ಯಲಬುರ್ಗಾ ತಾಲೂಕು ಆಸ್ಪತ್ರೆ ಮಾದರಿ ಆಸ್ಪತ್ರೆಯನ್ನಾಗಿ ಮಾಡುವುದು ಶಾಸಕರ ಗುರಿ ಜೊತೆಗೆ 10 ಸಾವಿರ ದಿನಸಿ ಕಿಟ್ ವಿತರಣೆಗೆ ಮುಂದಾದ ಶಾಸಕ ಹಾಲಪ್ಪ ಆಚಾರ್
ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಬಯಲು ರಂಗಮಂದಿರದ ಮುಂದೆ ಬಿಜೆಪಿ ಮುಖಂಡರಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಪರಿಸರ ನಾಶಮಾಡುವುದರಿಂದ ಉಸಿರಾಟದ ತೊಂದರೆ ಅನುಭವಿಸುತ್ತೇವೆ ಮುಕ್ತಿ ಕಾಣಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸಬೇಕು ಎಂದು ಮಾತನಾಡಿದರು ಮತ್ತು ತಾಲ್ಲೂಕು ಶಿಕ್ಷಕರ ಸಹಕಾರದಿಂದ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಆಶ್ರಯದಲ್ಲಿ ರಕ್ತದಾನ ಶಿಬಿರ ಅರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಮಾಜಿ ಶಾಸಕರು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಕೊರೋನ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ಸಿಗರು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡುವ ಮೂಲಕ ಅನೇಕರ ಸಾವಿಗೆ ಕಾರಣರಾಗಿದ್ದಾರೆ ಸದ್ಯಕ್ಕೆ ಲಸಿಕೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆರೋಪ ಮಾಡುವುದು ಯಾವ ನ್ಯಾಯ ಎಂದು ಮಾತನಾಡಿದರು ಸಾನ್ನಿಧ್ಯ ವಹಿಸಿದ್ದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಅವರು ಹಾಲಪ್ಪ ಆಚರ್ ಅವರ ಜನರ ಬಗ್ಗೆ ಅಪಾರ ಕಾಳಜಿ ಹೊಂದಿರಿವಂತ ಶಾಸಕ ಹಾಲಪ್ಪ ಆಚಾರ್ ಅವರು ತಮ್ಮ ಸ್ವಂತ ಹಣದಲ್ಲಿ ಬಡವರಿಗೆ 10 ಸಾವಿರ ದಿನಸಿ ಕೀಟಗಳನ್ನು ನೀಡಿದ್ದಾರೆ. ದೇವರು ಅವರಿಗೆ ಇನ್ನು ದಾನ ಧರ್ಮ ಮಾಡುವ ಶಕ್ತಿ ನೀಡಲಿ ಎಂದರು. ತಾಲೂಕಿನ ಶಾಸಕರಾದ ಹಾಲಪ್ಪ ಆಚಾರ್ ಮಾತನಾಡಿ ಎಲ್ಲಾ ದಿನಸಿ ಕಿಟ್ ಗಳನ್ನು ಬಡವರಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರ ಗಳಿಂದ ಕೊರೋನ ಮಹಾಮಾರಿಯನ್ನು ಎದುರಿಸಲು ಸಾಧ್ಯವಾಗಿದೆ. ಲಾಕ್ಡೌನ್ ಸಂಕಷ್ಟದಲ್ಲಿರುವ ವಿವಿಧ ವಲಯಗಳಿಗೆ ಮುಖ್ಯಮಂತ್ರಿಗಳು 2-ಹಂತದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷರಾದ ವಿಶ್ವನಾಥ್ ಬಸಪ್ಪನವರು ತಾಲ್ಲೂಕಿನ ಅಧಿಕಾರಿಗಳದ ತಸಿಲ್ದಾರ್ ಶ್ರೀಶೈಲ ತಳವಾರ್ ಇ ಒ. ಡಾ! ಜೈರಾಮ್ ಚವಾನ್ ಮತ್ತು ಮುಖಂಡರಾದ ಬಸಲಿಂಗಪ್ಪ ಭೋತೆ ಸಿ ಎಚ್ ಪೊಲೀಸ್ ಪಾಟೀಲ್ ವೀರಣ್ಣ ಹುಬ್ಬಳ್ಳಿ ಕಳಕಪ್ಪ ಕಂಬಳಿ ಪ ಪಂ ಅಧ್ಯಕ್ಷ ಅಮರೇಶ್ ಹುಬ್ಬಳ್ಳಿ ರತನ ದೇಸಾಯಿ ಚನ್ನಬಸಪ್ಪ ರೆಡ್ಡೇರ ವಸಂತಕುಮಾರ್ ಬಾವಿಮನಿ ಅಯ್ಯನಗೌಡ ಕೆಂಚಮ್ಮನವರು ಇನ್ನು ಹಲವಾರು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಇದರ ಜೊತೆ ಜೊತೆಗೆ
2 ನೇ ಅಲೆ ಕೊರೋನ ಮಹಾಮಾರಿ ಸಂಕಷ್ಟದಲ್ಲಿರುವ ಯಲಬುರ್ಗಾ ಮತ್ತು ಕುಕನೂರ ತಾಲೂಕಿನ 10. ಸಾವಿರ ಬಡವರಿಗೆ ತಾಲೂಕಿನ ಶಾಸಕರಾದ ಹಾಲಪ್ಪ ಆಚಾರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಆಹಾರಗಳನ್ನು ವಿತರಿಸುವ ಕಾರ್ಯ ಮಾಡಿದ್ದಾರೆ ಎಂದು ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಅವರು ಮಾತನಾಡಿದರು ಯಲಬುರ್ಗಾ ಬಯಲು ರಂಗಮಂದಿರದಲ್ಲಿ ಮುಂದೆ ಬಿಜೆಪಿಯ ತಾಲ್ಲೂಕು ವತಿಯಿಂದ ಕಾರ್ಯಕ್ರಮ 10 ಸಾವಿರ ಉಚಿತ ಜನ ಸಿಕ್ಕಿದ್ದನ್ನು ತಾಲೂಕು ಆಡಳಿತ ಅಧಿಕಾರಿಗಳಾದ ಶ್ರೀಶೈಲ್ ತಳವಾರ ಅವರ ಮುಖಾಂತರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು ಇವರಿಗೆ ಬಡವರಿಗೆ ದಾನ ಧರ್ಮ ಮಾಡುವುದೆಂದರೆ ಸಹಾಯ-ಸಹಕಾರ ಮಾಡುವ ಗುಣ ಯಾರಲ್ಲೊ ಇಲ್ಲಾ ಇಂತಹ ಗುಣವಂತ ವ್ಯಕ್ತಿಯೆಂದರೆ ಹಾಲಪ್ಪ ಆಚಾರ್ ಅವರನ್ನು ಮೆಚ್ಚಲೇಬೇಕು.
ವರದಿ – ಹುಸೇನ್ ಮೋತೆಖಾನ್