ರಾಮನಗರದಲ್ಲಿ ಕೋವಿಡ್ ನಿಂದ ಮಕ್ಕಳ ರಕ್ಷಣೆಗೆ ಸಕಲ ಕ್ರಮ
ಇಂದು ರಾಮನಗರದಲ್ಲಿ, ಸಂಭಾವ್ಯ ಕೊರೋನಾ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಅಶ್ವತ್ಥ ನಾರಾಯಣ ಜಿ ಅವರೊಂದಿಗೆ ಅಧಿಕಾರಿಗಳ ಜೊತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸಭೆ ನಡೆಸಿ, ಸಮಾಲೋಚಿಸಿದರು. ಕೋವಿಡ್ ಸೋಂಕಿತರಾದ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ 172 ಬೆಡ್ ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ 9 ಮಕ್ಕಳ ತಜ್ಞ ವೈದ್ಯರನ್ನು ಗುರುತಿಸಲಾಗಿದೆ. ಮಕ್ಕಳ ವಿಶೇಷ ಕೋವಿಡ್ ಸೆಂಟರ್ ನಿರ್ಮಾಣಕ್ಕೆ 7 ಕಡೆಗಳಲ್ಲಿ ಸ್ಥಳ ಗುರುತು ಮಾಡಲಾಗಿದೆ. ಕೋವಿಡ್ ನಿಂದಾಗಿ ಪೋಷಕರನ್ನು ಕಳೆದುಕೊಂಡು ಇಬ್ಬರು ಮಕ್ಕಳು ಅನಾಥರಾಗಿದ್ದು, ಸಿಂಗಲ್ ಪೇರೆಂಟ್ ಮಕ್ಕಳ ಸಂಖ್ಯೆ 98 ಇದೆ. ಇಂತಹ ಮಕ್ಕಳಿಗೆ ಬಿಜೆಪಿ ಸರ್ಕಾರದ ವತಿಯಿಂದ ನೀಡಲಾಗುವ ಸೌಲಭ್ಯವನ್ನು ಸೂಕ್ತ ರೀತಿಯಲ್ಲಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
ವರದಿ – ಮಹೇಶ ಶರ್ಮಾ