ತಾವರಗೇರಾ ಪಟ್ಟಣದ ಕೋರೋನಾ ವಾರಿಯರ್ಸ್ ಗಳಿಗೆ ಕಿಟ್ ವಿತರಣೆ ಮಾಡಿದ ಹೃದಯವಂತ ಕೊಪ್ಪಳ ಬಿ.ಜೆ.ಪಿ. ಜಿಲ್ಲಾಧ್ಯಕ್ಷರು ಶ್ರೀದೋಡ್ಡನಗೌಡ ಪಾಟೀಲ್.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು ಬಾ.ಜ.ಪ.ದ ಜಿಲ್ಲಾಧ್ಯಕ್ಷರಾದ ಹೃದಯವಂತ ಶ್ರೀದೋಡ್ಡನಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಇವರ ವತಿಯಿಂದ ತಾವರಗೇರಾ ಪಟ್ಟಣದ ಕೋರೋನಾ ವಾರಿಯರ್ಸ್ ಗಳಾದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕ ಧಳದವರಾದ ಮೊದಲಾದ ಇವರುಗಳಿಗೆ ಬಿ.ಜೆ.ಪಿ. ಪಕ್ಷದವತಿಯಿಂದ ಕಿಟ್ ವಿತರಿಸಿದರು. ನಮ್ಮ ದೇಶದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ಜೀವನವನ್ನೆ ಕರೋನ ರೋಗಕ್ಕೆ ಮುಡುಪಾಗಿಟ್ಟು ಸತತವಾಗಿ ಸಾರ್ವಜನಿಕರಿಗೋಸ್ಕರ ಶ್ರಮ ಪಡುತ್ತಿರುವರು ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯವರು ಜೊತೆಗೆ ಗೃಹ ರಕ್ಷಕ ಧಳದವರ ಸೇವೆ ಅನನ್ಯವಾದದ್ದು, ಇವರ ಹಗಲಿರುಳು ಸಲ್ಲಿಸುವ ಸೇವೆಯನ್ನು ಗುರುತಿಸಿ ಕೊಪ್ಪಳ ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಸರಕಾರಿ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಆಹಾರದ ಕಿಟ್ ವಿತರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ.ಯ ಮುಂಖಂಡರಾದ ಶ್ರೀಚಂದ್ರಶೇಖರ ನಾಲತಾವಡ್ ಇವರು ಈ ಕೊರೊನಾದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಅಂದು ಅಟಲ್ ಬಿಹಾರ ವಾಜಪೇಯಿ ಸರ್ಕಾರದ ಸಮಯದಲ್ಲಿ 33 ರೂ/ ಇದ್ದ ಪೆಟ್ರೋಲ್ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಕೇವಲ ಹತ್ತು ವರ್ಷದಲ್ಲಿ 83 ರೂ/ ಪೆಟ್ರೋಲ್ ಬೆಲೆಯನ್ನು ಹೆಚ್ಚು ಮಾಡಿ. ಸುಮಾರು 50 ರೂ/ಹೆಚ್ಚಿಸಿದ್ದು ಕಾಂಗ್ರೆಸಿನ ದುರಂತ. ಈ ನಮ್ ಬಿಜೆಪಿ ಸರ್ಕಾರ ಎಳು ವರ್ಷದಲ್ಲಿ ಕೆವಲ 17 ರೂ ಹೆಚ್ಚಿಸಿದ್ದಕ್ಕಾಗಿ ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಡೊಂಗಿ ನಾಟಕದ ಪ್ರತಿಭಟನೆ ಮಾಡುವದು ಸೂಕ್ತವಲ್ಲ. ಹಾಗಾಗಿ ಈ ನಮ್ಮ ಜನಪರ ಸರ್ಕಾರಕ್ಕೆ ಕೈಜೋಡಿಸಿ ಸಹಕಾರ ನಿಡಬೇಕು ಎಂದರು. ಈ ಸದಂರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ಮಹೇಶ, ಪಟ್ಟಣ ಪಂಚಾಯತ ಸದಸ್ಯರಾದ ಚನ್ನಪ್ಪ ಸಜ್ಜನ್, ವಿರೇಶ ಭೋವಿ, ಮುಂಖಂಡರಾದ ಸಾಗರ ಬೇರಿ,ಮಂಜುನಾಥ ಜೂಲಕುಂಟಿ, ಬಸವನಗೌಡ ಓಲಿ, ಶಂಭುನಗೌಡ ಪಾಟೀಲ್, ಮಂಜು ದೇಸಾಯಿ, ಲಕ್ಷ್ಮಣ ಮುಖೀಯಾಜಿ, ನಾರಾಯಣ ಸಿಂಗ್ ಆನೇರಿ, ಶರಣಪ್ಪ ಭೋವಿ, ಯಂಕನಗೌಡ ಮುದ್ದಲಗುಂದಿ ಇನ್ನಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ.