ಪ್ರತಿ ಪ್ರಜೆಗೂ 9ನೇ ತಿಂಗಳೊಳಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಿ, 3ನೇ ಕೋವಿಡ್ ಅಲೆಯಿಂದ ಕರ್ನಾಟಕವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕ.ರ.ವೇ ಮಸ್ಕಿ ತಾಲೂಕಾಧ್ಯಕ್ಷ ದುರಗರಾಜ್ ವಟಗಲ್ ಆಗ್ರಹ..!
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು (ಜೂ.10) ಬೆಳಿಗ್ಗೆ 9.10 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಸಾವಿರಾರು ಪ್ರತಿಭಟನೆಗಳನ್ನು ನಡೆಸಲಿದ್ದು, ಜಿಲ್ಲೆಯಲ್ಲೂ ಸಹ ಕರವೇ ಕಾರ್ಯಕರ್ತರು ತಮ್ಮ ಮನೆಗಳ ಮುಂದೆ ಸರಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಮೂಲಕ ನೂರಾರು ಪ್ರತಿಭಟನೆಗಳು ನಡೆದವು ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರವೇ ಮೂವತ್ತು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ, ವಾಸ್ತವದಲ್ಲಿ ಕರೋನಾದಿಂದ ಸತ್ತವರ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ. ಮೂರನೇ ಅಲೆಯನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲ, ಹೀಗಾಗಿ ತ್ವರಿತಗತಿಯಲ್ಲಿ ಲಸಿಕೆ ಕೊಡುವ ಕಾರ್ಯ ನಡೆಯಬೇಕು ಎಂದು ವೇದಿಕೆ ಕಾರ್ಯಕರ್ತರು ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳನ್ನು ಒತ್ತಾಯಿಸಿದರು ಜೂ.10ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಜನ್ಮದಿನವಾಗಿದ್ದು, ಕರವೇ ಕಾರ್ಯಕರ್ತರು ಜನಸಾಮಾನ್ಯರ ಜೀವ ರಕ್ಷಣೆಯ ಹಕ್ಕೊತ್ತಾಯವನ್ನು ಇಟ್ಟುಕೊಂಡು ‘ಪ್ರತಿಭಟನಾ ದಿನ’ ವನ್ನಾಗಿ ಆಚರಿಸಲಾಗುತ್ತದೆ
- ಉಚಿತ ಲಸಿಕೆ* ರಾಜ್ಯದ ಎಲ್ಲ ನಾಗರಿಕರಿಗೂ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಉಚಿತವಾಗಿಯೇ ಲಸಿಕೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣಕ್ಕೆ ಸಿಗುವ ಲಸಿಕೆಯಿಂದಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿಯೇ ಲಸಿಕೆ ನೀಡಬೇಕು. ಹಲವಾರು ದೇಶಗಳಲ್ಲಿ ಯಾವ ರೀತಿ ಒಂದೇ ಒಂದು ಲಸಿಕೆಯನ್ನು ಮಾರಾಟಕ್ಕೆ ಇಟ್ಟಿಲ್ಲವೋ ಹಾಗೆಯೇ ಭಾರತದಲ್ಲೂ ಸಹ ಲಸಿಕೆ ಮಾರಾಟದ ವಿಷಯವಾಗಬಾರದು. ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ನೀಡಿರುವ ಶೇ 25 ರಷ್ಟು ವ್ಯಾಕ್ಸಿನ್ ಕೊಳ್ಳುವ ಅವಕಾಶವನ್ನು ರದ್ದುಗೊಳಿಸಿ, ನೂರಕ್ಕೆ ನೂರು ಲಸಿಕೆಗಳು ಉಚಿತವಾಗಿಯೇ, ಸರ್ಕಾರದಿಂದಲೇ ನೀಡಬೇಕು.
- ಕಾಲಮಿತಿಯೊಳಗೆ ಲಸಿಕೆ ಕೋವಿಡ್ ಮೂರನೇ ಅಲೆ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಲಸಿಕೆಗಳನ್ನು ಕರ್ನಾಟಕದ ಸಮಸ್ತ ಜನತೆಗೆ ನೀಡಬೇಕು. ಜೂನ್ ಅಂತ್ಯದೊಳಗೆ ಮೊದಲನೇ ಡೋಸ್ ನೀಡಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ನೀಡಿ, ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಬೇಕು. ಲಸಿಕೆ ಇಲ್ಲದೆ ಜನರು ಸಾಯುವಂಥ ಸ್ಥಿತಿಯನ್ನು ನಿರ್ಮಾಣ ಮಾಡಬಾರದು.
