ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಯುವ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ
೩೫ ರೂ ಗೆ ಸಿಗಬೇಕಾದ ಪೆಟ್ರೋಲ್ ೧೦೦ರೂ ಗೆ ಮಾರಾಟಮಾಡಲಾಗುತ್ತಿದೆ ಎಂದು ಅಥಣಿ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ರವಿ ಬಡಕಂಬಿ ಹೇಳಿದರು. ಅವರು ಸ್ಥಳೀಯ ಜತ್ತ ರಸ್ತೆಗೆ ಹೊಂದಿಕೊAಡ ಸಾವಡಕರ್ ಹಾಗೂ ಬಿರಾದಾರ ಪೆಟ್ರೋಲ್ ಪಂಪನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆದೇಶ ಮತ್ತು ಸೂಚನೆ ಮೇರೆಗೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು ಕಳೆದ ೦೬ ತಿಂಗಳಿನಿAದ ನಿರಂತರ ಪೆಟ್ರೋಲ್, ಡಿಸೇಲ್ ದರ ಏರಿಸುತ್ತಲೇ ಬಂದಿದ್ದಾರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ೬೫ರೂ ಟ್ಯಾಕ್ಸ ವಿಧಿಸಿವೆ. ಅಗತ್ಯ ಹಾಗೂ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ ಇಂತಹ ಮಾನಗೆಟ್ಟ ಸರಕಾರವನ್ನು ಜನರು ತಿರಸ್ಕರಿಸಬೇಕು ಎಂದರು. ಅನAತರ ತೆಲಸಂಗ ಬ್ಲಾಕ್ ಕಾಂಗ್ರೇಸ್ ಯುವ ಅಧ್ಯಕ್ಷ ಸಿದ್ದು ಕೊಕಟನೂರ ಮಾತನಾಡಿ ದಿನಬಳಕೆ ಅಡುಗೆ ಎಣ್ಣೆ, ರಸಗೊಬ್ಬರ ಸೇರಿದಂತೆ ಅನೇಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೇಂದ್ರ ಸರಕಾರ ಕೊರೋನಾದಂತಹ ಸಂಕಷ್ಟದಲ್ಲಿಯೂ ಪೆಟ್ರೋಲ್ ಬೆಲೆ ಏರಿಸುವ ಮೂಲಕ ದೇಶದ ಜನತೆಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದರು. ಈ ವೇಳೆ ಯುವ ಕಾಂಗ್ರೇಸ್ ಘಟಕದ ಪ್ರಕಾಶ ಕೋಳಿ, ಸಚಿನ ಬುಟಾಳಿ, ಶಂಕರ ಮಗದುಮ, ರಮೇಶ ಮಾಳಿ, ರಮೇಶ ಬಚ್ಚನ್ನವರ, ಕುಮಾರ ಬಿಳ್ಳೂರ, ಮಂಜುನಾಥ ಹೋಳಿಕಟ್ಟಿ, ತೌಸಿಫ್ ಸಾಂಗಲಿಕರ, ಅಕ್ಷಯ ಅಸ್ಕಿ, ಕೇದಾರಿ ಬಡಕಂಬಿ, ರಾಮಲಿಂಗ ಬಡಕಂಬಿ, ಭೀಮಸೇನ ಪೂಜಾರಿ, ಸಚಿನ ಬಡಕಂಬಿ, ಬಸವರಾಜ ಸೋನಕರ, ಮಾರುತಿ ಸವದತ್ತಿ. ಮಹಾಂತೇಶ ಬಾಸಿಂಗಿ, ರಹೀದ ಮಾಸ್ಟರ್, ರೋಹಿತ ತೆಲಸಂಗ, ಪುನೀತ ಬಡಕಂಬಿ, ಕೃಷ್ಣಾ ಸರಗರ, ಸದಾಶಿವ ಬಡಕಂಬಿ, ಬಸವರಾಜ ಸರಗರ ಸೇರಿದಂತೆ ಇತರರು ಹಾಜರಿದ್ದರು.
ವರದಿ – ಮಹೇಶ ಶರ್ಮಾ