ಕಳೆದೊಂದು ವರ್ಷದಿಂದ (ಏಪ್ರಿಲ್‌ 14, 2020) ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಪ್ರತಿದಿನ ಟ್ರಕ್‌ ಚಾಲಕರಿಗೆ ಊಟ ವಿತರಣೆ .

Spread the love

ಕಳೆದೊಂದು ವರ್ಷದಿಂದ (ಏಪ್ರಿಲ್‌ 14, 2020) ಬಾಗೇಪಲ್ಲಿ ಚೆಕ್ಪೋಸ್ಟ್ನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಪ್ರತಿದಿನ ಟ್ರಕ್ಚಾಲಕರಿಗೆ ಊಟ ವಿತರಣೆಸಾರ್ವಜನಿಕರಿಂದ ಶ್ಲಾಘನೆ  

 

ಬೆಂಗಳೂರು ಜೂನ್‌ 05: ಲಾಕ್‌ ಡೌನ್‌ ಮಧ್ಯೆಯೂ ಎಲೆ ಮರೆ ಕಾಯಿಯಂತೆ ದೇಶದಾದ್ಯಂತ ಪ್ರತಿದಿನ ಹಗಲು ರಾತ್ರಿ ಸಂಚರಿಸಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ವಸ್ತುಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ ಲಾರಿ ಮತ್ತು ಟ್ರಕ್‌ ಡ್ರೈವರ್ ಗಳಿಗೆ ಕಳೆದ ವರ್ಷ (ಏಪ್ರಿಲ್‌ 14, 2020) ಲಾಕ್‌ಡೌನ್‌ ಪ್ರಾರಂಭವಾದ ದಿನದಿಂದಲೂ ಬಾಗೇಪಲ್ಲಿ ಚೆಕ್‌ಪೋಸ್ಟ್‌ ನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಊಟ ವಿತರಣೆ ಕಾರ್ಯವನ್ನು ಮಾಡುತ್ತಿದ್ದಾರೆ.  ಕರೋನಾ ಲಾಕ್‌ಡೌನ್‌ ನಲ್ಲಿಯೂ ಅವಿರತ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಊಟಕ್ಕಾಗಿ ಹೆದ್ದಾರಿಯಲ್ಲಿನ ಹೋಟೇಲ್‌ ಮತ್ತು ಢಾಭಾಗಳನ್ನು ಆಶ್ರಯಿಸಿದ್ದ ಸಾವಿರಾರು ಚಾಲಕರುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಊಟ ಸಿಗದೆ ಕಷ್ಟ ಪಡುತ್ತಿದ್ದ ಲಾರಿ ಮತ್ತು ಟ್ರಕ್‌ ಚಾಲಕರುಗಳಿಗೆ ಸಣ್ಣ ಸೇವೆಯನ್ನು ಒದಗಿಸಬೇಕು ಎನ್ನುವ ಉದ್ದೇಶದಿಂದ ಕಳೆದ ವರ್ಷ ಮೊದಬ ಬಾರಿಗೆ ಲಾಕ್‌ ಡೌನ್‌ ಪ್ರಾರಂಭವಾದ ಸಂಧರ್ಭದಲ್ಲಿ (ಏಪ್ರಿಲ್‌ 14, 2020) ಈ ಕಾರ್ಯಕ್ಕೆ ಬಾಗೇಪಲ್ಲಿ ಚೆಕ್‌ಪೋಸ್ಟ್‌ ನ ಸಾರಿಗೆ ಇಲಾಖೆಯ ತಂಡ ಚಾಲನೆ ನೀಡಿತ್ತು. ಲಾಕ್‌ ಡೌನ್‌ ನಿಂದಾಗಿ ಲಾರಿ ಮತ್ತು ಟ್ರಕ್‌ ಚಾಲಕರುಗಳು ತೀವ್ರ ತೊಂದರೆಗೆ ಸಿಲುಕಿಕೊಂಡಿದ್ದರು. ಊಟಕ್ಕೆ ಅವರು ಡಾಭಾಗಳೂ ಮತ್ತು ಹೋಟೇಲ್‌ಗಳನ್ನು ಆಶ್ರಯಿಸಿದ್ದರು. ಆದರೆ ಲಾಕ್‌ಡೌನ್‌ ನಲ್ಲಿ ಹೋಟೇಲ್‌ ಮತ್ತು ಢಾಭಾಗಳು ಮುಚ್ಚಿಕೊಂಡ ನಂತರ ಊಟ ಸಿಗದೆ ಪರಿತಪಿಸುತ್ತಿದ್ದರು. ಒಂದು ದಿನ ಸಾಂಕೇತಿಕವಾಗಿ ಊಟ ವಿತರಣೆ ಮಾಡಿದ ನಂತರ ಅದರ ಉಪಯೋಗ ಪಡೆದುಕೊಂಡ ಚಾಲಕರುಗಳು ಬಹಳ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ನಮ್ಮ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಕಾರ್ಯದಿಂದ ಚಾಲಕರುಗಳಿಗೆ ಆಗುವ ಅನುಕೂಲವನ್ನು ಗಮನಿಸಿ ಅಂದಿನಿಂದ ಇಂದಿನವರೆಗೂ ಕೂಡಾ ಮಧ್ಯಾಹ್ನದ ಊಟವನ್ನು ನೀಡುವ ಕಾರ್ಯವನ್ನು ಮುಂದುವರೆಸಲಾಗಿದೆ.  12 ಜನ ವಾಹನ ನಿರೀಕ್ಷಕರು ಮತ್ತು ಸಿಬ್ಬಂದಿಗಳ ಸಹಕಾರದಿಂದ ಪ್ರತಿದಿನ ನೂರಾರು ಟ್ರಕ್‌ ಮತ್ತು ಲಾರಿ ಚಾಲಕರುಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತಿದೆ. ಈ ಸೇವೆಯನ್ನು ಲಾಕ್‌ಡೌನ್‌ ಮುಗಿಯುವರೆಗೂ ಮುಂದುವರೆಸಲಾಗುವುದು ಎಂದು ಬಾಗೇಪಲ್ಲಿ ಚೆಕ್‌ ಪೋಸ್ಟ್‌ ಎಆರ್‌ಟಿಓ ತಿಪ್ಪೇಸ್ವಾಮಿ ತಿಳಿಸಿದರು. ಪ್ರತಿದಿನ 300 ಕ್ಕೂ ಹೆಚ್ಚು ಜನರಿಗೆ ಊಟ ನೀಡುತ್ತಿರುವ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಚಾಲಕರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *