9 ಎ ಕಾಲುವೆ ಸಂಪೂರ್ಣ ನೀರಾವರಿಗೆ ಆಗ್ರಹಿಸಿ ರೈತರ ಸಭೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ..!

Spread the love

9 ಕಾಲುವೆ ಸಂಪೂರ್ಣ ನೀರಾವರಿಗೆ ಆಗ್ರಹಿಸಿ ರೈತರ ಸಭೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ..!

ಕವಿತಾಳ, ನಾರಾಯಣಪುರ ಬಲದಂಡೆ ಕಾಲುವೆಯ 9 ಎ ವಿತರಣಾ ಕಾಲುವೆಯ ಸಂಪೂರ್ಣ ಸಮಗ್ರ ನೀರಾವರಿಗಾಗಿ  ಕಾಮಗಾರಿಯ ಎಲ್ಲಾ ಸಮಸ್ಯೆಗಳ ಪರಿಹರಿಸಿ ಶೀಘ್ರ ಕೆಲಸ ಪ್ರಾರಂಭಿಸಬೇಕೆಂದು ಆಗ್ರಹಿಸಿ ರೈತರು ಸಭೆ ನಡೆಸಿದರು. ಸಮೀಪದ ಪೋತಾಪೂರ ಗ್ರಾಮದಲ್ಲಿ, ಕವಿತಾಳ ಹಾಗೂ ಹಿರೇಹಣಗಿ ಪಂಚಾಯ್ತಿ ವ್ಯಾಪ್ತಿಯ ಹಿರೇಹಣಗಿ, ಗೊಲ್ಲದಿನ್ನಿ, ಪೋತಾಪೂರ, ಗುಡದಿನ್ನಿ ವ್ಯಾಪ್ತಿಯ ರೈತರು ಸಮಸ್ಯೆ ಪರಿಹಾರ ಕುರಿತು  ಸಭೆ ನಡೆಸಿ ಹೋರಾಟದ ಮಾಡುವದಾಗಿ ತಿಳಿಸಿದ್ದಾರೆ. ಜಿಲ್ಲಾಪಂಚಾಯ್ತಿ ಸದಸ್ಯ ಕಿರಲಿಂಗಪ್ಪ ಮಾತನಾಡಿ, ಕಾಲುವೆ ಕಾಮಗಾರಿ ಮುಗಿದು ಸಂಪೂರ್ಣ ನೀರಾವರಿ ಆಗಬೇಕಾಗಿದೆ, ಕಾಲುವೆ ನಿರ್ಮಾಣದಲ್ಲಿ ಎಲ್ಲಾ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಹೋರಾಟದ ಮೂಲಕ ಎಚ್ಚರಿಸಬೇಕಾಗಿದೆ ಎಂದರು. ನಂತರ ವೀರನಗೌಡ ಮಾಲಿಪಾಟೀಲ್ ಹಾಗೂ ತಿಮ್ಮನಗೌಡ ಮಾತನಾಡಿ, 9 ಎ ವಿತರಣಾ ಕಾಲುವೆ ಬಗ್ಗೆ ನಾವು ಪ್ರಶ್ನಿಸದಿದ್ದರೆ ಕಾಮಗಾರಿ ವಿಳಂಬವಾಗುತ್ತದೆ. ಸುಮಾರು 10 ವರ್ಷಗಳು ಕಳೆದರು ಅಧಿಕಾರಿಗಳು ಹಾಗೂ ಗುತ್ತೆದಾರರು ಕುಂಟುನೆಪಗಳನ್ನೊಡ್ಡಿ ರೈತರಿಗೆ ಮೋಸಮಾಡುತ್ತಿದ್ದಾರೆ  ಎಂದು ಆರೋಪಿಸಿದರು. ಹೋರಾಟದ ರೂಪುರೇಷಗಳನ್ನು ಮಾಡಿಕೊಳ್ಳುವ ಮೂಲಕ ಸಂಪೂರ್ಣ ಸಮಗ್ರ ನೀರಾವರಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯರಾದ ವಿರುಪಾಕ್ಷಪ್ಪ ಗೌಡ ಪೋತಾಪೂರ, ಹಿರೇಹಣಗಿ ಗ್ರಾಪಂ ಅಧ್ಯಕ್ಷ ಆಂಜನೇಯ್ಯ ಭೋವಿ, ಸದಸ್ಯ ಶರಣಪ್ಪ ಕವಿತಾಳ, ಶರಣ ಭೂಪಾಲ್ ಸಾಹುಕಾರ ಕವಿತಾಳ, ಸಿದ್ದನಗೌಡ ಪೋತಾಪುರ, ಸೂಗರೆಡ್ಡಿ ಗೊಲ್ಲದಿನ್ನಿ, ಅಮರಯ್ಯ ಸ್ವಾಮಿ, ರಾಮಣ್ಣ ಬೆಳಗಿನೂರು, ಶರಣಪ್ಪ ಎಲ್ ಐಸಿ, ಶಂಕರಗೌಡ ಗುಡದಿನ್ನಿ, ಶಿವಯ್ಯಸ್ವಾಮಿ ಪಾತಾಪೂರ, ಬಸವರಾಜ ಸ್ವಾಮಿ ಹಣಗಿ, ನಿಂಗಣ್ಣ ಕುಮನೂರು, ಮಲ್ಲಯ್ಯ ಪೂಜಾರಿ, ಪ್ರಶಾಂತ ಚಂಡೂರ್, ಎಸ್ ಎಸ್ ಹಿರೇಮಠ ಪೋತಾಪೂರ ಸೇರಿದಂತೆ ಇತರರು ಇದ್ದರು.

ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *