ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದ ತಾವರಗೇರಾ ಪಟ್ಟಣದಲ್ಲಿ ಶಾಸಕ ಬಯ್ಯಾಪೂರ ಅಮರೇಗೌಡ ಪಾಟೀಲ್ ರವರ ನೇತೃತ್ವದಲ್ಲಿ ಪ್ರತಿಭಟನೆ.

Spread the love

ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದ ತಾವರಗೇರಾ ಪಟ್ಟಣದಲ್ಲಿ ಶಾಸಕ ಬಯ್ಯಾಪೂರ ಅಮರೇಗೌಡ ಪಾಟೀಲ್ ರವರ ನೇತೃತ್ವದಲ್ಲಿ ಪ್ರತಿಭಟನೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ  ಪಂಪಾ ಪೆಟ್ರೋಲ್ ಬಂಕ್ ಹತ್ತಿರ ಕೇಂದ್ರ ಸರಕಾರ, ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧ ಕುಷ್ಟಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಅಮರೇಗೌಡ ಎಲ್.ಬಯ್ಯಾಪೂರ ಇವರ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು, ಈ ಪೆಟ್ರೋಲ್ ಹಾಗೂ ಡೀಜಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಹಾಗೂ ರೈತ/ಕೂಲಿಕಾರ್ಮಿಕರ ಮೇಲೆ ಬರೆ ಏಳೆದಂತಾಗಿದೆ. ಈ ಕೊರೊನಾದ ಮೊದಲನೇಯ ಅಲೆಗೆ ಹಾಗೂ ಎರಡನೇಯ ಅಲೆಗೆ ಜನರು ತ್ತರಿಸಿದ್ದಾರೆ. ಇತಂಹ ಕಠೀಣ ಪರಿಶ್ಥಿತಿಯಲ್ಲೂ ಪೆಟ್ರೋಲ್ ಹಾಗೂ ಡೀಜಲ್ ಬೆಲೆ ಏರಿಕೆಯಿಂದ ಇನ್ನಷ್ಟು ಜನರು ಈ ಬಾ.ಜ.ಪ ಸರ್ಕಾರದ ವಿರುದ್ದ ಹೋರಾಟ ಕೈಗೊಳ್ಳುವುದು ತಪ್ಪೆನಲ್ಲ. ಯಾವುದೇ ವಸ್ತುವಿನ ಮೇಲೆ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಮೇಲೆ ಪರಿಣಾಮ ಬಿರುತ್ತೆ ಎನ್ನುವ ಪರಿಜ್ಞಾನವು ಇಲ್ಲದ ಸರ್ಕಾರಕ್ಕೆ ಇಂದು ಕಾಂಗ್ರೆಸ್ ಕಡೆಯಿಂದ ರಾಜ್ಯದ್ಯಾಂತ ಹೋರಾಟ ಹಮ್ಮಿಕೊಂಡಿದ್ದು ಇರುತ್ತದೆ. ಈ ಸಂದರ್ಭದಲ್ಲಿ ಉದ್ಯಮಿ ಬಸವನಗೌಡ ಮಾಲಿಪಾಟೀಲ್, ಪ.ಪಂ ಅಧ್ಯಕ್ಷರು ವಿಕ್ರಮ್ ರಾಯ್ಕರ್, ಪ.ಪಂ ಉಪಾಧ್ಯಕ್ಷರಾದ ನಾರಾಯಣಗೌಡ ಮೆದಿಕೇರಿ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ವೀರಭದ್ರಪ್ಪ ನಾಲತವಾಡ, ತಾವರಗೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುದ್ರಗೌಡ ಕುಲಕರ್ಣಿ, ಡಾ. ಶಾಮೀದ್ ದೋಟಿಹಾಳ, ದುರಗೇಶ ನಾರಿನಾಳ, ಲಿಂಗರಾಜ ಹಂಚಿನಾಳ, ಫಯಾಜ್ ಬನ್ನು, ಅಮರೇಶ ಗಾಂಜಿ, ಅಮರೇಶ ಕುಂಬಾರ, ಸಂತೋಷ ಬಿಳೇಗುಡ್ಡ, ಶಾಮೀದ ನಾಡಗೌಡ, ಶಾಮಣ್ಣ ಹುನಗುಂದ್, ರಾಮಣ್ಣ ಭೋವಿ, ಮಂಜು ಕುಂಬಾರ, ಕಲೀಂ ಮುಜಾವರ, ಯೂಥ್ ಕಾಂಗ್ರೆಸ್ ತಾವರಗೇರಾ ಅದ್ಧ್ಯಕ್ಷರು ಶುಕುರ್ ಅಹ್ಮದ್ ಸೇರಿದಂತೆ ಸದಸ್ಯರು ಹಾಗೂ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.

  ವರದಿ –  ಸಂಪಾದಕೀಯ

Leave a Reply

Your email address will not be published. Required fields are marked *