ಜೂನ್ 5 ಸಂಪೂರ್ಣ ಕ್ರಾಂತಿಯ ದಿನಾಚರಣೆ ಸಿಪಿಐ–ಎಂಎಲ್ ರೆಡ್ ಸ್ಟಾರ್ ಸಿಂಧನೂರು.
ಇಂದು ರಾಜ್ಯಾ ಸಂಯುಕ್ತ ಕಿಸಾನ್ ಮೋರ್ಚ್(SKM)ಕರೆ ನೀಡಿದ ಸಂಪೂರ್ಣ ಕ್ರಾಂತಿ ದಿನಾಚರಣೆಯ ಭಾಗವಾಗಿ ಸಿಂಧನೂರಿನ ಎಪಿಎಂಸಿಯ ಶ್ರಮಿಕ ಭವನದ ಮುಂದೆ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷ ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದಿಂದ ರೈತ ವಿರೋಧಿ ಮೂರು ಕೃಷಿ ಕರಾಳ ಕಾನೂನುಗಳ ಪ್ರತಿಯನ್ನು ಸುಟ್ಟು ಪ್ರತಿಭಟಿಸಲಾಯಿತು. ಕೇಂದ್ರದ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೃಷಿ ಮಸೂದೆಗಳನ್ನು ಸುಡಲಾಯಿತು. ಈ ಸಂದರ್ಭದಲ್ಲಿ ಸಿಪಿಐ(ಎಂಎಲ್)ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಮಾತನಾಡಿ, ರೈತ-ಕಾರ್ಮಿಕ ವಿರೋಧಿ ಕೃಷಿ-ಕಾರ್ಮಿಕ ಕಪ್ಪು ಕಾಯ್ದೆಗಳು ರದ್ದಾಗಲೇಬೇಕೆಂದರು. ಸಂಪೂರ್ಣ ಕ್ರಾಂತಿಯ ದಿವನ್ನಾಗಿ ಇಂದು ದೇಶದ ಎಲ್ಲಾ ರೈತಾಪಿ-ಕೂಲಿ ಕಾರ್ಮಿಕರು ಆಳುವ ದಲ್ಲಾಳಿ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿಯಾದ ಮಾಬುದಾಬ ಬೆಳ್ಳಟ್ಟಿ, ಶ್ರಮಜೀವಿ ಹಮಾಲರ ಸಂಘದ ಹೆಚ್.ಆರ್.ಹೊಸಮನಿ, ನಾಗಪ್ಪ ಉಮಲೂಟಿ, ತಿಮ್ಮಣ್ಣ ಯಾದವ್, ನಾಗಮ್ಮ, ಗೀತಮ್ಮ, ಚೆನ್ನಮ್ಮ, ಹುಸೇನಮ್ಮ ಸೇರಿದಂತೆ ಅನೇಕರು ಮುಖಕ್ಕೆ ಮಾಸ್ಕ್ ಧರಿಸಿ ಕೃಷಿ ಮಸೂದೆಗಳನ್ನು ಸುಡುವ ಹೋರಾಟದಲ್ಲಿ ಭಾಗವಹಿಸಿದ್ದರು. ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ ಸಿಪಿಐ-ಎಂಎಲ್ ರೆಡ್ ಸ್ಟಾರ್ ಸಿಂಧನೂರು.
ವರದಿ – ಸಂಪಾದಕೀಯ