ಕಂಪ್ಲಿ ತಾಲೂಕಿನ ರಾಮಸಾಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 61,380 ರೂ.ಮೌಲ್ಯದ 41 ಕ್ವಿಂಟಲ್ ಪಡಿತರ ಅಕ್ಕಿವಶಕ್ಕೆ
ಸರ್ಕಾರ ಕಡು/ಬಡವರಿಗೆ/ನಿಗರ್ತೀಕರಿಗೆ/ ದಿನ/ದಲಿತರಿಗಾಗಿ ಹಲವು ಯೋಜನೆಗಳು ಕೈಗೊಂಡರು ಕೆಲವರು ಅಂತಹ ಯೋಜನೆಯಿಂದ ದ್ವೀಗುಣ ಲಾಬಕ್ಕಾಗಿ ಎನೆಲ್ಲಾ ಮಾಡುತ್ತಾರೆ. ಕೊನೆಗೆ ತಪ್ಪಿಗೆ ಶಿಕ್ಷೇ ಸಹ ಅನುಭವಿಸುತ್ತಾರೆ. ತಿನ್ನುವ ಅನ್ನಕ್ಕೂ ಕನ್ನ ಹಾಕಿದ ಖಧಿಮರು ಅಧಿಕಾರಿಗಳ ಬಲೆಗೆ. ಕಂಪ್ಲಿ :ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 61,380 ರೂ.ಮೌಲ್ಯದ 41 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಾಮಸಾಗರ ಗ್ರಾಮದ ಹೊರವಲಯದ ದಾಸರ ಕನಕರಾಯ ಎನ್ನುವ ವ್ಯಕ್ತಿಗೆ ಸೇರಿದ ಜಮೀನಿನಲ್ಲಿರುವ ರೇಷ್ಮೆ ಗೋದಾಮಿನಲ್ಲಿ ಈ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು. ಶುಕ್ರವಾರ ಸಂಜೆ ಆಹಾರ, ಪೊಲೀಸ್ ಹಾಗು ಕಂದಾಯ ಇಲಾಖೆಗಳ ಅಧಿಕಾರಿಗಳ ತಂಡ ಜಂಟಿ ದಾಳಿ ನಡೆಸಿ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಆಹಾರ ಇಲಾಖೆ ಶಿರಸ್ತೇದಾರ ನಾಗರಾಜ್ ಹೆಚ್, ಎಎಸ್ ಐ ಕೆ.ಎನ್.ಹಗರಪ್ಪ ,ಕಂದಾಯ ನಿರೀಕ್ಷಕ ಎಸ್. ಗಣೇಶ್, ಗ್ರಾಮ ಲೆಕ್ಕಿಗರಾದ ವೆಂಕಟೇಶ್, ಮಂಜುನಾಥ್, ವಿಜಯಕುಮಾರ್ ಮೊದಲಾದವರು ಇದ್ದರು.
ವರದಿ – ಮಂಜುನಾಥ ಎಸ್.ಕೆ