ಬಳ್ಳಾರಿ ಸಾಮಾಜಿಕ ಕಾರ್ಯಕರ್ತರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ

Spread the love

ಬಳ್ಳಾರಿ ಸಾಮಾಜಿಕ ಕಾರ್ಯಕರ್ತರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ

ಮಾನ್ಯ ಜಿಲ್ಲಾಧಿಕಾರಿಗಳು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ದಿನಾಂಕ 17-06-21 ರಂದು ಮಾನ್ಯ ಬಳ್ಳಾರಿ ನಗರ ಶಾಸಕರಾದ ಸೋಮಶೇಖರ್ ರೆಡ್ಡಿ ಮತ್ತು ಇನ್ನಿತರರು ತಮಗೆ  ಕಲ್ಯಾಣ ಮಂಟಪಗಳ ಬಗ್ಗೆ ಪುನಃ ಪ್ರಾರಂಭವಾಗುವುದಕ್ಕೆ ಮನವಿ ಪತ್ರವನ್ನು ನೀಡಿದರು. ಆದರೆ ನಾನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಯುವಸೇನ ಸೋಷಲ ಆಕ್ಷನ್ ಕ್ಲಬ್ ಅಧ್ಯಕ್ಷರಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಬಳ್ಳಾರಿ ನಗರದಲ್ಲಿ ಸುಮಾರು 54 ಕಲ್ಯಾಣ ಮಂಟಪ ಗಳಿವೆ ಅದರಲ್ಲಿ ಸುಮಾರು 8 ಮಾತ್ರ ಪ್ರತಿವರ್ಷ ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆದು ಕಾರ್ಯಕಲಾಪಗಳು ನಡೆಸುತ್ತಿದೆ, ಆದರೆ ಉಳಿದಂತ ಕಲ್ಯಾಣಮಂಟಪಗಳು ಯಾವು ಕೂಡ ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ .ದಯಮಾಡಿ ಅಂತ ಕಲ್ಯಾಣ ಮಂಟಪಗಳಿಗೆ ಪುನಃ ಪ್ರಾರಂಭಿಸುವುದಕ್ಕೆ ಅವಕಾಶ ನೀಡಬೇಡಿ ,ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆ ಆರೋಗ್ಯ ಅಧಿಕಾರಿಗಳಾದ Dr. ಶ್ರೀ ಹನುಮಂತಪ್ಪ(9448968514) ಅವರನ್ನು ಸಂಪರ್ಕಿಸಿದರೆ ಮಾಹಿತಿ ಸಿಗುತ್ತದ, ಇದರ ಬಗ್ಗೆ ನಾವು ಹಲವಾರು ಸರಿ ಬಳ್ಳಾರಿ ಮಹಾನಗರ ಪಾಲಿಕೆಗೆ ಮನವಿ  ಪತ್ರಗಳನ್ನು ಕೂಡ ನೀಡಿದ್ದೇವೆ. COVID-19 ಎರಡನೇ ಹಲೆ ಕಾರಣದಿಂದ ತಮ್ಮ ಕಚೇರಿಗೆ ಬರಲು ಆಗುತ್ತಿಲ್ಲ, ಅದರಲ್ಲಿ ನೀವು Appointment ನೀಡುತ್ತೀರ ಇಲ್ಲ ಎಂಬುದು ಗೊತ್ತಿಲ್ಲ , ಇದೆ ಮನವಿಪತ್ರ ಎಂದು ಭಾವಿಸಿ ಲಕ್ಷಾಂತರ ರುಪಾಯಿ ದುಡಿಯುತ್ತಿರುವ ಕಲ್ಯಾಣಮಂಟಪಗಳು ಯಾವುದೇ ಪರವಾನಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಬಗ್ಗೆ ಕಾನೂನುಬದ್ಧವಾಗಿ ಪರವಾಣಿಗೆ ವಸೂಲಿ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಆದೇಶ ನೀಡುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.  ಇಂತೆ ವಂದನೆಗಳೊಂದಿಗೆ ಮೇಕಲ ಈಶ್ವರ್ ರೆಡ್ಡಿ    ಸಾಮಾಜಿಕ ಹೋರಾಟಗಾರರು ಬಳ್ಳಾರಿ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *