ಅಥಣಿಯ ಕಾಂಗ್ರೆಸ್ ಪಕ್ಷದ ಪರವಾಗಿ ಕೃಪಾ ಆರೋಗ್ಯ ಸಂಸ್ಥೆಯ HIV ಪೀಡಿತ ಮಕ್ಕಳ ಪಾಲನಾಕೇಂದ್ರದ ವಿದ್ಯಾರ್ಥಿಗಳಿಗೆ ಮೆಡಿಸಿನ್ ಕಿಟ್ ವಿತರಿಸಲಾಯಿತು..
ಸತತ 11 ನೇ ದಿನ ಕಾಂಗ್ರೆಸ್ ಪಕ್ಷದ ಪರವಾಗಿ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿಯವರು ನೀಡಿದ 6 ತಿಂಗಳಿಗಾಗುವಷ್ಟು ಅಕ್ಕಿ, ಗೋದಿ, ಜೋಳ, ಸಕ್ಕರೆ, ಅಡುಗೆ ಎಣ್ಣೆ,ಅವಲಕ್ಕಿ, ರವಾ, ತೊಗರಿಬೇಳೆ, ಹೆಸರಕಾಳು ಇನ್ನಿತರ ಸಾಮಗ್ರಿಗಳನ್ನು & ಕರೋನಾ ಮೆಡಿಸಿನ್ ಕಿಟ್ ಗಳನ್ನು ಅಥಣಿಯ ಕೃಪಾ ಆರೋಗ್ಯ ಸಂಸ್ಥೆಯ HIV ಪೀಡಿತ ಮಕ್ಕಳ ಪಾಲನಾಕೇಂದ್ರದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ,ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ತೇಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಕಾಂಗ್ರೆಸ್ ಮುಖಂಡರುಗಳಾದ ಅನಿಲ ಸುಣದೊಳ್ಳಿ, ಸುನೀಲ ಸಂಕ, ರಮೇಶ ಸಿಂದಗಿ, ಧರೆಪ್ಪ ಠಕ್ಕನ್ನವರ,ಸುನಿತಾ ಐಹೊಳೆ,ರವಿ ಬಡಕಂಬಿ, ಸಂಜು ಕಾಂಬಳೆ, ಗೌತಮ ಪರಾಂಜಪೆ, ಕಪಿಲ ಘಟಕಾಂಬಳೆ ,ಕೃಪಾ ಆರೋಗ್ಯ ಸಂಸ್ಥೆಯವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ – ಮಹೇಶ ಶರ್ಮಾ