ಕರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವ : ಕಾಂಗ್ರೆಸ್ ಮುಖಂಡ ಅಮ್ಜದ್ ಸೆಟ್
ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಕರೋನಾ ಎಂಬುವುದು ಸಾಂಕ್ರಾಮಿಕ ರೋಗ ನಿಜ ಆದರೆ ಸರಕಾರದ ನೀತಿ ನಿಯಮಗಳಾದ ಮಾಸ್ಕ್. ಸ್ಯಾನಿಟೈಸರ್. ಮುಖ, ಕವಚ ಹಾಗೂ ಸಾಮಾಜಿಕ ಅಂತರ ಪಾಲಿಸುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಹಟ್ಟಿ ಕಾಂಗ್ರೆಸ್ ಮುಖಂಡ ಅಮ್ಜದ್ ಸೆಟ್ ಹೇಳಿದರು. ಪಟ್ಟಣದ ಅನ್ವರಿ ಕ್ರಾಸ್ ಹತ್ತಿರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಅವರು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿ ಅವರು ಮಾತನಾಡಿದರು ದೇಶದಲ್ಲಿನ ಎರಡನೇ ಅಲೆ ಅತಿ ದೊಡ್ಡ ಪ್ರಮಾಣದ ಕರೋನಾ ಸಾಂಕ್ರಾಮಿಕ ರೋಗ ಹರಡುವಿಕೆ ಪರಿಣಾಮ ಸಾಕಷ್ಟು ಸಾವು ಸಂಭವಿಸಿದ್ದರಿಂದ ಲಾಕ್ ಡೌನ್ ಘೋಷಿಣೆ ಮಾಡಿದೆ ಅಲ್ಲದೆ ಸರ್ಕಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅನೇಕ ರೀತಿಯ ಪ್ರಯತ್ನದಲ್ಲಿ ಸಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಾರುತಿ. ದರವೇಶ್ ಮೌನೇಶ್. ರಾಮು. ವೆಂಕಟೇಶ್. ಖಲೀಫ್ ಮತ್ತು ತಿರುಪತಿ ಇತರರು ಇದ್ದರು
ವರದಿ – ಆನಂದ್ ಸಿಂಗ್ ಕವಿತಾಳ