ನಿರಂತರ ಅಧ್ಯಯನದ ಮೇರು ಪ್ರತಿಭೆ ಎಂ ಸಿದ್ದೇಶ್ ತಹಶಿಲ್ದಾರರು ಕುಷ್ಟಗಿ
ನಮ್ಮ ತಾಲ್ಲೂಕು ; ನಮ್ಮ ಅಧಿಕಾರಿಗಳು ಸರಣಿ ಲೇಖನ ಮಾಲಿಕೆ : ೧
- ••••••••••••••••••••••••••••••••••••••
ಪ್ರತಿ ದಿನ ಬೆಳಗಿನ ಹೊತ್ತು ಡಿಸ್ಕವರ್ ಬೈಕ್ ನಲ್ಲಿ ಕುಷ್ಟಗಿ ನಗರದ ಹಳೆ ಕುರುಬನಾಳ ರಸ್ತೆಯ ಪಕ್ಕ ಇರುವ ವಿಜಯ ಚಂದ್ರಶೇಖರ ಶಾಲೆಯ ಬಳಿ ಬೈಕ್ ಸ್ಟಾಂಡ್ ಮಾಡಿ ಬರಬರನೇ ಬಂದು ಬಿರುಸಿನ ನಡಿಗೆ ಮಾಡುವ ಆಳೆತ್ತರ ದೃಡಕಾಯದ ಕೆಂಪು ಮೈ ಬಣ್ಣದ ಎಂ ಸಿದ್ದೇಶ್ ತಾಲೂಕಿನ ತಹಶೀಲದಾರರು / ದಂಡಾಧಿಕಾರಿಗಳು ಇವರು. ವಿದ್ಯಾರ್ಥಿ ದೆಸೆಯಿಂದಲೂ ಶಿಸ್ತು ಬದ್ದ ಅಚ್ಚು ಕಟ್ಟಾದ ಜೀವನ ಶೈಲಿ ರೂಢಿಸಿಕೊಂಡು ಬಂದ ಸಿದ್ದೇಶ ಅವರು ಸದಾ ಪುಸ್ತಕ ಪ್ರೇಮಿ ನಿರಂತರ ಅಭ್ಯಾಸ ಓದಿನ ಗೀಳು ರೂಢಿಸಿಕೊಂಡವರು
ತಾಯಿ ಗಂಗಮ್ಮ ತಂದೆ ನಾಗಪ್ಪ ಮೊಳಗಣ್ಣವರ ಕೃಷಿ ಚಟುವಟಿಕೆಗಳ ಒಕ್ಕಲುತನದ ಹಿನ್ನೆಲೆಯಲ್ಲಿ ಬಂದಂತಹವರು ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ಕೊಡಿಸುವ ಹಂಬಲ ಇವರ ಪಾಲಕರದು ಹೀಗಾಗಿ ತಂದೆಯವರ ಅಶಯದಂತೆ ಓದು ಓದು ಓದು
ಇವರ ಸಹೋದರ ಮಲ್ಲಪ್ಪ ಸಿದ್ದೇಶ ಎಂ ಅವರು ಬಾಲ್ಯವನ್ನು ಇಟಿಗೆಯಲ್ಲಿ ಕಳೆಯುತ್ತಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ ಇಟ್ಟಿಗೆಯ ತವನಿಧಿ ಕಿ ಪ್ರಾ ಶಾಲೆ ಮತ್ತು ಸ ಹಿ ಪ್ರಾ ಶಾಲೆಯಲ್ಲಿ ಅಭ್ಯಸಿಸಿ ನಂತರ ಕೆಎನ್ ಎಸ್ ಸಿ ಯಲ್ಲಿ ಪ್ರೌಢಶಾಲಾ ಶಿಕ್ಷಣ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ೨೦೦೪ ರಲ್ಲಿ ಮುಗಿಸಿ ಹರಪನಹಳ್ಳಿ ಯ SUJM ಕಾಲೇಜಿನಲ್ಲಿ ಪಿ ಯು ಸಿ ಕೋಸ್೯ ಮಾಡಿ ೨೦೦೬ ರಲ್ಲಿ ತೇರ್ಗಡೆಯಾಗಿ
ಅದೇ ಕಾಲೇಜ್ ನಲ್ಲಿ ೨೦೦೮ ರಲ್ಲಿ ಡಿ ಇಡಿ ತರಬೇತಿಯನ್ನು ಪೂರೈಸಿದರು. ನಿರಂತರ ಕಠಿಣ ಓದಿನ ಸಂಪರ್ಕದಲ್ಕಿದ್ದ ಸಿದ್ದೇಶ ಅವರು ದಿನಪತ್ರಿಕೆ ನಿಯತಕಾಲಿಕೆಗಳ ಗಂಭೀರ ಓದು ಸ್ಪರ್ಧಾತ್ಮಕ ಪರೀಕ್ಷೆಯ ಸಾಹಿತ್ಯ ವನ್ಬು ಅಭ್ಯಸಿಸುತ್ತಾ ಇದ್ದು ಇದರ ಅನುಕೂಲದಿಂದಾಗಿ ಸಿವಿಲ್ ಪೋಲೀಸ್ ಪರೀಕ್ಷೆಯಲ್ಲಿ ಸಿ ಇ ಟಿ ಪರೀಕ್ಷೆಯನ್ಬು ಬರೆದುದರಿಂದ ಸಿವಿಲ್ ಪೋಲಿಸ್ ಕಾನ್ ಸ್ಟೇಬಲ್ ಆಗಿ ೨೭ /೨ / ೨೦೦೯ ರಲ್ಲಿ ಹಗರಿ ಬೊಮ್ಮನಹಳ್ಳಿ ಪೋಲಿಸ್ ಠಾಣೆಗೆ ಪಿ ಸಿ ಆಗಿ ನೇಮಕವಾದರು ಬೆಳಗಾವಿಯಲ್ಲಿ ಪೋಲಿಸ್ ತರಬೇತಿ ಪಡೆಯುತ್ತಿದ್ದ ವೇಳೆಯಲ್ಲಿ ಬೆಳಗಿನ ಅವಧಿ ಪೋಲಿಸ್ ತರಬೇತಿ ಕವಾಯತ್ ಅಭ್ಯಾಸ ಮಾಡಿ ಪ್ರತಿದಿನ ಸಂಜೆ ಮತ್ತು ರಾತ್ರಿ ಮತ್ತೇ ಓದು ಶುರು ಮಾಡುವ ಈ ನಿರಂತರ ಓದಿನ ಫಲವಾಗಿ ಬಾಹ್ಯ ವಿದ್ಯಾರ್ಥಿ ಯಾಗಿ ಕರ್ನಾಟಕಮುಕ್ತ ವಿಶ್ವವಿದ್ಯಾಲಯ ಧಾರವಾಡದಲ್ಲಿ ಬಿ ಎ ೨೦೦೯ ರಿಂದ ೨೦೧೧ ರಲ್ಕಿ ಮೂರು ವರುಷದ ಕಲಾ ವಿಭಾಗದ ಪದವಿ ಪೂರೈಸಿದರು ಹದನೇಳು ತಿಂಗಳ ಪೋಲಿಸ್ ನೌಕರಿ ಮಾಡುವಷ್ಟರಲ್ಲಿ ಡಿ ಇಡಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಸಿ ಇಟಿ ಬರೆದು ತೇರ್ಗಡೆಯಾಗಿ ಪೋಲಿಸ್ ಹುದ್ದೆ ತೊರೆದು ಶಿಕ್ಷಕ ವೃತ್ತಿಯನ್ನು ೪/ ೬/ ೨೦೧೦ ರಲ್ಕಿ ಆಯ್ಕೆ ಮಾಡಿಕೊಂಡರು ಸಂಡೂರು ಬಳಿಯ ತೋಕನಹಳ್ಳಿ ಸಹಿಪ್ರಾಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅಣಿಯಾದರು ನಂತರ ಅದೇ ಕರ್ನಾಟಕ ವಿಶ್ವವಿದ್ಯಾಲಯ ದಿಂದ ರಾಜ್ಯ ಶಾಸ್ತ್ರ ವಿಷಯದಲ್ಲಿ ಬಾಹ್ಯ ಅಭ್ಯರ್ಥಿಯಾಗಿ ೨೦೧೨ / ೨೦೧೩ ರಲ್ಲಿ ಸ್ನಾತಕೋತ್ತರ ಪದವಿ ಪಡೆದರು
ಕರ್ತವ್ಯ ನಿರ್ವಹಿಸುವ ಸದರಿ ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸುವ ಬಗೆ ತಿಳಿಸಿ ಬಹು ಆಯ್ಕೆ ಯ ಪ್ರಶ್ನೆಗಳನ್ನು ಕೊಟ್ಟು ಕೀ ಪಾಯಿಂಟ್ಸ ಗಳನ್ನು ತಿಳಿಸಿ ನವೋದಯ ಆದರ್ಶ ಮುರಾರ್ಜಿ NNMS ಪರೀಕ್ಷೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪಾಸಾಗಲು ಕಾರಾಣರಾದರು ಅಷ್ಟೇಅಲ್ಲದೆ ಸಹೋದ್ಯೋಗಿಗಳ ಗ್ರಾಮಸ್ಥರ ಶಿಕ್ಷಣ ಇಲಾಖೆಯ ಪ್ರೀತಿಗೆ ಭಾಜನರಾದರು. ನಿರಂತರ ಭೋಧನೆ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಂಡು ಅಲ್ಲಿಯೂ ಓದು ವ ಹವ್ಯಾಸವನ್ಬು ಬಿಡದೆ ಛಲದಂಕ ಮಲ್ಲನಾಗಿ NET SLET ಪರೀಕ್ಷೆಯಲ್ಲಿ ಉತ್ತೀರ್ಣರಾದರು KPSC ಪರೀಕ್ಷೆ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆ ಬಂದಿದ್ದು ಬಿಟ್ಟು FDAಆಗಲು ತವಕಿಸಿದರು ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆ ಬಿಟ್ಟು ಬಳ್ಳಾರಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ೬/ ೪ / ೨೦೧೭ ರಲ್ಲಿ
ಪ್ರಥಮ ದರ್ಜೆ ಸಹಾಯಕ ಹುದ್ದೆ ಗಿಟ್ಡಿಸಿಕೊಂಡರು ಮತ್ತೇ ಓದು ಮುಂದುವರೆಸುತ್ತಾ KAS ಪರೀಕ್ಷೆ ಬರೆದೆ ಬಿಡುವ ಮನದ ಹಂಬಲದಿಂದ ಮತ್ತೆ ಕಠಿಣವಾದ ಓದನ್ನು ಮುಂದುವರೆಸಿ ೨೦೧೪ ರಲ್ಲಿ ಕೆ ಎ ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ FDA ಹುದ್ದೆ ತೊರೆದು ೨೮ /೯/೨೦೧೭ ರಿಂದ ತಹಶಿಲ್ದಾರರ ಹುದ್ದೆಯ ಸೇವೆಗೆ ಅಣಿಯಾದರು ಹೀಗೆ ಮಾನ್ಯ ಎಂ ಸಿದ್ದೇಶ್ ಅವರ ನಿರಂತರ ಓದಿನ ಹವ್ಯಾಸ ವು ಪೋಲಿಸ್ ಹುದ್ದೆ , ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆ ಪ್ರ ದ ಸ ಹುದ್ದೆ ಮುಂದೆ ತಹಶಿಲ್ದಾರರ ಹುದ್ದೆಯವರೆಗೂ ಅವರ ಜೀವನ ಪ್ರಯಾಣ ಸಾಗಿಬಂದಿದೆ ಇತ್ತೀಚಿನ ಯುವ ಪೀಳಿಗೆಯ ಗೆಳೆಯರು ಇವರ ಶಿಸ್ತು ಸಂಯಮ ತಾಳ್ಮೆ ಓದುವ ಅಭಿರುಚಿ ಗುರಿಯ ಬೆನ್ನಟ್ಟುವ ಓದಿನ ಶ್ರಧ್ದೆ ಅಭ್ಯಾಸ ದ ಸಮಯವನ್ನು ಎಂದಿಗೂ ಪೋಲುಮಾಡದ ಮಾನಸಿಕ ಇಚ್ಚಾ ಶಕ್ತಿ ಇತರರಿಗೆ ಮಾದರಿಯಾದದು. ಸರ್ ಇದೆಲ್ಲಾ ಹೇಗೆ ? ಎಂದನೆಷ್ಟೆ ? ಹೇಳಿದರು ನೋಡಿ ನಮಗೆ ಪ್ರೈಮರಿ ಸ್ಕೂಲ್ ನಲ್ಕಿ ನಾಗಯ್ಯ ಅಂತ ಮೇಷ್ಟ್ರು ಇದ್ದರು ಅವರೆ ನಮಗೆ ಓದಿನ ರುಚಿ ಹಚ್ಚಿಸಿದರು ಪ್ರತಿದನವೂ ಒಂದೊಂದು ಟಾಸ್ಕ ಕೊಡುತ್ತಿದ್ದರು ನಾನಂತೂ ಪುಸ್ತಕದ ಹುಳ ಗ್ರಾಮದ ಗ್ರಂಥಾಲಯ ಊರ ಹೊರಗಿನ ಹೊಲಗಳ ಗಿಡ ಮರ ಪರಿಸರದಲ್ಲಿ ಓದಿಗೆ ಕೂತರೆ ಮರಳಿ ಬರುವುದು ಹೊತ್ತಾದ ಮೇಲೇಯೇ ಹಾಗೇ ಓದುತ್ತದ್ದೆ
