ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಚ್ಚೊಳ್ಳಿ
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಚ್ಚೊಳ್ಳಿ, ಶ್ರೀ ಬಸವೇಶ್ವರ ಶಾಖೆ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ದಿನಾಚಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲೂಕು ಯುವ ಮೋರ್ಚಾ B.J.P ಅಧ್ಯಕ್ಷರಾದ ಶ್ರೀ M.S ಸಿದ್ದಪ್ಪ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು..ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ K. ಮಂಜುಳ ನುಡಿದರು.ಆಮ್ಲಜನಕ ಕೊಡುವ ನಿಟ್ಟಿನಲ್ಲಿ ಮರ ಗಿಡಗಳ ಪಾತ್ರ ಮಹತ್ವದ್ದು ನಮ್ಮ ಮುಂದಿನ ಪೀಳಿಗೆ ಗಳ ಆರೋಗ್ಯಕ್ಕಾಗಿ ಇಂದು ಪ್ರತಿಯೊಬ್ಬ ನಾಗರಿಕರು ಮರ ಗಿಡಗಳನ್ನು ಬೆಳೆಸಿ ಅವುಗಳನ್ನ ಸಂರಕ್ಷಿಸ ಬೇಕು ಎಂದು ವೈದ್ಯಾಧಕಾರಿಗಳಾದ ರೋಹಿಣಿ ಮೇಡಂ ಅಭಿಪ್ರಾಯ ಪಟ್ಟರು,ನನ್ನ ಎಲ್ಲಾ ರೈತ ಬಾಂಧವರು ಅರಣ್ಯ ಕೃಷಿ ಪದ್ಧತಿ ಯನ್ನು ಅನುಸರಿಸಿ ಇಳುವರಿಯ ಜೊತೆಗೆ ಪರಿಸರಕ್ಕೆ ಆಮ್ಲಜಕದ ಕೊಡುಗೆ ನೀಡಬೇಕು ಎಂದು ಕಂದಾಯ ಅಧಿಕಾರಿಗಳಾದ ಶ್ರೀ ಮಲ್ಲೇಶ ಸರ್ ನುಡಿದರು.. ಶ್ರೀ ಶಿವರಾಮ ಗೌಡ.H, ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷರು, ಶ್ರೀ ಸಿಂಗ್ರಿ ಮುದುಕಪ್ಪ T.S,ತಾಲೂಕು ಪಂಚಾಯಿತಿ ಸದಸ್ಯರು,T.S ಕುಡ್ಲೂರು, ಶ್ರೀ ಜ್ಞಾನರೆಡ್ಡಿ ಗೌಡ,ಶ್ರಿ H.ಚನ್ನಬಸವನ ಗೌಡ, ಶ್ರೀಮಲ್ಲಿಕಾರ್ಜುನ ಗೌಡ.H, ಶ್ರೀH.S ವೀರಭದ್ರ ಸೌಕಾರ ಶ್ರೀ ನಾಗರಾಜ್ ತಳವಾರ್ ಯಾದವ್ ಜಿಲ್ಲಾಧ್ಯಕ್ಷರು ಯಾದವ ಯುವ ವೇದಿಕೆ ಇನ್ನಿತರ ಊರಿನ ಮುಖಂಡರು ಹಾಗೂ ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀ ರಾಜ ಕುಮಾರ್ ಹಾಗೂ ಶ್ರೀ ವೀರುಪಣ್ಣ ಬೋವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅದೇರೀತಿ ಯಾಗಿ ತಾಲೂಕು ಬಿಜೆಪಿ ಯುವ ಮೋರ್ಚಾ ಖಜಾಂಚಿ ಶ್ರಿ ಕಲ್ಲೂರು ಅಯ್ಯಪ್ಪ ನಾಯಕ್, ಹಚ್ಚೊಳ್ಳಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ತುಳುಜಾ ರಾಮ್ ಸಿಂಗ್ ಇದ್ದರು. ಕಾರ್ಯಕ್ರಮವನ್ನು ಭೀಮಸೇನ್ ನಿರೂಪಿಸಿದರು,ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಶರಣಬಸವ ಸೌಕಾರ್ ನವಲಿ ಸ್ವಾಗತಿಸಿದರು, ಶ್ರೀ ರಾಮಕೃಷ್ಣ ಯಾದವ್ ವಂದಿಸಿದರು,ಗ್ರಾಮದ ಎಲ್ಲಾ R.S.S ಸ್ವಯಂ ಸೇವಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ – ಸಂಪಾದಕೀಯ