ವಿಶ್ವ ಪರಿಸರ ದಿನಾಚರಣೆಯ ದಿನದೊಂದು 10,001 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳರವರು ಚಾಲನೆಯನ್ನು ನೀಡಿದರು.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಸ್ಕಿಯನ್ನು ಹಸಿರುಗೊಳಿಸುವ ನಿಟ್ಟಿನಲ್ಲಿ ಆರಂಭಿಸಿದ ಯೋಜನೆಯ ಭಾಗವಾಗಿ 10,001 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಮಸ್ಕಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ ಅವರು ಚಾಲನೆಯನ್ನು ನೀಡಿದರು. ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಮಸ್ಕಿಯ ಮುಖ್ಯ ರಸ್ತೆಯಲ್ಲಿ ನಿಸರ್ಗಮಾತೆಯ ಚಿತ್ರವನ್ನು ಬಿಡಿಸುವುದರ ಜೊತೆಗೆ ಪುಟಾಣಿ ಮಕ್ಕಳಿಗೆ ಸಸಿಗಳ ವೇಷಭೂಷಣ ತೊಡಿಸಿ ಜನರಲ್ಲಿ ಪರಿಸರದ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು. ಇದರೊಂದಿಗೆ ಕೋವಿಡ್ 19 ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕೊರೋನ ಹಾಗೂ ಯಮಧರ್ಮನ ವೇಷವನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ ಅವರು ಅಭಿನಂದನ್ ಸಂಸ್ಥೆಯು ಈ ರೀತಿಯ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದ್ದು ಈ ಸಂಸ್ಥೆಯ ಕಾರ್ಯಗಳು ಹೀಗೆ ಮುಂದುವರೆಯಲಿ ಮತ್ತು ಜನರಲ್ಲಿ ಕೋವಿಡ್ 19 ನಿಯಮಗಳ ಕುರಿತು ಹಾಗೂ ಜನರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಸ್ಕಿಯ ತಹಸಿಲ್ದಾರ್ ಬಲರಾಮ್ ಕಟ್ಟಿಮನಿ, ಹಿರಿಯರಾದ ಮಹಾಂತೇಶ ಮಸ್ಕಿ, ಅಪ್ಪಾಜಿಗೌಡ, ಜಿಲಾನಿ ಖಾಜಿ, ಮಲ್ಲಯ್ಯ ಬಳ್ಳಾ, ಮಲ್ಲಿಕಾರ್ಜುನ ಪಾಟೀಲ್ ಯದಲದಿನ್ನಿ, ಹನುಮಂತಪ್ಪ ಮುದ್ದಾಪೂರ ಹಾಗೂ ಇನ್ನಿತರ ಮುಖಂಡರು ಮತ್ತು ಸಂಸ್ಥೆಯ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