- ಮನೆಮನೆಗೆ ಲಸಿಕೆ ಸರ್ಕಾರ ಕೂಡಲೇ ಚುನಾವಣೆ ಸಂದರ್ಭದ ಮತದಾನ ಬೂತ್ ಗಳ ಮಾದರಿಯಲ್ಲಿ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಬೇಕು. ನೂಕುನುಗ್ಗಲು, ಜನದಟ್ಟಣೆ ಆಗದಂತೆ ಎಲ್ಲ ನಾಗರಿಕರು ಸುಲಭವಾಗಿ ವ್ಯಾಕ್ಸಿನ್ ಪಡೆಯುವಂಥ ಸ್ಥಿತಿ ನಿರ್ಮಾಣ ಮಾಡಬೇಕು. ಸಾಧ್ಯವಾದರೆ ಮನೆಮನೆಗೂ ತೆರಳಿ ಲಸಿಕೆ ನೀಡುವಂಥ ವ್ಯವಸ್ಥೆ ಜಾರಿಗೊಳಿಸಬೇಕು. ಲಸಿಕೆ ನೀಡಿಕೆಗೆ ಸರ್ಕಾರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಸ್ಮಾರ್ಟ್ ಫೋನ್ ಇಲ್ಲದ, ರಿಜಿಸ್ಟ್ರೇಷನ್ ಮಾಡಿಸಲು ಗೊತ್ತಾಗದ ಹಳ್ಳಿಗಾಡಿನ ಜನರ ಸಮಸ್ಯೆ ನೀಗಿಸಬೇಕು.
- ತಾರತಮ್ಯವಿಲ್ಲದ ಲಸಿಕೆ ಒಕ್ಕೂಟ ಸರ್ಕಾರ ಮೊದಲ ಹಂತದ ಲಸಿಕೆ ಹಂಚಿಕೆಗಳಲ್ಲಿ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಹಂಚಿಕೆ ಮಾಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಿರುವುದು ಅಂಕಿಅಂಶಗಳಲ್ಲಿ ಬಯಲಾಗಿದೆ. ಒಕ್ಕೂಟ ಸರ್ಕಾರ ಆಕ್ಸಿಜನ್, ವೆಂಟಿಲೇಟರ್, ರೆಮ್ಡಿಸಿವಿರ್, ಆಂಫೋಟೆರಿಸಿನ್ ಬಿ ಇತ್ಯಾದಿಗಳ ಹಂಚಿಕೆ ಸಂದರ್ಭದಲ್ಲೂ ಕರ್ನಾಟಕದ ಪಾಲನ್ನು ಕಡಿಮೆ ಮಾಡಿ, ಗುಜರಾತ್ ಮತ್ತು ಉತ್ತರದ ರಾಜ್ಯಗಳಿಗೆ ಹೆಚ್ಚು ನೀಡಿದೆ. ಈ ತಾರತಮ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೂನ್ 21 ರಿಂದ ಒಕ್ಕೂಟ ಸರ್ಕಾರ ನೀಡುವ ಲಸಿಕೆಗಳು ವೈಜ್ಞಾನಿಕವಾಗಿ, ಜನಸಂಖ್ಯೆ ಆಧರಿಸಿ ಹಂಚಿಕೆಯಾಗಬೇಕು. ಈ ಎಲ್ಲ ಹಕ್ಕೊತ್ತಾಯಗಳನ್ನು ಮುಂದಿಟ್ಟು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲೆಯ ತಮ್ಮ ಮನೆಗಳ ಮುಂದೆ ಪ್ರತಿಭಟಿಸಿ. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ನೂರ್ ಮುಹಮ್ಮದ್ , ಸದ್ದಾಂ ಹುಸೇನ್ ಮೌನೇಶ್ ಹೀರೆಮನಿ ಇತರರು ಉಪಸ್ಥಿತರಿದ್ದರು.
- ವರದಿ – ಸಂಪಾದಕೀಯ