ವಿಶ್ವ ತಂದೆಯರ ದಿನಾಚರಣೆಯ ನಿಮಿತ್ಯ ಒಂದು ವಿಶೇಷ ಲೇಖನ.
ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದೂ ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದೂ ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾಗಿದೆ. ಎತ್ತು ಹೊತ್ತು ಸಾಕಿ ಸಲುಹಿದ ತಂದೆಯರ ದಿನ, ಈ ಹಿಂದೆ ನಮ್ಮನ್ನು ಹೆತ್ತ ತಂದೆ/ತಾಯಿಯವರು ಹಗಲಿರುಳು ಎನ್ನದೇ ಕೂಲಿ/ನಾಲಿ ಮಾಡಿ ನಮ್ಮನ್ನು ಬದುಕಿಸಿ ಈ ಮಟ್ಟಕ್ಕೆ ಬೆಳಸಿದ ನಮ್ಮ ಹೆತ್ತ ತಂದೆ/ತಾಯಿಗಳ ಪಾದಕ್ಕೆ ಶರಣು ಶರಣಾರ್ಥಿ ಎನ್ನುತ್ತ. ಈ ತಂದೆ/ತಾಯಿಗಳ ವಿಶೇಷ ದಿನವನ್ನು ನಾವುಗಳು ಪ್ರತಿ ನಿತ್ಯ ಪಾಲಿಸುವುದು ನಮ್ಮ ಧರ್ಮ. ತಂದೆ/ತಾಯಿಯವರು ತಮಗಾಗಿ ಏನನ್ನು ಉಳಿಸಿಕೊಳ್ಳದೆ ನಮ್ಮ ಏಳಿಗೆಗಾಗಿ ಪಟ್ಟಿರುವ ಆ ಕಷ್ಟ/ಕರುಣ್ಯಗಳಿಗೆ ಋಣ ತಿರಿಸಲು ಯಾರಿಂದಲು ಸಾದ್ಯವಿಲ್ಲ. ಹಾಗಾಗಿ ಪ್ರತಿ ಮಕ್ಕಳು ತಂದೆ/ತಾಯಿಯರಿಗಾಗಿ ಪ್ರತಿದಿನ ಸುಖ/ಸಂತೋಷ ಆಲಿಸಿದರೆ ಸಾಕು ತಂದೆ/ತಾಯಿಯವರ ಮನಸ್ಸು ಕಲ್ಲಿದ್ದರು ಕರಗಿ ಹೋವಾಗಿ ಅರಳುತ್ತೆ, ಪ್ರತಿಯೊಂದು ಮಕ್ಕಳು ತಂದೆ/ತಾಯಿಯರಿಗೆ ಗೌರವ ನೀಡಿ ಅವರ ಸುಖ/ದುಖಃ ಆಲಿಸಬೇಕು ಆಗಮಾತ್ರ ತಂದೆ/ತಾಯಿಯರ ದಿನಚಾರಣೆಗೆ ಮಹತ್ವ ದೊರೆಯುತ್ತದೆ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ತಂದೆಯ ದಿನಾಚರಣೆಯು ಉದ್ಘಾಟಿಸಲ್ಪಟ್ಟಿತು. ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ತಂದೆಯ ದಿನಾಚರಣೆ ಆಚರಿಸಲ್ಪಡುತ್ತದೆ. ಉಡುಗೊರೆಗಳ ವಿನಿಮಯ,ತಂದೆಗಾಗಿ ವಿಶೇಷ ಭೋಜನ ಮತ್ತು ಕುಟುಂಬ ಸಹಿತವಾದ ಕಾರ್ಯಕ್ರಮಗಳ ಏರ್ಪಡಿಸುವುದು ಈ ದಿದ ವಿಶೇಷ. ಸ್ಪೋಕೇನ್‌ನ ಸೊನೋರಾ ದೋಡ್ಸ್ ಅವರ ಶ್ರಮದಿಂದ 1910, ಜೂನ್ 19ರಂದು ತಂದೆಯ ದಿನಾಚರಣೆಯನ್ನು ಮೊದಲ ಬಾರಿಗೆ ಆಚರಿಸಿರುವುದಾಗಿ ಭಾವಿಸಲಾಗಿದೆ.ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಕ ಕೇಂದ್ರವಾದ ಭಾರತದಲ್ಲಿ ಈ ತಂದೆಯರ ದಿನ ಆಚರಿಸುವುದು ದುದ್ಱೈವದ ಸಂಗತಿ. 