ಕೋವಿಡ್ ಸೋಂಕಿನಿಂದ ಮೃತರಾದ ಜನರ ಶವಸಂಸ್ಕಾರ ಕಾರ್ಯವನ್ನು ಉಚಿತವಾಗಿ ಮಾಡುತ್ತಿರುವ ಆರ್.ಎಸ್.ಎಸ್ ಸ್ವಯಂಸೇವಕರಿಗೆ ಪುಷ್ಪವೃಷ್ಠಿ ಮಾಡಿ ಅಭಿನಂದನೆ ಸಲ್ಲಿಸಿದ..

Spread the love

ಕೋವಿಡ್ ಸೋಂಕಿನಿಂದ ಮೃತರಾದ ಜನರ ಶವಸಂಸ್ಕಾರ ಕಾರ್ಯವನ್ನು ಉಚಿತವಾಗಿ ಮಾಡುತ್ತಿರುವ ಆರ್.ಎಸ್.ಎಸ್ ಸ್ವಯಂಸೇವಕರಿಗೆ ಪುಷ್ಪವೃಷ್ಠಿ ಮಾಡಿ ಅಭಿನಂದನೆ..

ಕೆ.ಆರ್‌.ಪೇಟೆ ಪಟ್ಟಣದ ವಿತರಕರು ಹಾಗೂ ವ್ಯಾಪಾರಿಗಳು ಕೋವಿಡ್ 2ನೇ ಅಲೆಯ ಸಂಕಷ್ಠದ ಸಮಯದಲ್ಲಿ ಕೋವಿಡ್ ಸೋಂಕಿನಿಂದ ಮೃತರಾದ ಜನರ ಶವಸಂಸ್ಕಾರ ಕಾರ್ಯವನ್ನು ಉಚಿತವಾಗಿ ಮಾಡುತ್ತಿರುವ ಆರ್.ಎಸ್.ಎಸ್ ಸ್ವಯಂಸೇವಕರಿಗೆ ಪುಷ್ಪವೃಷ್ಠಿ ಮಾಡಿ ಅಭಿನಂದನೆ ಸಲ್ಲಿಸಿ ಆಹಾರ ಕಿಟ್’ಗಳನ್ನು ವಿತರಿಸಿ ಗೌರವಿಸಿದರು. ಇಡೀ ಸಮಾಜವೇ ಕೋವಿಡ್ ನಿಂದ ಬಳಲುತ್ತಿರುವ ಸಂಕಷ್ಠದ ಸಮಯದಲ್ಲಿ ಕೋವಿಡ್ ಸೋಂಕಿನಿಂದ ಮೃತರಾದ ಜನರ ಮುಖನೋಡಲು, ಅಂತಿಮ ನಮನ ಸಲ್ಲಿಸಲು ಹೆದರುತ್ತಿರುವ ಸಂದರ್ಭದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಕೋವಿಡ್ ನಿಂದ ಮೃತರಾದ ವ್ಯಕ್ತಿಗಳ ಮೃತ ದೇಹಗಳನ್ನು ಆಯಾ ಸಮಾಜದ ವಿಧಿ ವಿಧಾನಗಳಂತೆ ಶವ ಸಂಸ್ಕಾರ ಮಾಡಿ ಸದ್ಗತಿ ತೋರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇಂತಹ ಪ್ರಾಮಾಣಿಕ ಸ್ವಯಂ ಸೇವಕರ ಕುಟುಂಬಗಳಿಗೆ ಅಗತ್ಯವಾಗಿ ಬೇಕಾದ ಆಹಾರ ಧಾನ್ಯಗಳ ಫುಡ್ ಕಿಟ್ ಗಳನ್ನು ವಿತರಣೆ ಮಾಡುತ್ತಿರುವ ವಿತರಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಾರ್ಯವು ಶ್ಲಾಘನೀಯ ಎಂದು ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್, ಸಮಾಜಸೇವಕ ಜಿ.ಸೋಮಶೇಖರ್, ಕಾರ್ಯವಾಹ ಯುವರಾಜ್ ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸ‌‍ಕ ಡಿ.ಟಿ.ಪುಲಿಗೆರಯ್ಯ, ಹೆಚ್.ಬಿ.ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಸತೀಶ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್, ಪ್ರಧಾನ ಕಾರ್ಯದರ್ಶಿ ಜಯಮೃತ್ಯುಂಜಯಸ್ವಾಮಿ, ನಂದಿ ಮೆಡಿಕಲ್ಸ್ ಪುನೀತ್ ಮತ್ತಿತರರು ಉಪಸ್ಥಿತರಿದ್ದರು. ‍ವಿಶೇಷ ವರದಿ ಸಂಗ್ರಹಗಾರರು .ಡಾ.ಕೆ.ಆರ್.ನೀಲಕಂಠ .

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *