ಕುಡಿವ ನೀರಿನ ಪೈಪಲೈನ್ ಯೋಜನೆಗೆ ಶಾಸಕ ವೆಂಕಟರಾವ್ ನಾಡಗೌಡ ಚಾಲನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪ್ರತಿ ಗ್ರಾಮಗಳಿಗೂ ‘ಜಲ ಜೀವನ್ ಮಿಷನ್ ‘ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡರು. ಜಲ ಜೀವನ್ ಮಿಷನ್ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಗೆ ಗುದ್ಧಲಿ ಪೂಜೆಯನ್ನು ಸಂಸದರು ,ಶಾಸಕರು ನೆರವೇರಿಸಿದರು. ಸಿಂಧನೂರು ತಾಲುಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆ ‘ಜಲ ಜೀವನ ಮಿಷನ್ ‘ಗೆ ಸಂಬಂಧಿಸಿದ ಪೈಪ್ ಲೈನ್ ಗೆ ಗುದ್ದಲಿ ಪೂಜೆಯನ್ನು ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ವೆಂಕಟರಾವ್ ನಾಡಗೌಡರು ನೇರವೆರಿಸಿ,ಕಾಮಗಾರಿಗೆ ಚಾಲನೆ ನೀಡಿದರು. ತಾಲುಕಿನ ತಿಮ್ಮಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗೆ 1.05 ಕೋಟಿ ರೂ ಮತ್ತು ಆರ್.ಎಚ್ ಕ್ಯಾಂಪ್ ನಂ – 4 ರಲ್ಲಿ ಅದೇ ಕಾಮಗಾರಿಗೆ 1.31 ಕೋಟಿ ರೂ ಇಡಲಾಗಿದೆ ಹಾಗೂ ಕೊರೊನಾ ನಿಮಿತ್ಯ ಜನ ಕಲ್ಯಾಣ ಸಂಸ್ಥೆಯಿಂದ ಆಹಾರ ಕಿಟ್ ಗಳನ್ನು ಕೂಡ ವಿತರಿಸಲಾಯಿತು. ಬೆಳಗುರ್ಕಿ ಗ್ರಾಮದಲ್ಲಿ 1.10 ಕೋಟಿ ರೂ ,ಸಾಲಗುಂದಾ ಗ್ರಾಮದಲ್ಲಿ 2.46 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗೆ ಗುದ್ದಲಿ ಪೂಜೆ ನೇರವೆರಿಸಿದರು. ಮುಕ್ಕುಂದಾ ಗ್ರಾಮದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಶಾಲೆ ಕಟ್ಟಡಕ್ಕೆ ಗುದ್ದಲಿ ಪೂಜೆ ಹಾಗೂ ಜಲ ಜೀವನ ಮಿಷನ್ ಕುಡಿಯುವ ನೀರಿನ ಪೈಪ್ ಲೈನ್ ಗೆ 55 ಲಕ್ಷ ರೂ ಎಸ್ಟಿಮೆಂಟ್ ಮಾಡಿಸಿ ,ಕಾಮಗಾರಿಗೆ ಚಾಲನೆ ನೀಡಿದರು. ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ,ಜಿ.ಪ ಸದಸ್ಯರಾದ ಅಮರೇಗೌಡ ವಿರುಪಾಪುರ ,ಶಿವನಗೌಡ ಗೋರೆಬಾಳ ,ನಗರ ಯೋಜನಾ ಪ್ರಾಧಿಕಾರದ ಸಮಿತಿಯ ಸದಸ್ಯರಾದ ಜಡಿಯಪ್ಪ ಹೂಗಾರ , ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಮಲ್ಲಿಕಾರ್ಜುನ ಜೀನೂರು ,ಮುಖಂಡರಾದ ಧರ್ಮನಗೌಡ ,ಪರಮೇಶಪ್ಪ ,ಹನುಮೇಶ ಸಾಲಗುಂದಾ ಹಾಗೂ ಆಯಾ ಗ್ರಾಮ ಪಂಚಾಯತಿ ಚುನಾಯಿತ ಜನ ಪ್ರತಿನಿಧಿಗಳು ,ಅಧಿಕಾರಿಗಳು ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ – ಸಂಪಾದಕೀಯ