ಪ್ರಚಲಿತ ವಿದ್ಯಮಾನ ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ಅದರಲ್ಲಿ ಬರುತಿದ್ದ ಅಂಕಣಗಳನ್ನು ತಪ್ಪದೆ ಓದುವುದುಪ್ರಚಲಿತ ವಿಜ್ಞಾನ, ಅರ್ಥಶಾಸ್ತ್ರ, ಇತಿಹಾಸ ರಾಜ್ಯಶಾಸ್ತ್ರ, ಸ್ಪಾಟ್ ರೀಡಿಂಗ್ ಮಾಡುವ ರೂಢಿ ಇತ್ತು ಹೀಗಾಗಿ ನನಗೆ ಓದು ಕಷ್ಟವಾಗಲಿಲ್ಲ ಪರೀಕ್ಷೆಗಳು ಬರುತ್ತವೆ ಅಂತ ಓದುತಿರಲಿಲ್ಲ ಅವು ಯಾವಾಗಲಾದರೂ ಬರಲಿ ನಾವು ಓದುವುದನ್ನು ಬಿಡುತ್ತಿರಲಿಲ್ಲ ಅದು ಒಂದು ತಪಸ್ಸು ಮತ್ತು ಕಲೆ ಎಂದು ಸಲೀಸಾಗಿ ಹೇಳುವುದನ್ನು ಚೇಂಬರನಲ್ಲಿ ನೋಡುತ್ತಾ ಕೂತೆ ೩೫ ವರುಷ ವಯಸ್ಸಿನಲ್ಲಿ ತಾಲೂಕಿನ ತಹಶಿಲ್ದಾರರ ಹುದ್ದೆಯನ್ನು ಅಲಂಕರಿಸಿದ ಎಂ ಸಿದ್ದೇಶ್ ಅವರಿಗೆ ಇಂದಿನ ವಿದ್ಯಾರ್ಥಿಗಳಿಗೆ ಏನು ಹೇಳಲು ಇಚ್ಚಿಸುತ್ತೀರಿ ಎಂದೆ ? ವಿದ್ಯಾರ್ಥಿಗಳಿಗೆ ಓದಿನ ಸಮಯ ತುಂಬಾ ಮಹತ್ವದ್ದು , ಮೊಬೈಲ್ ಟಿವಿ ಯಿಂದ ಸಾಧ್ಯವಾದಷ್ಟು ದೂರ ಇರಿ ಓದಿನ ಸುಖ ಹಚ್ಚಿಕೊಂಡರೆ ಅದನ್ನು ಬಿಡಲು ಮನಸ್ಸು ಆಗುವುದೇ ಇಲ್ಲ ಯಾವುದನ್ನೂ ಓದಬೇಕು ಎಷ್ಟು ಓದಬೇಕು ಎಂದು ಮೊದಲೇ ತಿಳಿದಿರಬೇಕು, ಪರೀಕ್ಷೆಯಲ್ಲಿ ಪಾಸಗಾಬೇಕು ಅಂದುಕೊಳ್ಳದೆ ಮುಂದಿನ ಸಾಧನೆಯ ಬಗ್ಗೆ ಚಿಂತಿಸಿ ಓದುವ ಹವ್ಯಾಸವನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂಬುದನ್ನು ಹೇಳಲು ಮರೆಯಲಿಲ್ಲ. ಪತ್ನಿ ಶ್ರೀ ಮತಿ ಕಾವ್ಯಾ ಪ್ರೀತೀಯ ಮಗಳು ಪ್ರಾಚಿ ಜೊತೆಗೆ ಸಂತಸದಿಂದ ಕಾಲ ಕಳೆಯುವ ಸದಾ ಮೌನಿ ತಾಳ್ಮೆ ಸಂಯಮದ ಕೈಕೆಳಗಿನ ಸಿಬ್ಬಂದಿಗಳಿಗೆ ಮಾರ್ಗದರ್ಶಿ ಯಾಗಿ ಎಂ ಸಿದ್ದೇಶ್ ಅವರ ಜೀವನ ಸುಖಮಯವಾಗಿರಲಿ ಎಂದು ಹಾರೈಸುವಾ ತಾವರಗೇರಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್ ಬಳಗದವತಿಯಿಂದ. (ವಿಶೇಷ ವರದಿ ಸಂಗ್ರಹಗಾರರು ನಟರಾಜ್ ಸೋನಾರ್)
ವರದಿ – ಅಮಾಜಪ್ಪ ಹೆಚ್. ಜುಮಲಾಪೂರ