೊಂಡು ಶಾಲಾ ಚಟುವಟಿಕೆಗಳಿಂದ, ಸಹಪಾಠಿಗಳಿಂದ ದೂರ ಉಳಿಯುತ್ತಿದ್ದರು. ಇದನ್ನು ಗಮನಿಸಿದ ಸಿಸ್ಟರ್ ವಿನಯಾ ಮತ್ತು ಚಿಕ್ಕಪ್ಪ ಪುಷ್ಪ ರಾಜ್ ಅವರು ವೈಯಕ್ತಿಕವಾಗಿ ಅವರನ್ನು ಸಾಂಸ್ಕೃತಿಕ ವಿಭಾಗದಲ್ಲಿ ತೊಡಗಿಸಿಕೊಂಡು ಚರ್ಚ್ ನ ಹಾಡುಗಾರಿಕೆ, ನಾಟಕ, ನೃತ್ಯ ಹೀಗೆ ಶಾಲಾ ರಂಗ ಚಟುವಟಿಕೆಗಳ ವೇದಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ತದನಂತರದಲ್ಲಿ ಮತ್ತೆ ಅವರಿಲ್ಲದೆ ಅವಕಾಶಗಳು ಇದ್ದರೂ ಕೆಲವೊಮ್ಮೆ ಪ್ರೋತ್ಸಾಹ ಚಿಕ್ಕಪ್ಪನ ಮುಖಾಂತರವಷ್ಟೇ ಭಾಗವಹಿಸಲು ಸಾಧ್ಯವಿತ್ತು… ಆದರೆ ಎಷ್ಟೋ ಬಾರಿ ಮುಜುಗರ ಮತ್ತು ಪ್ರತಿಬಾರಿ ಚಿಕ್ಕಪ್ಪನ ಕುಟುಂಬದ ಮೇಲೆ ಜವಾಬ್ದಾರಿ ಹೆಚ್ಚಿತ್ತು …. ಅವರಿಗೆ ಕಷ್ಟ ಕೊಡಲು ಇಷ್ಟವಿಲ್ಲದ ಕಾರಣ ಶಾಲಾ ಕಾಲೇಜುಗಳಲ್ಲಿ ಅವಕಾಶ ವಂಚಿತರಾಗಿ ಹಿಂದುಳಿದ ಕಹಿ ಅನುಭವಗಳು ..
ಬಾಲ್ಯದ ಈ ಎಲ್ಲಾ ಕಹಿ ಅನುಭವಗಳಿಂದ ಏನಾದರೂ ಸಾಧಿಸಲೇ ಬೇಕು ಎಂಬ ಕಿಚ್ಚು ನಿರ್ಮಲಾ ರವರಲ್ಲಿ ಚಿಗುರೊಡೆಯಿತು. ನಂತರದಲ್ಲಿ ಗೆಳತಿ ನೇತ್ರಾ ಅವರು ಅಭಿನಯಿಸಬೇಕಿದ್ದ ನಾಟಕ ಅವರಿಗೆ ಹುಷಾರಿಲ್ಲದ ಕಾರಣದಿಂದಾಗಿ ನಿರ್ಮಲ ಅಭಿನಯಿಸಲು ಒತ್ತಾಯಿಸಿದರು.. ಹೀಗೆ ಬೆಂಗಳೂರಿನಲ್ಲಿ ರಂಗಭೂಮಿಯಲ್ಲಿ ತಮ್ಮ ಮೊದಲ ಪಯಣ ಪ್ರಾರಂಭಿಸಿದರು. ಹಲವಾರು ಪೌರಾಣಿಕ, ಐತಿಹಾಸಿಕ, ಬೀದಿ ನಾಟಕ, ಹವ್ಯಾಸಿ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು , ಕೆಲವೊಮ್ಮೆ ಅಲ್ಲಿಯೂ ಕೂಡ ಹಲವು ಕಡೆ ಅವಕಾಶ ವಂಚಿತರಾಗಿ, ಅವಕಾಶಗಳಲ್ಲಿ ತಾರತಮ್ಯ ವಾಗಿ ಅವಮಾನಗಳನ್ನು ಅನುಭವಿಸಿದರು. ಚಿಕ್ಕಂದಿನಿಂದಲೂ ಸಾಂಸ್ಕೃತಿಕ ವೇದಿಕೆಯಲ್ಲಿ ನಟಿಸಲು ಅವಕಾಶ ವಂಚಿತರಾಗಿ ನಟನೆಯ ಕಿಚ್ಚು ಹಚ್ಚಿಕೊಂಡು ಬಂದಿದ್ದ ನಿರ್ಮಲಾ ರವರಿಗೆ ಈ ಅವಮಾನಗಳು ಮತ್ತಷ್ಟು ಜಿದ್ದನ್ನು ಹುಟ್ಟು ಹಾಕಿತು. ಆ ಜಿದ್ದನ್ನು