ಕೋವಿಡ ನಿಯಮ ಗಾಳಿಗೆ ತೂರಿ ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು
ರಾಜ್ಯದಂತ ಕರೋನ್ ಮಹಾಮಾರಿ ರೋಗದಿಂದ ರಾಜ್ಯ ಸರ್ಕಾರ ಲಾಕಡೌನ್ ಘೋಷಣೆ ಮಾಡಿದ್ದು ಜನರ ಜೀವನ ಪರಿಸ್ಥಿತಿ ತುಂಬಾ ಹದೆಗೆಟ್ಟಿದ್ದು ಇತಂಹ ಪರಿಸ್ಥಿತಿ ಯಲ್ಲಿ ಲಿಂಗಸುಗೂರ ತಾಲ್ಲೂಕಿನ ಚಿತ್ತಾಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯ ನಿಮಿತ್ಯ ಕಬಡ್ಡಿ ಪಂದ್ಯಾವಳಿ ಗಳನ್ನು ಉದ್ಘಾಟಿಸಲಾಯಿತು. ರಾಜ್ಯ ಸರ್ಕಾರವು ಲಾಕಡೌನ್ ಮಾಡಿದರಿಂದ ಯಾವುದೇ ಸಾರ್ವಜನಿಕ ಸಮಾರಂಭ.ಜಾತ್ರೆ ಮಾಡಬಾರದು ನಿಯಮವಿದ್ದರು ತಾಲ್ಲೂಕಿನ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಆಡಳಿತ ನೆಡೆಸುತ್ತಿದ್ದರೆ ಎಂಬ ಅನುಮಾನ ಮುಡುತ್ತಿದೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ರಂಗಪ್ಪ ನಾಯಕ ಮತ್ತು ಚನ್ನಾರಡ್ಡಿ ಬಿರಾದಾರ ಜಂಟಿ ಯಾಗಿ ಉದ್ಧಾಘಟಿಸಲಾಯಿತು. ಚಿತ್ತಾಪುರ್ ಗ್ರಾಮದಲ್ಲಿ ನಡೆದ ದುರ್ಗಾದೇವಿ ಜಾತ್ರೆಯ ನಿಮಿತ್ಯ ಕಬ್ಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿದರು. ತದನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚೆನ್ನಾರೆಡ್ಡಿ ಬಿರಾದಾರ ಗ್ರಾಮದಲ್ಲಿ ಯಾವತ್ತೂ ಶಿಳ್ಳೇಕ್ಯಾತ ಸಮಾಜದ ಬಂಧುಗಳು ಎಲ್ಲರೂ ಒಟ್ಟುಗೂಡಿ ಮಾಡುವಂತ ಕಾರ್ಯಕ್ರಮಗಳನ್ನು ಮೆಚ್ಚುವಂತ ಕಾರ್ಯವಾಗಿದೆ ಹಾಗೆ ತಾವೆಲ್ಲರೂ ಒಂದುಗೂಡಿ ಮಾಡುವಂತಹ ಕಾರ್ಯಕ್ರಮ ಲಿಂಗಸೂರು ತಾಲೂಕಿನಲ್ಲಿ ನಿಮ್ಮ ಸಮಾಜದ ಬಗ್ಗೆ ಎಷ್ಟು ಕೊಂಡಾಡಿದರೂ ಸಾಲದು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿದ ಮುಖಂಡರಿಗೆ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಕರುನಾಡು ರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷರಾದ ಸುಭಾಷ್ ಚವಾಣ್ ಮಾತನಾಡಿ ನಮ್ಮ ಕರೆಗೆ ಓಗೊಟ್ಟು ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮೆಲ್ಲರಿಗೂ ನಮ್ಮ ಸಮಾಜದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಾಜು ಚವಾಣ್. ಪರಶುರಾಮ್ ಜಮಖಂಡಿ ಭರಮಣ್ಣ ಶಿವಾಜಿ ಕಟ್ಟಿಮನಿ ರವಿಚಂದ್ರನ್ ಎಲ್ಲಪ್ಪ ಶಂಕರ್ ದೇವಣ್ಣ ಬಾಚಾಳ ಸುಭಾಸ ಸಂಗನಬಸವ ದಲಾಲಿ ಪರಸಪ್ಪ ಮುಂತಾದ ಊರಿನ ಗಣ್ಯರು ಉಪಸ್ಥಿತರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