1909ರಲ್ಲಿ ಸ್ಪೋಕೇನ್‌ನ ಸೆಂಟ್ರಲ್ ಮೆತೊಡಿಸ್ಟ್ ಎಪಿಸ್ಕೊಪಲ್ ಚರ್ಚಿನ ಒಂದು ಭಾನುವಾರ ಮಾತೃ ದಿನದಾಚರಣೆಯ ಧರ್ಮೋಪದೇಶವನ್ನು ಆಲೈಸುತ್ತಾ ವಾಷಿಂಗ್ಟನ್ನ ಸೊನೋರಾ ಸ್ಮಾರ್ಟ್ ದೋಡ್ ತಂದೆಯನ್ನು ಗೌರವಿಸಲು ತಾನೇ ತಾನಾಗಿ ಯೋಚಿಸಿದಳು ಮತ್ತು 1910ರ ಜೂನ್ 19ರಂದು ತಂದೆಗೆ ಗೌರವವನ್ನು ಅರ್ಪಿಸಿದಳು. ಪಿತೃ ಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟ ಮೊದಲಿಗಳಾದಳು ಈಕೆ. ಇದನ್ನು ಅಧಿಕೃತ ರಜಾ ದಿನವೆಂದು ಪರಿಗಣಿಸಲು ಅನೇಕ ವರ್ಷಗಳೇ ಹಿಡಿದವು. YWCA, YMCA ಮತ್ತು ಚರ್ಚುಗಳ ಬೆಂಬಲವಿದ್ದರೂ ಕೂಡಾ ಕ್ಯಾಲೆಂಡರ್‍ನಲ್ಲಿ ಇದು ತಪ್ಪಿ ಹೋಗಿ ಬಿಡುತ್ತಿತ್ತು. ಮಾತೃ ದಿನಾಚರಣೆಯನ್ನು ಹುಮ್ಮಸ್ಸಿನಿಂದ ಆಚರಿಸಿದರೆ ತಂದೆಯ ದಿನಾಚರಣೆಯು ನಗೆಪಾಟಲಿಗೆ ಈಡಾಯಿತು. ಬಿಡುವು ದೊರೆಯುವ ಸಂಗತಿಯತ್ತ ನಿಧಾನವಾಗಿ ಗಂಭೀರ ಚಿಂತನೆ ಶುರುವಾಯಿತು, ಅದರೆ ಅದು ಸದುದ್ದೇಶದಿಂದ ಕೂಡಿರಲಿಲ್ಲ. ಪತ್ರಿಕೆಗಳಲ್ಲಿ ಹಾಸ್ಯಕ್ಕೀಡಾದ ಇದು ಕುಚೋದ್ಯಕ್ಕೆ,ವಿಕೃತ ಅಣಕ ಬರಹಕ್ಕೆ ಮತ್ತು ಸ್ಥಳೀಯ ಪತ್ರಿಕೆ ಸ್ಪೋಕ್ಸ್ಮನ್-ರಿವ್ಯೂ ನ ಹಾಸ್ಯಕ್ಕೆ ಗುರಿಯಾಯಿತು. ಮುಂದೊಂದು ದಿನ “ತಾತಂದಿರ ದಿನ”, “ವೃತ್ತಿಪರ ಕಾರ್ಯದರ್ಶಿಗಳ ದಿನ” ಎಂದು ಕ್ಯಾಲೆಂಡರ್ ತುಂಬುವದಕ್ಕೆ ದಾರಿಯಾಗುತ್ತಾ ಕೊನೆಗೆ ಮೇಜನ್ನು ಸ್ವಚ್ಚಗೊಳ್ಳಿಸುವ ರಾಷ್ಟೀಯ ದಿನ” ಅನ್ನುವ ಮಟ್ಟಕ್ಕೂ ಇದು ಇಳಿದು ಬಿಡುತ್ತದೆ ಎಂದು ಅನೇಕರು ಹುಬ್ಬೇರಿಸಿದರು. 1913ರಲ್ಲಿ ಇದಕ್ಕೊಂದು ಮಸೂದೆಯನ್ನು ಮಂಡಿಸಲಾಯಿತು. USನ ಅಧ್ಯಕ್ಷ ಕಾಲ್ವಿನ್ ಕೂಲಿಡ್ಜ್ 1924ರಲ್ಲಿ ಇದನ್ನು ಬೆಂಬಲಿಸಿದರು ಮತ್ತು 1930ರಲ್ಲಿ ರಜೆಯನ್ನು ಅಧಿಕೃತಗೊಳಿಸಬೇಕೆ ಎಂಬುದನ್ನು ಪರಿಶೀಲಿಸಲು ವರ್ತಕರನ್ನೊಳಗೊಂಡ ರಾಷ್ಟೀಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ ಲಿಂಡನ್ ಜಾನ್‌ಸನ್ 1966ರಲ್ಲಿ ಹೊರಡಿಸಿದ ಆಜ್ಞೆಯಿಂದಾಗಿ ಅದು ಸಾರ್ವತ್ರಿಕ ರಜಾ ದಿನವಾತಿತು. ಎನೇ ಇರಲಿ ಒಟ್ಟಿನಲ್ಲಿ ನಮ್ಮನ್ನು ಹೆತ್ತ ತಂದೆ ತಾಯಯಿಯವರಿಗೆ ಪ್ರತಿ ದಿನ ಕೈ ಮುಗಿದರು ಸಾಲದು ಹಾಗಾಗಿ ತಂದೆಯವರಿಗೊಂದು ಈ ದಿನದೊಂದು ವಿಶ್ವ ತಂದೆಯವರ ದಿನವೆಂದು ಆಚರಿಸುತ್ತೆವೆ.
ವರದಿ – ಸಂಪಾದಕೀಯ