ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಾಸಕರ ಅಧ್ಯಕ್ಷತೆಯಲ್ಲಿ,ಟಾಸ್ಕ್ ಪೋರ್ಸ್ ಅಧಿಕಾರಿಗಳ ಸಭೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಾಸಕರ ಅಧ್ಯಕ್ಷತೆಯಲ್ಲಿ,ಟಾಸ್ಕ್ ಪೋರ್ಸ್ ಅಧಿಕಾರಿಗಳ ಸಭೆ- ವಿಜಯನಗರ ಜಿಲ್ಲೆ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ,ತಾಲೂಕು ಮಟ್ಟದ ಕೋವಿಡ್19 ಟಾಸ್ಕ್ ಫೋರ್ಸ್ ಕಮಿಟಿ ಸಭೆ ಜರುಗಿತು,ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಭಾವಪೂರ್ಣ ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್19 ಎರಡನೇ ಅಲೆಯಲ್ಲಿ ಮೃತಪಟ್ಟವರಿಗೆ,ಜನಪ್ರಿಯ ಶಾಸಕರಾದ ಸನ್ಮಾನ್ಯ ಎನ್.ವೈ. ಗೋಪಾಲಕೃಷ್ಣ ರವರು ಮೃತ 70 ಜನರ ಆತ್ಮಗಳಿಗೆ ಶಾಂತಿ ಸಿಗಲೆಂದು ಅವರು ಶ್ರದ್ದಾಂಜಲಿ ಅರ್ಪಿಸಿದರು. ತಮ್ಮ ವೈಯಕ್ತಿಕವಾಗಿ ₹20,000/- ಪರಿಹಾರ ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಇದ್ದು, ಎಲ್ಲರೂ ತಲಾ ಒಂದು ಸಸಿಯನ್ನು ನೆಟ್ಟು ಬೆಳಸಿರೆಂದು ಹೇಳಿದರು. ಈ ಅವರು ಮೂಲಕ ಪರಿಸರ ಪ್ರೇಮ ಸಂದೇಶ ನೀಡಿದರು. ವಿವಿದ ಕಾರ್ಯಕ್ರಮಗಳು- ವಿಜಯನಗರಜಿಲ್ಲೆ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ,ಹೊಸಹಳ್ಳಿ ಗ್ರಾಮೀಣ ಭಾಗದ ರೈತರಿಗೆ ಉಪಯೋಗಕ್ಕಾಗಿ ಬಾಡಿಗೆ ಆಧಾರಿತ “ಕೃಷಿ ಯಂತ್ರಧಾರೆ” ಕೇಂದ್ರಕ್ಕೆ ಚಾಲನೆ ನೀಡಿದರು. ಹಾಗೂ ಮುಂಗಾರುಮಳೆ ಉತ್ತಮವಾಗಿರುವುದರಿಂದ ರೈತರಿಗೆ ಸಾಂಕೇತಿಕವಾಗಿ “ಬಿತ್ತನೆ ಬೀಜ” ವಿತರಣೆ, ಹಾಗೂ ಇತ್ತೀಚಿಗೆ “ಬಣವೆ ಸುಟ್ಟ”ರೈತರಿಗೆ ಪರಿಹಾರ ವಿತರಿಸಿದರು.
ವರದಿ – ಚಲುವಾದಿ ಅಣ್ಣಪ್ಪ