ಕೇವಲ ಸಹಾಯ ಮಾಡುವುದಲ್ಲದೆ ಈ ಕೊರೊನಾ ಸಂದರ್ಭದಲ್ಲಿ ಜಾಗೃತಿಯನ್ನೂ ಮೂಡಿಸುತ್ತಿರುವ ರೇಖಾ ಶ್ರೀನಿವಾಸ್…..
ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡುವದರ ಜೊತೆಗೆ ಲಸಿಕೆಯನ್ನು ಮುಂದೆ ನಿಂತು ಹಾಕಿಸುತ್ತಿದ್ದಾರೆ. ಇವರ ಕೆಲಸಕ್ಕೆ ನಾವೆಲ್ಲರೂ ಕೈಮುಗಿದು ಸಲಾಂ ಹೊಡೆಯಲೇಬೇಕು.ಇಂತಹ ಸಮಾಜ ಸೇವಕಿಗೆ ದೇವರು ಮತ್ತಷ್ಟು ಆಯಸ್ಸು ಆರೋಗ್ಯ ಸುಖ ಶಾಂತಿ ನೀಡಿ ಕಾಪಾಡಲಿ ಮತ್ತಷ್ಟು ಸಮಾಜ ಸೇವೆ ಮಾಡಲು ಅವಕಾಶ ಕಲ್ಪಿಸಲಿ ಎಂದು ಆಶಿಸೋಣ. ಕೆಲವು ಸಂಸ್ಥೆಗಳು ಕೆಲವು ಸಮಾಜ ಸೇವಕರು ಎರಡು ಮೂರು ದಿನಕ್ಕೆ ತಮ್ಮ ಸೇವೆಯನ್ನು ಸೀಮಿತಗೊಳಿಸುತ್ತಾರೆ. ಆದರೆ ರೇಖಾ ಶ್ರೀನಿವಾಸ್ ಎಂಬ ಮಹಿಳೆ ಕಳೆದ ಎರಡು ತಿಂಗಳಿಂದಲೂ ಕೂಡ ಕೊರೊನ ವಾರಿಯರ್ಸ್ಗಳಿಗೆ ನಿರಾಶ್ರಿತರಿಗೆ ಸಂಕಷ್ಟದಲ್ಲಿ ಸಿಲುಕಿರುವರಿಕೆ ವಿಭಿನ್ನ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ ಗಮನಾರ್ಹ. ರೇಖಾ ಶ್ರೀನಿವಾಸ್ ಬೇರೆಯವರಂತೆ ಅಲ್ಲ. ಕೇವಲ ಒಂದಷ್ಟು ಜನಕ್ಕೆ ಒಂದಷ್ಟು ದಿನಗಳ ಕಾಲ ಆಹಾರ ಪೊಟ್ಟಣಗಳನ್ನು ನೀಡುತ್ತಿಲ್ಲ. ಇದರ ಜತೆಗೆ ನೀರಿನ ಬಾಟಲ್ ಮಾಸ್ಕ್ ಸಾನಿಟೈಸರ್ ರೇಷನ್ ನೀಡುತ್ತಿದ್ದಾರೆ.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಕೊರೊನ ವಾರಿಯರ್ಸ್ ಗಳಾದ ಡಾಕ್ಟರ್ ಗಳಿಗೆ ನರ್ಸ್ ಗಳಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಕೂಡ ಆಹಾರ ನೀಡುವ ಮೂಲಕ ಪ್ರತಿನಿತ್ಯ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಕೆಲವು ಸಂಸ್ಥೆಗಳು ಕೆಲವು ಸಮಾಜ ಸೇವಕರು ಎರಡು ಮೂರು ದಿನಕ್ಕೆ ತಮ್ಮ ಸೇವೆಯನ್ನು ಸೀಮಿತಗೊಳಿಸುತ್ತಾರೆ. ಆದರೆ ರೇಖಾ ಶ್ರೀನಿವಾಸ್ ಎಂಬ ಮಹಿಳೆ ಕಳೆದ ಎರಡು ತಿಂಗಳಿಂದಲೂ ಕೂಡ ಕೊರೊನ ವಾರಿಯರ್ಸ್ಗಳಿಗೆ ನಿರಾಶ್ರಿತರಿಗೆ ಸಂಕಷ್ಟದಲ್ಲಿ ಸಿಲುಕಿರುವರಿಕೆ ವಿಭಿನ್ನ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ ಗಮನಾರ್ಹ. ಕೊರೊನಾ ಕೇವಲ ಒಬ್ಬರಿಗಷ್ಟೇ ಸಮಸ್ಯೆಯಾಗಿ ಕಾಡುತ್ತಿಲ್ಲ. ