ವಿಶ್ವ ಯೋಗ ದಿನ| ದೈಹಿಕ ಸ್ವಾಸ್ಥ್ಯ ಕಾಪಾಡುವುದೇ ಯೋಗ: ಪ್ರಧಾನಿ ಮೋದಿ

Spread the love

ವಿಶ್ವ ಯೋಗ ದಿನ| ದೈಹಿಕ ಸ್ವಾಸ್ಥ್ಯ ಕಾಪಾಡುವುದೇ ಯೋಗ: ಪ್ರಧಾನಿ ಮೋದಿ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಆರೋಗ್ಯಕ್ಕಾಗಿ ಯೋಗ ಎಂಬ ಮೂಲಮಂತ್ರದೊಂದಿಗೆ ದೈಹಿಕ ಸ್ವಾಸ್ಥ್ಯ ಕಾಪಾಡುವುದು ಮುಖ್ಯ ಎಂದರು. ಕೊರೋನಾ ಸೋಂಕಿನ ನಡುವೆಯೂ ಎಲ್ಲೆಡೆ ಯೋಗ ದಿನ ಆಚರಣೆ ಮಾಡಲಾಗುತ್ತಿದ್ದು, ನಮ್ಮಲ್ಲಿ ಉತ್ಸಾಹ ಕಡಿಮೆಯಾಗಿಲ್ಲ. ಯೋಗ ಮಾಡುವ ಮೂಲಕ ನಮ್ಮ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಯೋಗ ಮಾಡುವುದರಿಂದ ನಮ್ಮ ಆತ್ಮಬಲ ಹೆಚ್ಚಾಗಲಿದ್ದು, ವಿಶ್ವದಲ್ಲಿನ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಯೋಗ ಭರವಸೆಯ ಅಶಾಕಿರಣವಾಗಿದ್ದು, ನಿರಂತರ ಯೋಗಾಭ್ಯಾಸದಿಂದ ನಮ್ಮಲ್ಲಿನ ವಿಚಾರ ಶಕ್ತಿ ಹೆಚ್ಚಾಗಲಿದೆ ಎಂದರು. ‘ಯೋಗ ಫಾರ್ ವೆಲ್ನೆಸ್’ ಎಂಬ ಧ್ಯೇಯದೊಂದಿಗೆ ಈ ವರ್ಷ ಯೋಗಾಚರಣೆ ನಡೆಸಲಾಗುತ್ತಿದ್ದು, ಇದು ಜನರನ್ನು ಯೋಗ ಮಾಡಲು ಮತ್ತಷ್ಟು ಪ್ರೋತ್ಸಾಹಿಸುವ ಕೆಲಸವಾಗಿದೆ ಎಂದು ತಿಳಿಸಿದರು. ಹೊಸ ಆಪ್ ಬಿಡುಗಡೆ: ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯದೊಂದಿದೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತ ಸಹಯೋಗದಲ್ಲಿ ಎಂ-ಯೋಗ ಎಂಬ ಆಪ್ ಬಿಡುಗಡೆ ಮಾಡಲಾಗಿದೆ. ಇದು ಆನ್ ಲೈನ್ ವಿಡಿಯೋಗಳ ಮೂಲಕ ವಿವಿಧ ಭಾಷೆಯಲ್ಲಿ ಯೋಗ ತರಬೇತಿ ಪಡೆಸಲು ಸಹಕಾರಿಯಾಗಲಿದೆ ಎಂದರು. 2014ರಲ್ಲಿ ಜೂನ್ 21 ಅನ್ನು ವಿಶ್ವ ಯೋಗ ದಿನವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀರವಾಗಿದ್ದು, ಈವರೆಗೂ ಸುಮಾರು 177 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಣೆಯಲ್ಲಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *