ದಲಿತ ಸಂಘರ್ಷ ಸಮಿತಿವತಿಯಿಂದ ಲಾಕ್ ಡೌನ್ ಸಡಿಲಗೊಳಿಸಬೇಕೆಂದು ಯಲಬುರ್ಗಾ ಪಟ್ಟಣದ ತಹಸೀಲ್ದಾರ್ ಗೆ ಮನವಿ.

Spread the love

ದಲಿತ ಸಂಘರ್ಷ ಸಮಿತಿವತಿಯಿಂದ ಲಾಕ್ ಡೌನ್ ಸಡಿಲಗೊಳಿಸಬೇಕೆಂದು ಯಲಬುರ್ಗಾ ಪಟ್ಟಣದ ತಹಸೀಲ್ದಾರ್ ಗೆ ಮನವಿ.

ಲಾಕ್ಡೌನ್ ಜಾರಿ ಮಾಡಿದ್ದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಕೊರೋನ ಸಂಕಷ್ಟದಲ್ಲಿರುವವರಿಗೆ ಸರ್ಕಾರ ಘೋಷಿಸಿರುವ ಲಾಕ್ ಡೌನ್ ಸಡಿಲಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿಯವರು ಯಲಬುರ್ಗಾ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಉಪತಹಸೀಲ್ದಾರ್ ನಾಗಪ್ಪ ಸಜ್ಜನವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು ತಾಲ್ಲೂಕ್ಕಿನಲ್ಲಿ ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಪಟ್ಟಣಕ್ಕೆ ಬೀಜ ಗೊಬ್ಬರ ಖರೀದಿಗೆ ಬರಲು ಪರದಾಡುವಂತಹ ಸ್ಥಿತಿ ಬಂದಿದೆ ಆದಕಾರಣ ವಾರದಲ್ಲಿ ಮೂರು ದಿನ ಅಂಗಡಿಗಳನ್ನು ದಿನಪೂರ್ತಿ ತೆಗೆಯಲು ಅವಕಾಶ ಕಲ್ಪಿಸಿಕೊಡಬೇಕು. ಎರಡು ತಿಂಗಳಿನಿಂದ ಬಡ ಫಲಾನುಭವಿಗಳಿಗೆ ಮಾಶಾಸನ ಪಾವತಿಯಾಗುತ್ತಿಲ್ಲ ಜೀವನ ನಡೆಸಲು ಕಷ್ಟಕರವಾಗಿದೆ ಕೂಲಿಕಾರ್ಮಿಕರು ಕೂಲಿ ಕೆಲಸವನ್ನು ಅವಲಂಬಿಸಿದ್ದು ತಾಲ್ಲೂಕಿನ ನರೇಗಾ ಯೋಜನೆ ಪ್ರಾರಂಭಿಸಬೇಕು ಪಟ್ಟಣಕ್ಕೆ ಬರುವ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಬಾಡಿಗೆ ವಾಹನಕ್ಕೆ ಅನುಮತಿ ನೀಡಬೇಕು ಪ್ರತಿಯೊಬ್ಬ ರೈತ ಕುಟುಂಬಗಳಿಗೆ 10 ಸಾವಿರ ರೂಪಾಯಿ ಗಳನ್ನು ಮಂಜೂರು ಮಾಡಬೇಕು ಎಂದು ಪ್ರತಿಭಟನೆ ಮಾಡಿದರು.  ಈ ಸಂದರ್ಭದಲ್ಲಿ ಡಿಎಸ್ಎಸ್ ಸಂಚಾಲಕರಾದ ಶಿವಾನಂದ ಬಣಕಾರ್ ಬಸವರಾಜ ಕಲಕಬಂಡಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಮರ್ಕಟ  ಹನುಮಂತ ವಸಳ್ಳಿ ಯಮನೂರ ಕೆಂಪಳ್ಳಿ ನಾಗರಾಜ್ ಯಡಿಯಾಪುರ ಹುಸನಪ್ಪ ಮುತ್ತಾಳ ಇನ್ನು ಹಲವರು ಉಪಸ್ಥಿತರಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *