ಸಿಂಧನೂರು ಶಾಸಕ ನಾಡಗೌಡ ಫೌಂಡೇಷನ್ನಿಂದ ಚಾಲಕರಿಗೆ ಕಿಟ್ ವಿತರಣೆ
ರಾಜ್ಯದಲ್ಲಿ ಈ ಕೊರೊನಾದ ಅಲೆಗಳಿಗೆ ಜನರು ಸಾವು/ನೋವುಗಳ ಮದ್ಯ ಜೀವನ ಸಾಗಿಸುವುದು ಕಷ್ಠಕರವಾಗಿದನ್ನು ಅರಿತ ಸಿಂಧನೂರು ಕೊರೊನಾ ಸಂಕಷ್ಟದಲ್ಲಿರುವ ವಾಹನ ಚಾಲಕರಿಗೆ ನಾಡಗೌಡ ಫೌಂಡೇಶನ್ ವತಿಯಿಂದ ಉಚಿತ ಆಹಾರ ಕಿಟ್ ಗಳನ್ನು ಶಾಸಕ ನಾಡಗೌಡರು ವಿತರಿಸಿದರು. ನಗರದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್ ಕಾರ್ಯಕ್ರಮದಲ್ಲಿ ಆಟೋ ,ಟ್ಯಾಕ್ಸಿ ,ಮೋಟರ್ ಗ್ಯಾರೇಜ್ ,ಬಡ ಕುಟುಂಬಗಳಿಗೆ ಸೇರಿದಂತೆ ಒಟ್ಟು 280 ಜನರಿಗೆ ನಾಡಗೌಡ ಫೌಂಡೇಶನ್ ವತಿಯಿಂದ ಆಹಾರ ಕಿಟ್ ಗಳನ್ನು ವಿತರಿಸಿ ಅವರ ನೆರವಿಗೆ ದಾವಿಸಿದರು. ಕೊರೊನಾ ಹರಡದಂತೆ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಲಾಗುತ್ತಿದ್ದು ಆಟೋ ,ಟ್ಯಾಕ್ಸಿ ಚಾಲಕರು ಸಮಯ ,ದಿನಾಂಕ ನಿಗದಿ ಪಡಿಸಿದರೆ ಅಂದೆ ಎಲ್ಲರಿಗೂ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡುತ್ತೆನೆ.ಕೊರೊನಾ ಇನ್ನೂ ಹೋಗಿಲ್ಲ ಯಾರೂ ಮೈ ಮರೆಯದೆ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾ ಹರಡದಂತೆ ನೋಡಿಕೊಳ್ಳುವ ಜವಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕ ನಾಡಗೌಡ ಹೇಳಿದರು. ಜೆಡಿಎಸ್ ಪಕ್ಷದ ಮುಖಂಡ ರಾದ ಬಸವರಾಜ ನಾಡಗೌಡ, ಬಿ.ಶ್ರೀ ಹರ್ಷ ,ಧರ್ಮನಗೌಡ ಮಲ್ಕಾಪುರ, ಅಭಿಷೇಕ್ ನಾಡಗೌಡ , ಮೊಹಿನುದ್ದಿನ್ ಖಾದ್ರಿ, ಅಶೋಕ ಉಮಲೂಟಿ, ನಗರಸಭೆಯ ಸದಸ್ಯರಾದ ಚಂದ್ರು ಮೈಲಾರ, ಕೆ.ಹನುಮೇಶ ಆಟೋ ಚಾಲಕರ ಸಂಘದ ಅದ್ಯಕ್ಷರಾದ ಉಸ್ಮಾನ್ ಪಾಷಾ ಮಕಾಂದರ್ ,ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷರಾದ. ಎಂ.ಡಿ ಸಾಧಿಖ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