ಅಮ್ಮನ ಮಡಿಲು ಸೇವಾ ಸಂಸ್ಥೆಯ ಉದ್ದೇಶ…
ಇವತ್ತು ಮರಣ ಮೃದಂಗಕ್ಕೆ ಕಾರಣವಾಗಿರುವ ಕೊರೋನಾ ಎಂಬ ರೋಗ ದಟ್ಟವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ವ್ಯಾಪಕವಾಗಿ ಕೇಳಿ ಬಂದಿದ್ದು ಪ್ರಾಣವಾಯು ಅಂದರೆ ಆಮ್ಲಜನಕದ ಕೊರತೆ ಇದಕ್ಕೆ ಪ್ರಮುಖ ಕಾರಣ ಸಸ್ಯ ಸಂಪತ್ತಿನ ಹಸಿರು ಉಳಿಸಿಕೊಳ್ಳಲು ವಿಫಲವಾದದ್ದು ಈ ನಿಟ್ಟಿನಲ್ಲಿ ಅಮ್ಮನ ಮಡಿಲು ಸೇವಾ ಸಂಸ್ಥೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಹಚ್ಚುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಹಾಗೂ ಈ ಸಂದರ್ಭದಲ್ಲಿ ಒಂದು ಮಾತು ನೆನಪಿಗೆ ಬರುತ್ತೆ ಧರ್ಮೊ ರಕ್ಷತಿ ರಕ್ಷಿತ: ಎನ್ನುವಂತೆ ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಹೊಸ ಪಾಠವನ್ನು ನಾವೆಲ್ಲ ಅಭ್ಯಾಸ ಮಾಡಬೇಕಾಗಿದೆ ಅಮ್ಮನ ಮಡಿಲು ಸೇವಾ ಸಂಸ್ಥೆ ವತಿಯಿಂದ ಇವತ್ತು ಅಥಣಿ ಗ್ರಾಮೀಣ ಭಾಗದ ಸಜ್ಜಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ 101 ಗಿಡಗಳನ್ನು ನೆಡಲಾಯಿತು ಈ ಸಂದರ್ಭದಲ್ಲಿ RSS ತಾಲುಕಾ ಕಾರ್ಯವಾಹರಾದ ಶ್ರೀಯುತ ಸಂಜಯ ಜೀ ನಾಯಕ ಹಾಗೂ ಅಮ್ಮನ ಮಡಿಲು ಸೇವಾ ಸಂಸ್ಥೆಯ ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭದಲ್ಲಿ RSS ನ ತಾಲೂಕ ಕಾರ್ಯವಾಹರಾದ ಸಂಜಯ್ ಜೀ ನಾಯಿಕ, ಸಚಿನ್ ಪವಾರ್, ಸುನೀಲ್ ತಾಂವಶಿ, ಸಾಗರ್ ಬಡಿಗೇರ್, ವಿಶ್ವನಾಥ ಹರೋಲಿ, ಪರಶುರಾಮ್ ಭಂಗಿ, ವಿದ್ಯಾಧರ್ ಮಡಿವಾಳ, ಸದಾಶಿವ ಪೂಜಾರಿ ಹಾಗೂ ಇನ್ನುಳಿದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