ವಿಶ್ವ ಭಾಷೆಗಳಲ್ಲಿ ಕನ್ನಡ ಭಾಷೆಯೇ ಸರ್ವ ಶ್ರೇಷ್ಠ : ಸಂಗಮೇಶ ಎನ್ ಜವಾದಿ.
ಬೀದರ: ಗೂಗಲ್ ಕಂಪನಿ ಕನ್ನಡ ಭಾಷೆಯ ಕುರಿತು ಅವಹೇಳನಕಾರಿ ಬರಹಗಳು ಪ್ರಕಟಣೆ ಮಾಡಿದ್ದು ಖಂಡನೀಯ ಹಾಗೂ ಈ ಸಂಸ್ಥೆ ವಿರುದ್ಧ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಗಮೇಶ ಎನ್ ಜವಾದಿಯವರು ಆಗ್ರಹಿಸಿದ್ದಾರೆ. ಕನ್ನಡ ಭಾಷೆಗೆ ತನ್ನದೇ ಆದ ಐತಿಹಾಸಿಕ ಇತಿಹಾಸವಿದೆ, ಅತ್ಯಂತ ಪ್ರಾಚೀನ ಭಾಷೆ ಎಂಬ ಕೀರ್ತಿ ಹಾಗೂ ಪ್ರಸಿದ್ಧ ಹೊಂದಿರುವ ಭಾಷೆ ಕನ್ನಡ ಭಾಷೆಯಾಗಿದೆ. ಇನ್ನು ಕನ್ನಡ ಭಾಷೆಗೆ ಸರಿಸಮವಾದ ಭಾಷೆ ಜಗತ್ತಿನಲ್ಲಿಯೇ ಮತ್ತೊಂದು ಭಾಷೆ ಸೀಗುವುದೇ ಇಲ್ಲ.ಅಲ್ಲದೆ ಕನ್ನಡ ಲಿಪಿ ಸುಮಾರು 1600 – 1800 ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು ಎಂಬುದು ದಾಖಲಾತಿಗಳ ಮೂಲಕ ತಿಳಿಯುತ್ತದೆ.12ನೇ ಶತಮಾನದ ಬಸವಾದಿ ಪ್ರಮಥರ ಅನುಭವ ಹಾಗೂ ಅನುಭಾವದ ವಚನ ಸಾಹಿತ್ಯವೇ ಇದಕ್ಕೆ ತಾಜಾ ನಿರ್ದೇಶನ ಹಾಗಿಯೇ ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ. ಅದಕ್ಕಾಗಿಯೇ ವಿಶ್ವ ಭಾಷೆಗಳಲ್ಲಿ ಕನ್ನಡ ಭಾಷೆಯೇ ಸರ್ವ ಶ್ರೇಷ್ಠ ವೆಂದು ಜನಸಾಮಾನ್ಯರ ಕರೆಯುತ್ತಾರೆ ಎಂದು ಸಂಗಮೇಶ ಎನ್ ಜವಾದಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ. ಅಧ್ಯಕ್ಷರು : ಕಲ್ಯಾಣ ಕಾಯಕ ಪ್ರತಿಷ್ಠಾನ