ರಾಯಚೂರು ಜಿಲ್ಲೆಯ ಪ್ರತಿ ತಾಲೂಕಾ ಕೇಂದ್ರಗಳಲ್ಲಿ ಮಕ್ಕಳ ಕೋವಿಡ ಸೇಂಟರ ಸ್ಥಾಪನೆ,ಶಶಿಕಲಾ ಜೋಲ್ಲೆ
ರಾಯಚೂರು ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಮಕ್ಕಳ ಕೊವಿಡ್ ಸೆಂಟರ್ ಗಳ ಪ್ರಾರಂಭ ಮಾಡಲು ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು. ಸಿಂಧನೂರು ಜೂ 12 ತಾಲೂಕ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಕೊವಿಡ್ ಸೆಂಟರ್ ಗಳನ್ನು ಆರಂಭಿಸಲಾಗುವದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ತಾಲುಕಿನ ಜವಳಗೇರಾ ಗ್ರಾಮದಲ್ಲಿ ಶಾಸಕ ವೆಂಕಟರಾವ್ ನಾಡಗೌಡರ ನಿವಾಸದಲ್ಲಿ ಮಾತನಾಡಿದ ಅವರು ಕೊರೊನಾ ಮೂರನೇ ಅಲೆಯ ಸಂಭವ ದಲ್ಲಿ ಚಿಕ್ಕ ಮಕ್ಕಳಿಗೆ ಹೆಚ್ಚು ಪರಿಣಾಮವನ್ನುಂಟು ಮಾಡುತ್ತಿದ್ದು ಮುಂಜಾಗ್ರತೆಯಾಗಿ ಪ್ರತಿ ತಾಲುಕ ಕೇಂದ್ರಗಳಲ್ಲಿ ಮಕ್ಕಳ ಕೊವಿಡ್ ಸೆಂಟರ್ ಗಳನ್ನು ಪ್ರಾರಂಭಿಸಲು ನಿರ್ಧಾರ ಮಾಡಲಾಗಿದೆ. ಚಿಕ್ಕ ಮಕ್ಕಳ ಕೊವಿಡ್ ಸೆಂಟರ್ ನಲ್ಲಿ 600 ಬೆಡ್ ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಹಾಗೂ ಕೊರೊನಾ ದಿಂದ ತಂದೆ-ತಾಯಿ ಇಬ್ಬರೂ ಮರಣಹೊಂದಿ ಅನಾಥವಾದಂತಹ 30 ಮಕ್ಕಳನ್ನು ರಕ್ಷಣೆ ಮಾಡುತ್ತೆವೆ ಹಾಗೂ ಚಿಕ್ಕ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು 100 ಅಂಗನವಾಡಿ ಕೇಂದ್ರಗಳನ್ನು ಹೈಟೆಕ್ ಅಂಗನವಾಡಿ ಕೇಂದ್ರಗಳನ್ನಾಗಿ ಮಾಡಲಾಗಿದೆ ಎಂದರು. ತಾಲುಕಿನ ಗೋರೆಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಲಯ್ಯ ಕ್ಯಾಂಪ್ ನಲ್ಲಿ ನರೇಗಾ ಕೆಲಸದಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನು ಬಳಸಿಕೊಂಡಿದ್ದಾರೆಂಬ ವಿಷಯದ ಕುರಿತು ಪ್ರತಿಕ್ರಿಯಿಸಿದ ಸಚಿವರಾದ ಶಶಿಕಲಾ ಜೊಲ್ಲೆ ಅವರು ಅದು ಕಾನೂನು ಬಾಹಿರವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಬದ್ದ ಕ್ರಮ ಜರುಗಿಸುವಂತೆ ಸಿ.ಇ.ಒ ಅವರಿಗೆ ತಿಳಿಸಿದ್ದಾನೆ ಎಂದರು. ಜವಳಗೇರಾ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ – 3 ಹೈಟೆಕ್ ಕೇಂದ್ರಕ್ಕೆ ಬೇಟಿ ನೀಡಿದ ಸಚಿವರು ಮಕ್ಕಳು ಆನ್ ಲೈನ್ ಮೂಲಕ ಕಲಿಕೆ ,ಆಟ ಆಡುವದು ,ವಿವಿಧ ಕಲಿಕಾ ಚಟುವಟಿಕೆಗಳನ್ನು ಟಿ.ವಿ ಗಳಲ್ಲಿ ನೋಡುವುದರ ಜೊತೆಗೆ ಕಲಿಯುವಂತಾಗುತ್ತದೆ ಎಂದರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕಲಿಯಲು ಈ ಮಕ್ಕಳಿಗೆ ಸಹಾಯವಾಗುತ್ತದೆಂಬುದನ್ನು ಸ್ವತಃ ಸಚಿವರು ಹಾಗೂ ಶಾಸಕ ವೆಂಕಟರಾವ್ ನಾಡಗೌಡರು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಸಂಸದರು, ಸಿಡಿಪಿಒ ಗಳು ,ಸೇರಿದಂತೆ ಇತರರು ಬಾಗವಹಿಸಿದ್ದರು.
ವರದಿ – ಸಂಪಾದಕೀಯ