ಬಡ/ನಿರ್ಗತೀಕರಿಗೆ 16000 ಸಾವಿರ ಆಹಾರದ ದಿನಸಿ ಕಿಟ್ ಕೊಡಲು ಮುಂದಾದ ಕುಷ್ಟಗಿ ಜನಪ್ರೀಯಾ ಶಾಸಕರು
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮಾನ್ಯ ಜನ ಪ್ರೀಯಾ ಶಾಸಕರಾದ ಶ್ರೀ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪುರರವರು ಸ್ವಂತ ತಮ್ಮ ಖರ್ಚಿನಿಂದ ಕುಷ್ಟಗಿ ತಾಲೂಕಿನ ಕುಟುಂಬದವರಿಗೆ ಒಟ್ಟು 16000 ಆಹಾರ ದಿನಸಿ ಕಿಟ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ತಹಶೀಲ್ದಾರ ಮೂಲಕ ತಾಲೂಕಿನಾದ್ಯಂತ ಕಿಟ್ ವಿತರಣೆ ಮಾಡುತ್ತೇವೆ. ಈ ಸದ್ಯ 2000 ಆಹಾರಕ್ಕೆ ದಿನಸಿ ಕಿಟ್ಟನ್ನು ತಹಶೀಲ್ದಾರ ಇವರಿಗೆ ಒಪ್ಪಿಸಲಾಗಿದೆ .ಇನ್ನು ಮೂರು ದಿನದೊಳಗಾಗಿ ಒಟ್ಟು 7 ಸಾವಿರ ಕಿಟ್ ನೀಡುತ್ತೇವೆ ಎಂದು ಮಾಜಿ ಶಾಸಕ ಹಸೇನ ಸಾಬ ದೋಟಿಹಾಳ ತಿಳಿಸಿದರು. ಇಂದು ಕುಷ್ಟಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಇಂದು ತೆರಳಿ 2000 ಕಿಟ್ ನ್ನು ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಕುಷ್ಟಗಿ ಪಟ್ಟಣದ ಪ್ರತಿ ಒಂದು ವಾರ್ಡುಗಳಿಗೆ ತೆರಳಿ ಕಡುಬಡವರನ್ನು ಗುರುತಿಸಿ ಆಹಾರದ ದಿನಸಿ ಕಿಟ್ ನೀಡಲಾಗಿದೆ ಎಂದರು. ಬಡವರ ಹಸಿವನ್ನು ನೀಗಿಸಲು ಕಾಂಗ್ರೆಸ್ ಪಕ್ಷದ ಪರವಾಗಿ ವಯಕ್ತಿಕವಾಗಿ ಶಾಸಕರು ಮುಂದಾಗಿದ್ದಾರೆ.ಮುಂದಿನ ದಿನಮಾನದಲ್ಲಿ ಬಡವರಿಗೆ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕುಷ್ಟಗಿ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಇಮಾಮ್ ಸಾಬ ಗರಡಿಮನಿ, ಬಸವರಾಜ ಬಂಡೇರ್, ಬಸವರಾಜ ಬಳೂಟಗಿ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