ಮನಸಿನಲ್ಲಿ ಇಟ್ಟುಕೊಂಡು ರಂಗಭೂಮಿಯಲ್ಲಿ ತರಬೇತಿ ಪಡೆಯುತ್ತಿದ್ದರೂ, ಸ್ನೇಹಿತರಾದ KN ರಾಜ್ ಮುಖಾಂತರ ಸಿನಿಮಾ ರಂಗದಲ್ಲಿ ಅವಕಾಶ ಪಡೆಯುವ ಹಂಬಲದಿಂದ “ಸ್ಟಾರ್ ಕ್ರಿಯೇಟರ್ಸ್” ಎಂಬ ನಟನೆ ಕಲಿಕಾ ಶಾಲೆಯಲ್ಲಿ 2 ತಿಂಗಳ ನಟನಾ ತರಗತಿಗೆ ದಾಖಲಾದರು, ಅಲ್ಲಿ ನಿರ್ಮಲ ನಾದನ್ ರವರಿಗೆ ಗುರುಗಳಾಗಿ, ಗಾಡ್ ಫಾದರ್ ಆಗಿ ದೊರೆತವರೇ ಖ್ಯಾತ ನಟ, ರಂಗಕರ್ಮಿ “ಶ್ರೀಯುತ ಸುಚೇಂದ್ರ ಪ್ರಸಾದ್ ಸರ್ “ಅವರು. ತರಬೇತಿಯ ಸಮಯದಲ್ಲಿ ಪೂರ್ವದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಾಗ, ಗುರುಗಳಾದ “ಸುಚೇಂದ್ರ ಪ್ರಸಾದ್” ಸರ್ ಅವರು ಒಂದು ಅದ್ಭುತ ವಾದ ಮಾತನ್ನು ಹೇಳುತ್ತಾರೆ, ಏನೆಂದರೆ “ನಿರ್ಮಲ, ನಾವು ಎಂದಿಗೂ, ಅವಕಾಶಕ್ಕಾಗಿ ಕಾಯಬಾರದು ಮತ್ತು ಪರಿತಪಿಸಬಾರದು ಬದಲಾಗಿ ನಾವೇ ಅವಕಾಶಗಳನ್ನು ಹುಟ್ಟು ಹಾಕುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು,ಮತ್ತು ಅವಕಾಶಗಳನ್ನು ನೀಡುವ ಮಟ್ಟದಲ್ಲಿ ಬೆಳೆಯಬೇಕು”. ರಂಗ ಪಯಣಿಗರು ನೀವು ರಂಗದಲ್ಲಿ ನಿಮ್ಮ ನಿಲುವು ಗಟ್ಟಿಯಾಗಿರಲಿ. ಎಂದು ಗುರುಗಳು ಹೇಳಿದ ಮಾತುಗಳು ನಿರ್ಮಲ ನಾದನ್ ರವರಲ್ಲಿ ಸಕಾರಾತ್ಮಕ ಚೈತನ್ಯ ತುಂಬಿತು. ಅದರಿಂದ ಪ್ರೇರೇಪಿತರಾಗಿ ಹುಟ್ಟು ಹಾಕಿದ ಸಂಸ್ಥೆ ರಂಗಪ್ರಹರಿ……
ಹಲವಾರು ಕನಸುಗಳೊಂದಿಗೆ ನಿರ್ಮಲ ನಾದನ್ ಅವರು ಈ ರಂಗಪ್ರಹರಿ ಸಂಸ್ಥೆಯಿಂದ ಹೊಸ ಪ್ರಯಾಣವನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸಿ ಹಲವಾರು ನಾಟಕಗಳನ್ನು ಆಯ್ಕೆ ಮಾಡಿಕೊಂಡು ,ಅದರ ಮೇಲೆ ಕೆಲಸ ಮಾಡುತ್ತಾರೆ, ರಂಗಪ್ರಹರಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾಗಿ ತರಬೇತಿ ನೀಡುತ್ತಾರೆ, ಚಿಕ್ಕ ಪಾತ್ರವಾಗಲಿ ದೊಡ್ಡ ಪಾತ್ರವಾಗಲಿ ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಪ್ರಯತ್ನ ಇವರದು… ಪಾತ್ರ ಯಾವುದೇ ಇರಲಿ ತಂಡದ ಯಾವ ಮಕ್ಕಳಿಗೆ ಸರಿಯಾಗಿ ಹಂಚಿಕೆಯಾಗಬೇಕೆನ್ನುವ ಮನೋಭಾವ ಅವರದು…
