ನಾಗರಾಜ ಮೇಲಿನಮನಿ ಇವರ ನೇತೃತ್ವದಲ್ಲಿ ಶಿವನಗೌಡ ನಾಯಕ ಅವರ ಗೆಳೆಯರ ಬಳಗ ಹಾಗೂ ಅಭಿಮಾನಿ ಬಳಗದವತಿಯಿಂದ ಕುಷ್ಠಗಿ ಪಟ್ಟಣದಲ್ಲಿ ಅನ್ನ ಸಂತರ್ಪಣೆ ಕಾರ್ಯ.
ಅನ್ನದಾನ ಶ್ರೇಷ್ಠದಾನ ಎಂಬ ನಾನ್ನುಡಿ ಇದೆ. ಅನ್ನವೇ ಬ್ರಹ್ಮ ಎಂಬ ಮಾತಿದೆ. ಅನ್ನದಾನ ಮಹಾದಾನ ಅಂದರೆ ಅನ್ನವೇ ದೇವರು, ಅನ್ನಕ್ಕಿಂತ ಮಿಗಿಲಾದ ದೇವರಿಲ್ಲ ಎಂದು , ಹೀಗಾಗಿಯೇ 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಶ್ರೀ ಬಸವಣ್ಣ ಅಕ್ಷರ ದಾಸೋಹದ ಜೊತೆ ಅನ್ನದಾಸೋಹ ನಡೆಸಿದ್ದರು. ಅವರ ಹಾದಿಯಲ್ಲಿ ಸಾಗುತ್ತಿರುವ. ಶ್ರೀನಾಗರಾಜ ಮೇಲಿನಮನಿ ಇವರ ನೇತೃತ್ವದಲ್ಲಿ ಸತತ ಎಂಟು ದಿನಗಳಿಂದ ಈ ಅನ್ನ ಸಂತರ್ಪಣೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು. ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿ ನಾಗರಾಜ ಮೇಲಿನಮನಿ ಇವರ ನೇತೃತ್ವದಲ್ಲಿ ಶಿವನಗೌಡ ನಾಯಕ ಅವರ ಗೆಳೆಯರ ಬಳಗ ಹಾಗೂ ಅಭಿಮಾನಿ ಬಳಗದವತಿಯಿಂದ ಅನ್ನ ಸಂತರ್ಪಣೆ ಕಾರ್ಯವು ಬೆಳಗಿನ ಜಾವ ಉಪ ಆಹಾರ ಮತ್ತು ಮದ್ಯಾಹ್ನ ಬೇರೆ ಬೇರೆ ತರಹದ ಊಟದ ವ್ಯವಸ್ಥೆ ಮಾಡಲಾಗಿದ್ದು, ಕುಷ್ಟಗಿ ಪಟ್ಟಣದ ಕಡು/ಬಡವರಿಗೆ ಹಾಗೂ ಆಸ್ಪತ್ರೆಯಲ್ಲಿ ಇರುವ ರೋಗಿ ಹಾಗೂ ಅವರ ಸಂಬಂದಿಕರಿಗೆ, ಇದರ ಜೊತೆ ಜೊತೆಗೆ ವಾಹನದ ಸಂಚಾರಿಕರಿಗೂ ಹಾಗೂ ವಾಹನ ಚಾಲಕರಿಗೆ ಉಪ-ಆಹಾರ ಮತ್ತು ಊಟದ ವ್ಯವಸ್ತೆ ಮಾಡಲಾಗಿದೆ. ಪ್ರತಿ ದಿನ ಎರಡು ನಗರಗಳಲ್ಲಿ ಪಟ್ಟಣದ ಶರೀಪ್ ನಗರ, ಗಾಂಧಿನಗರ, ಅಂಬೇಡ್ಕರ ನಗರ, ಇತ್ಯಾಧಿನಗರಗಳಲ್ಲಿ ವಾಸಿಸುವ ಕಡು/ಬಡವರು ಹಾಗೂ ನೀರ್ಗತಿಕರಿಗೆ ಬೆಳಗಿನ ಜಾವದಲ್ಲಿ ಸುಮಾರು ನಾಲ್ಕು ನೂರರಿಂದ ಐದು ನೂರು ಜನರಿಗೆ ಉಪ-ಆಹಾರದ ವ್ಯವಸ್ಥೆ ಜೊತೆಗೆ ಮದ್ಯಾಹ್ನ ಸುಮಾರು ಒಂದು ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸದರಿ ಕಾರ್ಯಕ್ರಮವು ಶಿವನಗೌಡ ನಾಯಕ ಅವರ ಗೆಳೆಯರ ಬಳಗ ಹಾಗೂ ಅವರ ಅಭಿಮಾನಿ ಬಳಗದವತಿಯಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇಡೀ ವಿಶ್ವವೇ ವಿಜ್ಞಾನ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಪ್ರಪಂಚವೇ ಅನ್ನದಿಂದ ಆಧಾರಿಸಲ್ಪಟ್ಟಿದೆ, ಆದ್ದರಿಂದ ಅನ್ನವನ್ನು ವ್ಯರ್ಥ ಮಾಡಬಾರದು ಎಂದು ಶ್ರೀ ನಾಗರಾಜ ಮೂಲಿಮನಿಯವರು ತಿಳಿಸಿದರು. ಶ್ರೀನಾಗರಾಜ ಮೇಲಿನಮನಿ ಇವರ ನೇತೃತ್ವದಲ್ಲಿ ಬಾಳಪ್ಪ ಬೇವಿನಕಟ್ಟಿ, ಗಿರೀಶ ದೀವಾಣಜಿ, ರವೀ ಕುಮಾರ ಸೀಪಿನಕಟ್ಟಿ, ಸೇರಿದಂತೆ ಹಲವಾರು ಬಾಲ್ಯದ ಸ್ನೇಹಿತರು ಇತರರು ಇದ್ದರು. ಒಟ್ಟಿನಲ್ಲಿ ಇವರ ಕಾರ್ಯಕ್ಕೆ ನೊಂದ ಹಾಗೂ ಹಸಿದ ಜೀವ ರಾಸಿಗಳಿಂದ ದೊರೆತ ಬಹುಮಾನ ಇವರಿಗೆ ಇವರ ಕುಟುಂಬ ಸಕಲ ಸುಖಃ/ಸಂಪತ್ತು ಆರೋಗ್ಯ ಆ ಭಗವಂತ ಸದಾ ಇವರುಗಳಿಗೆ ನೀಡಲಿ ಎಂದರು. ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಇವರುಗಳಿಗೆ ಅನಂತ ಅನಂತ ನಮನಗಳು ಸಲ್ಲಿಸುತ್ತೆವೆ ಜೋತೆಗೆ ಇವರ ಕಾರ್ಯ ಹಿಗೇ ಸದಾ ಮುಂದುವರೆಯಲೆಂದು ನಮ್ಮ ಆಶಯ.
ವರದಿ – ಮಂಜುನಾಥ ಎಸ್.ಕೆ