ಅನಾಥ 50 ಮಕ್ಕಳ ಜವಾಬ್ಧಾರಿ ಹೊತ್ತ ಪೊಲೀಸ್ ಪೇದೆ ರೆಹನಾ ಶೇಖ್
ನವದೆಹಲಿ ಕರೋನವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಮಾನವೀಯತೆಯ ಸಹಕಾರವನ್ನು ಮಾಡಿ ಅನೇಕರ ಹೃದಯಗಳನ್ನು ಗೆದ್ದ 40 ವರ್ಷದ ಮಹಿಳೆ ಮತ್ತು ವೃತ್ತಿಯಲ್ಲಿ ಒಬ್ಬ ಪೋಲೀಸ್ ಪೇದೆ ರೆಹಾನಾ ಶೇಖ್ ಅವರಿಗೆ ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ. ಆಕೆಯನ್ನು ಪತಿ ಸೇರಿದಂತೆ ಸ್ಥಳೀಯರು ಮದರ್ ತೆರೇಸಾ ಎಂದು ಕರೆಯುತ್ತಾರೆ. ಇವರು 50 ಶಾಲಾ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು, 10 ನೇ ತರಗತಿಯನ್ನು ತಲುಪುವವರೆಗೆ ಓದಿಸುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ವೈದ್ಯಕೀಯ ಆಮ್ಲಜನಕ, ಪ್ಲಾಸ್ಮಾ, ರಕ್ತ ಮತ್ತು ಹಾಸಿಗೆಗಳನ್ನು ಪೂರೈಸುವಲ್ಲಿ ಜನರಿಗೆ ಸಕ್ರಿಯವಾಗಿ ಸಹಾಯ ಮಾಡಿದ್ದಾರೆ. ಮುಂಬೈನಲ್ಲಿ ಕೋವಿಡ್ ಪರಿಸ್ಥಿತಿ ಇರುವಾಗ ಅಗತ್ಯವಿರುವವರಿಗೆ ಸಹಾಯ ಮಾಡುವಲ್ಲಿ ಅವರ ಪಾತ್ರವನ್ನು ಗುರುತಿಸಿದ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್ ಅವರ ಪೇದೆಗೆ ಗೌರವ ಸಲ್ಲಿಸಿದ್ದಾರೆ. ಕಳೆದ ವರ್ಷ ನನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಹೊರಟಿದ್ದೆವು. ನನ್ನ ಮಗಳ ಹುಟ್ಟುಹಬ್ಬ ಮತ್ತು ಈದ್ ಶಾಪಿಂಗ್‌ಗಾಗಿ ಉಳಿಸಿದ ಹಣವನ್ನು ಶಾಲಾ ಮಕ್ಕಳಿಗೆ ನೀಡಿದ್ದೇವೆ ಎಂದು ರೆಹಾನ ತಂದೆ ಹೇಳುತ್ತಾರೆ 2000ನೇ ಇಸವಿಯಲ್ಲಿ ಪೊಲೀಸ್ ಪಡೆಗೆ ಕಾನ್‌ಸ್ಟೆಬಲ್ ಆಗಿ ಸೇರಿಕೊಂಡಿದ್ದ ರೆಹಾನಾ ಶೇಖ್. ವಾಲಿಬಾಲ್ ಆಟಗಾರ್ತಿ ಮತ್ತು ಕ್ರೀಡಾಪಟು ಕೂಡ ಹೌದು. ಅವರು 2017 ರಲ್ಲಿ ಕ್ರೀಡೆಗಳಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಶ್ರೀಲಂಕಾದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಕೂಡ ರೆಹನಾ ಭಾಗವಹಿಸಿದ್ದಾರೆ.
ವರದಿ – ಸಂಪಾದಕೀಯ