ಗುರುಗಳಾದ ಸುಚೇಂದ್ರ ಪ್ರಸಾದ್ ಸರ್ ರವರ ಪ್ರೇರಣೆ, ಮಾರ್ಗದರ್ಶನ, ಅವರು ತುಂಬಿದ ಆತ್ಮಸ್ಥೈರ್ಯ ,ನಿರ್ಮಲ ನಾದನ್ ಅವರ ಬದುಕಿನ ವೇಗವನ್ನೇ ಬದಲಾಯಿಸಿ ಬಿಡುತ್ತದೆ. ಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ, ರಂಗಕರ್ಮಿ ರಂಗನಿರ್ದೇಶಕಿ , ನಿರೂಪಕಿ ಬರಹಗಾರ್ತಿಯಾಗಿ , ಸಿನಿಮಾ ಇನ್ಸ್ಟಿಟ್ಯೂಟ್ ನಲ್ಲಿ ಭೋದಕಿಯಾಗಿ ಕಾರ್ಯ ನಿರ್ವಹಣೆ ಜವಾಬ್ದಾರಿ ಅವರದು. ನಟಿಯಾಗಿ ಕಿರುತೆರೆ ಹಿರಿತೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಅವರ ಗುರುಗಳ ನಿರ್ದೇಶನದ ” ಸಂದಿಗ್ಧ ” ಮಕ್ಕಳ ಹಕ್ಕುಗಳ ಮತ್ತು ಬಾಲ್ಯ ವಿವಾಹದ ವಿಷಯದ ಕುರಿತು ಜಾಗೃತಿ ಮೂಡಿಸುವ ಚಿತ್ರದ ತಯಾರಿಯಲ್ಲಿ ಅವರೊಂದಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಅನುಭವ ತದನಂತರದಲ್ಲಿ “ಚಿಯಾನ್ ರವಿ” ಅವರ ಜಾಹೀರಾತುಗಳಲ್ಲಿ ಸಹ ನಿರ್ದೇಶಕಿಯಾಗಿ, “ಶ್ರೀ ಜೈ” ಅವರ ನಿರ್ದೇಶನದ ರಾಧಿಕಾ ಕುಮಾರಸ್ವಾಮಿ ಅವರ ನಿರ್ಮಾಣದ “ಭೈರಾದೇವಿ” ಚಲನಚಿತ್ರ, “ಉದಯ್ ಪ್ರಕಾಶ್” ನಿರ್ದೇಶನದ ಮರೀ ಟೈಗರ್ ವಿನೋದ್ ಪ್ರಭಾಕರ್ ಅವರು ನಟಿಸಿರುವ ” ವರದ ” ಚಲನಚಿತ್ರ, “ರಿವಾನ್ ವಿಕ್ರಮ್” ನಿರ್ದೇಶನದ ಹೆಸರಾಂತ ಕಲಾವಿದರಾದ “ಕಿಶೋರ್” ಅವರ “ಫೈ” ಚಲನಚಿತ್ರ, ಸುಚೇಂದ್ರ ಪ್ರಸಾದ್ ಸರ್ ನಿರ್ದೇಶನದ ಮಕ್ಕಳ ಸಿನಿಮಾ “ಸಂದಿಗ್ಧ “ಹೀಗೆ ಹಲವಾರು ಚಲನಚಿತ್ರಗಳಲ್ಲಿ
