ಹೊತ್ತರಳಿ ಪುಸ್ತಕ ಬಿಡುಗಡೆ–ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಸಾಹಿತಿಗಳು ಒಂದಾಗಲಿ– ರೇಣುಕ ಗಂಗಾಧರ ಶಿವಾಚಾರ್ಯ ಶ್ರೀ
ಹುಮನಾಬಾದ: ಸಾಹಿತಿಗಳು ಒಂದಾಗಿ ನಿಂತಾಗ ಸಮಾಜ ಎಚ್ಚರಿಸಲು ಸಾಧ್ಯ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಒಂದಾಗಿ ಎಲ್ಲರಿಗೆ ಮಾರ್ಗದ ರ್ಶನದಲ್ಲಿ ಸಾಹಿತ್ಯ ರಚನೆ ಮತ್ತು ಸಂಘಟನೆಯ ಜೊತೆ ಧರ್ಮಾನಿಷ್ಟರಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ, ಅವರ ಸಾಹಿತ್ಯ ಉತ್ತರೋತ್ತರ ಬೆಳಗಲಿ ಇಂತಹ ಸಂದರ್ಭದಲ್ಲಿ ಸಾಹಿತಿಗಳು ಒಂದಾಗಬೇಕೆಂದು ಕರೆ ನೀಡಿದರು.
ಪಟ್ಟಣದ ಕರೇ ಮಠದಲ್ಲಿ ಪರಿಪೂರ್ಣ ಚಾರಿಟೆಬಲ್ ಟ್ರಸ್ಟ್, ಧರಿನಾಡು ಕನ್ನಡ ಸಂಘ,ಮತ್ತು ವಚನ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ನಡೆದ ಹೊತ್ತರಳಿ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಮತ್ತು ಡಾ.ಪಾಟೀಲರ ೪೮ರ ಸಂಭ್ರಮದ ಕಾರ್ಯ ಕ್ರಮದ ಸಾನಿಧ್ಯವಹಿಸಿ ಹಾಗೂ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ವ್ಯಕ್ತಿ ಅಳಿಯಬಹುದು ರಚಿಸಿದ ಸಾಹಿತ್ಯ ಅಳಿಯಲಾರದು ಎಂದರು. ಈ ಕೃತಿ ಜಿಲ್ಲೆಯ ಜಾನಪದ ಸಾಹಿತ್ಯದ ಮೇಲೆ ಬೆಳಕು ಚೆಲ್ಲುತ್ತದೆಂದರು. ಪುಸ್ತಕ ಪರಿಚಯವನ್ನು ಸಾಹಿತಿ ಉಮೇಶ ಬಾಬು ಮಠದ ಮಾಡುತ್ತಾ ಹಲವು ಸಾಹಿತ್ಯ ಪ್ರಕಾರದಲ್ಲಿ ಸಾಹಿತ್ಯ ರಚಿಸಿದಂತೆ ಜಾನಪದದ ಹಲವು ವಿಷಯಗಳು ಬೆಳಕಿಗೆ ಬಾರದ ಸಂಗತಿಗಳನ್ನು ಗುರುತಿಸಿದ್ದಾರೆ. ಜಿಲ್ಲೆಯ ಜಾನಪದ ಅಧ್ಯಯನ ಇನ್ನೂ ಆಗಬೇಕೆಂದು ಹೇಳುವ ಮೂಲಕ ಡಾ. ಗವಿಸಿದ್ಧಪ್ಪ ಪಾಟೀಲರು ಜಾನಪದ ವಿದ್ವಾಂಸರಾಗಿದ್ದಾರೆ. ನಿರಂತರ ಜಾನಪದ ಜಂಗಮನಾಗಿ ಕೆಲಸ ಮಾಡುತ್ತಿದ್ದು ಈಗಾಗಲೇ ಜಾನಪದ ಮೇಲೆ ಮೂರು ಸ್ವತಂತ್ರ ಮತ್ತು ಮೂರು ಸಂಪಾದನೆ ಮಾಡಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲರು ಸಾಹಿತ್ಯದಲ್ಲಿ ರಾಜಕೀಯ ಸೇರಿಕೊಂಡಿರುವುದು ತುಂಬಾ ದುಃಖದ ಸಂಗತಿ, ರಾಜಕೀಯ ರಹಿತವಾದ ಸಾಹಿತ್ಯ ಮಾತ್ರ ಸ್ವಾಸ್ಥ್ಯ ಸಮಾಜವನ್ನು ಸೃಜಿಸಲು ಸಾಧ್ಯ ಹಾಗಾಗಿ ಯುವ ಕವಿಗಳು ರಾಜಕೀಯವನ್ನು ಸಾಹಿತ್ಯದಿಂದ ದೂರ ಇಡಬೇಕಂದು ಎಂದರು. ಇತಿಹಾಸ ಶೋಧಕ ಶಕೀಲ ಐ.ಎಸ್ ಮಾತನಾಡಿ ಅವರು ವೇಗವಾಗಿ ಜಿಲ್ಲೆಯ ಸಾಹಿತ್ಯ ಸಂಘಟನೆ ಮಾರ್ಗದರ್ಶನದ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಸಾಹಿತ್ಯ ನಮಗೆ ಮತ್ತು ಯುವಕರಿಗೆ ಸ್ಪೂರ್ತಿಯಾಗಿದೆಯೆಂದರು. ಡಾ.ರಾಜಶೇಖರ ಹೂಗಾರ ಮಾತನಾಡಿ ಈಭಾಗದಲ್ಲಿ ಯುವಕರಿಗೆ ನನ್ನಂತವರಿಗೆ ಮಾರ್ಗದರ್ಶಕರೆಂದರು. ಡಾ.ಜಾನ್ ವೆಲ್ಲಸ್ಲಿ ಎಷ್ಟೋ ಗುರುಗಳನ್ನು ಕಂಡೀವಿ ಇಂತಹ ಸರಳ ನೇರ ನಡೆ ನುಡಿಯ ವ್ಯಕ್ತಿ ಕಂಡಿಲ್ಲವೆಂದರು. ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಉರಿಲಿಂಗಪೆದ್ದಿ ಮಠ ಅವರು ಆಶೀರ್ವಚನ ನೀಡುತ್ತಾ ಇಷ್ಟೊಂದು ಶಕ್ತಿ ಪ್ರೀತಿ ಡಾ.ಪಾಟೀಲರ ಮೇಲಿಯಿರುವುದು ಅವರು ತನಗಾಗಿ ಬಡಿದಾಡಿಲ್ಲ ನಮ್ಮ ಮಠದಲ್ಲಿ ಹದಿಮೂರು ಸಮ್ಮೇಳನಕ್ಕೆ ಇವರೆ ಕಾರಣರೆಂದರು. ಸಾಹಿತಿ ಡಾ.ಜಯದೇವಿ ಗಾಯಕವಾಡ ಮಾತನಾಡಿ ನನಗೆ ಭಾಷಣ ಮಾಡಲು ತಂದೆ ಅಣ್ಣ ಪ್ರೇರಕರಾದರೆ ಸಾಹಿತ್ಯಕ್ಕೆ ನನ್ನ ಬದುಕಿಗೆ ಮಾರ್ಗದರ್ಶಕರು ಡಾ.ಗವಿಸಿದ್ಧಪ್ಪನವರೆಂದರು. ಅಧ್ಯಕ್ಷತೆ ವಹಿಸಿದ ಡಾ.ಕೆ.ಚಂದ್ರಕಾಂತ ಅವರು ಒಂದೇ ದಿನದಲ್ಲಿ ನೀವು ಇಚ್ಟು ತಯಾರಾಗಿದ್ದು ನನಗೆ ಖುಷಿತಂದಿದೆ ಡಾ.ಪಾಟೀಲರು ಸಾಹಿತ್ಯ ರಚನೆ ಅವರ ಚಟುವಟಿಕೆ ಗಮನಿಸಿದೆ ಅವರಿಗೆ ಇನ್ನೂ ಉತ್ತಮ ಭವಿಷ್ಯವಿದೆಯೆಂದರು ಕವಿಗಳಾದ ಬಸವರಾಜ ದಯಾಸಾಗರ, ಡಾ.ವಿಜಯಕುಮಾರ, ಡಾ.ಸಂದೀಪ ಹೊಳ್ಕರ್, ಡಾ.ಪೀರಪ್ಪ ಸಜ್ಜನ,ಮೊಯಿನುದ್ದೀನ,ಚೇತನ ಬಿರಾದಾರ,ಸಂಗಮೇಶ ಜವಾದಿ,ಶಿವರಾಜ ಮೇತ್ರೆ ಕಾವ್ಯ ವಾಚಿಸಿದರು. ನ್ಯಾಯಾಂಗ ಇಲಾಖೆಯ ಹುಮನಾಬಾದ ತಾಲೊಕಿನ ನಿರ್ಧೇಶಕರಾದ ವೆಂಕಟೇಶ್ವರ ಹಡಪದರವರಿಗೆ ಶ್ರೀಗಳು ಸನ್ಮಾನಿಸಿ ಆಶೀರ್ವಧಿಸಿದರು. ಕೆ.ಪ್ರಭಾಕರ್,ಪರಿಪೂರ್ಣ ಚಾರಿಟೆಬಲ್ ಟ್ರಸ್ಟ ಅಧ್ಯಕ್ಷೆ ವಿಜಯಕುಮಾರಿ ಮಠದ, ಕನ್ನಡಾಂಬೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭಾಗವಂತ ವಗ್ಗೆ, ಕಂಠೆಪ್ಪ ಮು.ಗು.ಮುಡಬಿಕರ್ ರಾಜಕುಮಾರ, ಮಲ್ಲಿಕಾರ್ಜುನ ಸಂಗಮಕರ್, ಈಶ್ವರ ತಡೋಳಾ , ಜೈಭೀಮ ಹೋಳಿಕೇರಿ, ಹಣಮಂತ ಶ್ರೀಂಗೇರಿ, ಇದ್ದರು ಇದೇ ಸಂದರ್ಭದಲ್ಲಿ ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾಧ್ಯಕ್ಷ ಸಂಗಮೇಶ ಜವಾದಿಯವರು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲರವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಸಾಕ್ಷಿ ಪ್ರಾರ್ಥಿಸಿದರು, ಪ್ರಾಸ್ತಾವಿಕ ಸ್ವಾಗತ ನುಡಿಯನ್ನು ಡಾ.ವಿಜಯಕುಮಾರ ಬೀಳಗಿ ನಡೆಸಿದರೆ ಸಿದ್ದಾರ್ಥ ಮಿತ್ರಾ ನಿರೂಪಿಸಿದರು ವಿಜಯಕುಮಾರ ಚಟ್ಟಿ ವಂದಿಸಿದರು.
ವರದಿ – ಸಂಗಮೇಶ ಎಸ್ ಜವಾದಿ.