ಮುದ್ದೇಬಿಹಾಳ ತಾಲ್ಲೂಕಿನಲ್ಲಿ ವಿಷ ಸೇವಿಸಿ ಪ್ರಿಯಕರನ ತೊಡೆ ಮೇಲೆ ಪ್ರಾಣ ಬಿಟ್ಟ ಮಹಿಳೆ;

Spread the love

 ಮುದ್ದೇಬಿಹಾಳ ತಾಲ್ಲೂಕಿನಲ್ಲಿ ವಿಷ ಸೇವಿಸಿ ಪ್ರಿಯಕರನ ತೊಡೆ ಮೇಲೆ ಪ್ರಾಣ ಬಿಟ್ಟ ಮಹಿಳೆ;

ಪ್ರೇಯಸಿಯೊಬ್ಬಳು ವಿಷ ಸೇವಿಸಿ ಪ್ರೀಯಕರನ ತೊಡೆ ಮೇಲೆ ಪ್ರಾಣಬಿಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಗಂಗೂರು ಗ್ರಾಮದ 36 ವರ್ಷದ ರೇಣುಕಾ ಝಳಕಿ ಹಾಗೂ ಹಡಲಗೇರಿ ಗ್ರಾಮದ 40ವರ್ಷದ ಕುಡುಕ ಬಸವರಾಜ್ ಕಿಲಾರಹಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ರೇಣುಕಾಗೆ 3 ಮಕ್ಕಳು, ಬಸವರಾಜ್ ಗೆ 6 ಮಕ್ಕಳು, ಇಬ್ಬರಿಗು ಮದುವೆಯಾಗಿದ್ದರು ಅನೈತಿಕ‌ ಸಂಬಂಧ ಹೊಂದಿದ್ದರು. ಇಂದು ಇಬ್ಬರು ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದಾರೆ. ಈ ವೇಳೆ ಬಸವರಾಜ್ ಕುಡಿದ ಅಮಲಿನಲ್ಲಿದ್ದ, ಕಡಿಮೆ ವಿಷ ಕುಡಿದಿದ್ದ, ಈ ವೇಳೆ ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೆ ಅಸ್ವಸ್ಥಗೊಂಡು ಒದ್ದಾಡಿದ್ದಾಳೆ. ಈ ವೇಳೆ ಆಕೆಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಪ್ರೀಯಕರ ಬಸವರಾಜ ಸಂತೈಸಿದ್ದಾನೆ. ಬಳಿಕ ಬಸವರಾಜ್ ತೊಡೆ ಮೇಲೆಯೇ ಬಾಯಿದ ರಕ್ತಕಾರಿ ಒದ್ದಾಡಿದ್ದಾಳೆ. ಸ್ಥಳದಲ್ಲಿದ್ದ ಕುರಿಗಾಯಿಗಳು ಇದನ್ನ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಮನರಂಜನೆ ತೆಗೆದುಕೊಂಡಿದ್ದಾರೆ. ರೇಣುಕಾ ಸಾವನ್ನಪ್ಪಿದ ಬಳಿಕ ಬಸವರಾಜ್ ನನ್ನ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ರೇಣುಕಾ ಪತಿ ಅಶೋಕ ದುಡಿಯಲು ಕೇರಳಕ್ಕೆ ಗುಳೆ ಹೋಗಿದ್ದ, ಆಗ ಇಬ್ಬರಲ್ಲಿ ಪ್ರೇಮ ಅನೈತಿಕ ಸಂಬಂಧಕ್ಕೆ ತಿರುಗಿದೆ ಎನ್ನಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ – ಪ್ರವೀಣ ನಂದಿ ವಿಜಯಪೂರ

Leave a Reply

Your email address will not be published. Required fields are marked *