ಸಹಾಯಕ ನಿರ್ದೇಶಕಿಯಾಗಿ, ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ, ನಿರ್ದೇಶಕ ” ರಾಜ್ ಶೇಖರ್” ನಿರ್ಮಾಣದ ಹಾಸ್ಯ ದಿಗ್ಗಜ “ಸಾಧುಕೋಕಿಲ ” ಅವರ ನಿರ್ದೇಶನದ “ಜಾಲಿಲೈಫ್” ಚಿತ್ರದಲ್ಲಿ ಸಹ ನಿರ್ದೇಶಕಿಯಾಗಿ ಕೂಡ ಕೆಲಸ ಮಾಡುವ ಸಿದ್ದತೆ ನಡೆಯುತ್ತಿದೆ. ಹೀಗೇ ಅವರ ಕಲಾ ಸೇವೆಯ ಪಯಣ ಮುಂದುವರೆಯುತ್ತಿದೆ, ಹಿರಿಯರಿಂದ ಹಿಡಿದು ಕಿರಿಯರವರೆಗೂ ನಟನೆಯ ಕುರಿತು ಪಾಠಗಳ ಭೋದಕಿಯಾಗಿದ್ದರೂ,, ರಂಗದ ಮೇಲೆ ಅಪಾರ ಗೌರವ. ಇದರ ನಡುವೆ ಅವರಲ್ಲಿ ಒಂದು ವಿಶೇಷವಾದ ಗುಣವೆಂದರೆ ನಿರ್ಮಲ ನಾದನ್” ಅವರಿಗೆ ಮಕ್ಕಳು ಎಂದರೆ ತುಂಬಾ ಪ್ರೀತಿ, ಅವರು ತಮ್ಮ ವೃತ್ತಿ ಬದುಕಿನಲ್ಲಿ ಬಿಡುವು ಇಲ್ಲದೆ ಇದ್ದರೂ ಸಹ ಬಿಡುವು ಮಾಡಿಕೊಂಡು ಪ್ರತಿ ಭಾನುವಾರ ರಂಗಪ್ರಹರಿ ಮಕ್ಕಳೊಂದಿಗೆ ತಾವು ಕೂಡ ಮಗುವಾಗಿ ಬಿಡುತ್ತಾರೆ. ಈಗಾಗಲೇ ಅವರಲ್ಲಿ ತರಬೇತಿ ಪಡೆದ ಹಲವು ಮಕ್ಕಳು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ಅಭಿನಯಿಸಿದ್ದಾರೆ, ನಿರ್ಮಲ ನಾದನ್ ರವರಿಗೆ ಸಿನಿಮಾ ರಂಗದಲ್ಲಿ ಎಷ್ಟೇ ಕೆಲಸ ಇದ್ದರೂ, ಮಕ್ಕಳಿಗೆ ರಂಗ ಶಿಕ್ಷಣ ನೀಡುವುದರಲ್ಲಿ ಆತ್ಮತೃಪ್ತಿ , ಮಕ್ಕಳೆಂದರೆ ಪಂಚಪ್ರಾಣ. ಇವರ ನಿರ್ದೇಶನದ ನಾಟಕಗಳು ಆತಿಥ್ಯ, ಬೆಳಕಿನೆಡೆಗೆ, ಅಜ್ಜಿ ಮತ್ತು ಪ್ರಕೃತಿ…ನಾಟಕಕ್ಕೆ ರಂಗರೂಪವಾದ ಕೃತಿಗಳು ಮ.ನಾ ಕೃಷ್ಣ ಮೂರ್ತಿ ಅವರ “ಹೊಸ್ತಿಲು,” ಜೇಷ್ಠ ಭೈರಮಂಗಲ ರಾಮೇಗೌಡ ಅವರ “ಆತಿಥ್ಯ ” ಮುದಲ್ ವಿಜಯ್ ಅವರ ” ನೆನಪು ” ಅಜ್ಜಿ ಮತ್ತು ಪ್ರಕೃತಿ ಮಕ್ಕಳ ನಾಟಕ … ” “ಸುಸನ್ನ ” ಪ್ರದೀಪ್ ನಿರ್ದೇಶನದ ಪುಟ್ಟಕ್ಕನ ಕೋಳಿ ಹುಂಜ ನಾಟಕಕ್ಕೆ 2016 “ಸರಣಿಯ ಶ್ರೇಷ್ಠ ನಟಿ” (Bosch), ಕನ್ನಡ ಸೇವಾ ರತ್ನ ಪ್ರಶಸ್ತಿ 2017, ವಿವೇಕಾನಂದ ಯುವ ಜಾಗೃತಿ ಪ್ರಶಸ್ತಿ 2018, 2018 .. ಕನ್ನಡ ರಾಜ ರಾಜೇಶ್ವರಿ ಪ್ರಶಸ್ತಿ , 2019 … ಜೀವ ಪದ ಪ್ರಶಸ್ತಿ , 2019 … ಕನ್ನಡ ಯುವರತ್ನ ಪ್ರಶಸ್ತಿ. ಸಂಪೂರ್ಣ ಮಾಹಿತಿ ನೀಡಿದವರು ಮುರಳಿ ಮೋಹನ್ ಬಾಬು ತಿಪಟೂರು….
ವರದಿ – ಸಂಪಾದಕೀಯ