ರಾಜೀವ್ ಗಾಂಧಿ ಸೇವಾ ಕೇಂದ್ರ ಶಂಕುಸ್ಥಾಪನೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಯಲಬುರ್ಗಾ ತಾಲ್ಲೂಕಿನ ಶಾಸಕರಾದ ಹಾಲಪ್ಪ ಆಚಾರ್ ಅವರು ತುಂಬರಗುದ್ದಿ ಗ್ರಾಮ ಹಾಗೂ ಬಂಡಿ ಗ್ರಾಮಗಳಲ್ಲಿ ಆಗಮಿಸಿ ನೂತನವಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣದ ಅಡಿಗಲ್ಲು ಶಂಕುಸ್ಥಾಪನೆ ನೆರವೇರಿಸಿ ಇಂತಹ ಕರೋನ ಸಂಕಷ್ಟದಲ್ಲಿ ಹಲವಾರು ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ತಡೆಹಿಡಿದಿತ್ತು ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡಕ್ಕೆ 28 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದೆ ಹಾಗೂ ಬಂಡಿ ಗ್ರಾಮ ಪಂಚಾಯಿತಿ ಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತುಮ್ಮರಗುದ್ದಿ ಗ್ರಾಂ ಪ ಅಧ್ಯಕ್ಷ ನಿಂಗಮ್ಮ ತಳವಾರ. ಉಪಾಧ್ಯಕ್ಷರಾದ ಬಸಮ್ಮ ಹಿರೇಮಠ. ಬಂಡಿ ಗ್ರಾಂ ಪ ಅಧ್ಯಕ್ಷ ರತ್ನಮ್ಮ ವಣಿಗೇರಿ ಉಪಾಧ್ಯಕ್ಷರಾದ ಹುಲಿಗೆಮ್ಮ ಕಡೆಮನೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ನೀಲಮ್ಮ ಬಾವಿಮನಿ ತಾಪಂ. ಇ ಓ ಜಯರಾಮ್ ಚೌಹಾಣ್ ಗ್ರಾಮದ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್ ಲಿಂಗಣ್ಣನವರ ಮುಖಂಡರಾದ ಸಿಎಚ್ ಪೊಲೀಸ್ ಪಾಟೀಲ್ ರತನ್ ದೇಸಾಯಿ ವೀರಣ್ಣ ಹುಬ್ಬಳ್ಳಿ ಕಳಕಪ್ಪ ಕಂಬಳಿ ಇನ್ನುಳಿದ ಇತರ ಸರ್ವ ಸದಸ್ಯರು ಭಾಗಿಯಾಗಿದ್ದರು.
ವರದಿ – ಹುಸೇನ್ ಮೋತೆಖಾನ್.