ಕವಿತಾಳ ಪಟ್ಟಣದ ಹತ್ತಿರ ಬರುವ ಇರಕಲ್ ಮಠದಲ್ಲಿ ಶ್ರೀಗಳಿಂದ ವಿಶ್ವ ಪರಿಸರ ದಿನಾಚರಣೆ
ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಮರ ಬೆಳೆಸುವ ಮೂಲಕ ಪರಿಸರ ಉಳಿಸುವ ಸಂಕಲ್ಪ ಮಾಡೋಣ ಎಂದು ಶ್ರೀ ಶಿವಶಕ್ತಿ ಗುರುಪೀಠ ಇರಕಲ್ ಮಠದ ಪೀಠಾಧಿಪತಿಗಳಾದ ಬಸವ ಪ್ರಸಾದ ಮಹಾಸ್ವಾಮಿಜೀ ಹೇಳಿದರು. ಪಟ್ಟಣ ಸಮೀಪದ ಇರಕಲ್ ಶ್ರೀ ಶಿವಶಕ್ತಿ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಶ್ವ ಪರಿಸರ ದಿನ ಎಂಬುದು ನಾವೆಲ್ಲರೂ ಒಂದು ದಿನಕ್ಕೆ ಗಿಡ ನೆಡುವುದಕ್ಕೆ ಮಾತ್ರ ಸೀಮಿತವಾಗಿದೆ. ಪರಿಸರ ಕಾಳಜಿಗೆ ಸಂಕಲ್ಪ ಮಾಡುವ ದಿನವಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪರಿಸರ ಬೆಳೆಸಲು ಮುಂದಾಗೋಣ ಎಂದು ಹೇಳಿದರು. ಉಪನ್ಯಾಸಕ ಅಮರೇಶ ಸ್ವಾಮಿ ಮಾತನಾಡಿ ಸುಂದರ ನೈಸರ್ಗಿಕ ಸೊಬಗಿನಲ್ಲಿ ಕೈಬೀಸಿ ಕರೆಯುವ ಹಸುರಿನ ಸಿರಿ ಪ್ರಕೃತಿಯನ್ನು ಪ್ರೀತಿಸಿ ಆರಾಧಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪರಿಸರವನ್ನು ಹಾಳು ಮಾಡುತ್ತಿರುವ ವ್ಯಕ್ತಿಗಳು ಮರ-ಗಿಡಗಳನ್ನು ಕತ್ತರಿಸಿಸುವುದನ್ನು ಬಿಟ್ಟು ಬದಲಾಗಿ ಹಸಿರಿನ ಮಹತ್ವ ಹಾಗೂ ಅಗತ್ಯತೆ ಅರಿಯುವುದು ಮುಖ್ಯ. ನಿಸರ್ಗದ ಪರಿಸರ ನಾಶದಿಂದಲೇ ಇಂದು ಅನೇಕ ರೋಗ ರುಜೀನುಗಳು ಹರಡುವ ಸಾಧ್ಯತೆಯಿದೆ ಎಂಬುದು ತಿಳಿದುಕೊಂಡು ಪ್ರತಿಯೊಬ್ಬರು ರಸ್ತೆ ಬದಿ. ಮನೆ ಆವರಣದಲ್ಲಿ. ಸಾರ್ವಜನಿಕ ಮೈದಾನದಲ್ಲಿ. ಹೊಲ ಗದ್ದೆಗಳಲ್ಲಿ ಸೇರಿದಂತೆ ನಾನಾ ಸ್ಥಳಗಳಲ್ಲಿ ಯಥೇಚ್ಛವಾಗಿ ಸಸಿಗಳನ್ನು ನೆಟ್ಟು ಪ್ರಕೃತಿ ಪ್ರೀಯರಾಗಿ ಆಶ್ವಾಧಿಸುವುದು ಉತ್ತಮ ಎಂದರು. ಈ ಸಂದರ್ಭದಲ್ಲಿ ಬಸವ ನಾಯಕ. ಹನುಮಂತ. ಮೌನೇಶ. ಶರಣಬಸವ ಇತರರು ಉಪಸ್ಥಿತರಿದ್ದರು.
ವರದಿ – ಆನಂದ್ ಸಿಂಗ್ ಕವಿತಾಳ