ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಪಂ ಅಂಗಳದಲ್ಲಿಯೇ ನೀರು ಪೋಲು
ಬಣವಿಕಲ್ಲು ಗ್ರಾಪಂ ಅಂಗಳದಲ್ಲಿಯೇ ನೀರು ಪೋಲು-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಣವಿಕಲ್ಲು ಗ್ರಾಪಂ ಕಚೇರಿ ಅಂಗಳದಲ್ಲಿ, ನೀರು ಪೂರೈಸಿರುವ ಪೈಪ್ ಒಡೆದು ವರ್ಷಗಳೇ ಆಗಿದ್ದು ನೀರು ಪೋಲಾಗುತ್ತಿದೆ ಈವರೆಗೂ ದುರಸ್ಥಿಗೊಳಿಸುತ್ತಿಲ್ಲ.ಗ್ರಾಪಂ ಅಂಗಳದಲ್ಲಿರುವ ನೀರಿನ ಟ್ಯಾಂಕ್ ಸೋರುತ್ತಿದ್ದು ಟ್ಯಾಂಕ್ ಬುಡದಲ್ಲಿ ನೀರುನಿಂತು ತ್ಯಾಜ್ಯ ನೆನೆದು ದುರ್ನಾಥ ಬೀರುತ್ತಿದೆ,ಕೆಸರು ಗದ್ದೆಯಾಗಿದ್ದು ಟ್ಯಾಂಕ್ ಪಿಲ್ಲರ್ ಗಳು ನೀರು ನಿಂತು ಶಿಥಿಲಾವಸ್ಥೆಯಲ್ಲಿವೆ. ಸರ್ಕಾರ ನೀರು ಉಳಿಸಿ ಎಂದು ಬೊಬ್ಬೆ ಹೊಡೆಯುತ್ತಿದೆ,ಜನತೆಗೆ ನೀರು ಉಳಿಸುವ ಜಾಗೃತಿ ಮೂಡಿಸುವಂತಹ ಗುರುತರ ಜವಾಬ್ದಾರಿ ಹೊತ್ತಿರುವ ಗ್ರಾಪಂ ಅಧಿಕಾರಿಗಳು,ತಮ್ಮ ಕಚೇರಿ ಆವರಣದಲ್ಲಿಯೇ ವರ್ಷದಿಂದ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ಸರಿಪಡಿಸಿಲ್ಲ. ಬಣವಿಕಲ್ಲು ಗ್ರಾಮ ಗಳಳಲ್ಲಿನ ಕಾಲುವೆಗಳು ಕಸ ತ್ಯಾಜ್ಯ ಹಾಗೂ ನೀರು ತುಂಬಿ ನಾರುತ್ತಿವೆ,ಸೊಳ್ಳೆಗಳು ಎತೇಚ್ಚವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.ಫಾಗಿಂಗ್ ಮಾಡಿಸಿಲ್ಲ ಡಿಟಿಪಿ ಸಿಂಪಡಿಸಿಲ್ಲ ಕೊರೋನಾ ರೋಗ ಭೀತಿಯ ಸಂದರ್ಭದಲ್ಲಿ,ಯಾವುದೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಗ್ರಾಪಂ ಅಧಿಕಾರಿ ಕೈಗೊಂಡಿಲ್ಲ.ಸೌಕರ್ಯಗಳು ಕೇವಲ ರಾಜಕಾರಣಿಗಳ ಜನಪ್ರತಿನಿಧಿಗಳ ಮನೆಯಂಗಳಕ್ಕೆ ಸೀಮಿತಿವಾಗಿವೆ,ಸಾಮಾನ್ಯರ ಮನೆಯಂಗಳ ತಲುಪುತಿಲ್ಲ ಬೀದಿ ದೀಪಗಳು ಸಮರ್ಪಕವಾಗಿ ಅಳವಡಿಸುತ್ತಿಲ್ಲ ಎಂದು ಯುವಕರು ದೂರಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಸಹ ಕಾಳಜಿ ತೋರಿಲ್ಲ, ಕೇವಲ ಪ್ರಚಾರಕ್ಕೆ ಜನಪ್ರತಿನಿಧಿಗಳು ಸೀಮಿತವಾಗಿದ್ದಾರೆಂದು ತಿಳಿದುಬರುತ್ತಿದೆ. ಶೀಘ್ರವೇ ನೀರು ಪೋಲಾಗುವುದನ್ನು ನಿಲ್ಲಿಸಬೇಕಿದೆ ನಿರ್ಲಕ್ಷ್ಯ ತೋರಿದ್ದಲ್ಲಿ ಜಿಪಂ ಮು ಕಾರ್ಯನಿರ್ವಹಣಾಧಿಕಾರಿ ಗಳಿಗೆ ದೂರು ನೀಡಲಾಗುವುದೆಂದು, ಬಣವಿಕಲ್ಲು ಗ್ರಾಮದ ಪ್ರಜ್ಞಾವಂತ ಯುವ ಸಮೂಹ ಈ ಮೂಲಕ ಎಚ್ಚರಿಸಿದೆ. ಅನಾರೋಗ್ಯದಲ್ಲಿ ಆರೋಗ್ಯ ಉಪಕೇಂದ್ರ-ಬಣವಿಕಲ್ಲು ಗ್ರಾಪಂಗೆ ಹೊಂದಿ ಕೊಂಡಿರುವ ಉಪ ಆರೋಗ್ಯ ಕೇಂದ್ರ,ತೀರ ಅವ್ಯವಸ್ಥೆಯ ಆಗರವಾಗಿದೆ ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.ಸುತ್ತಲೂ ನೈರ್ಮಲ್ಯತೆ ಮಾಯವಾಗಿದ್ದು ಕ್ರಿಮಿ ಕೀಟಗಳ ಆವಾಸಸ್ಥಾನವಾಗಿದ್ದು,ಉಪ ಆರೋಗ್ಯ ಕೇಂದ್ರ ಅನಾರೋಗ್ಯಕ್ಕೀಡಾಗಿರುವ ದುಸ್ಥಿತಿಯಲ್ಲಿದೆ.ಸಂಬಂಧಿಸಿದಂತೆ ಈ ಕೂಡಲೇ ಸ್ಥಳಕ್ಕೆ ಬೆಟ್ಟಿನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ,ನಿರ್ಲಕ್ಷ್ಯ ತೋರಿದ್ದಲ್ಲಿ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳಲ್ಲಿ ಇಲ್ಲಿಯ ಅವ್ಯವಸ್ಥೆಯನ್ನು ವೀಡಿಯೋ ಸಮೇತ ದೂರು ನೀಡಲಾಗುವುದೆಂದು ಎಚ್ಚರಿಸಿದ್ದಾರೆ.
ವರದಿ – ಚಲುವಾದಿ ಅಣ್ಣಪ್ಪ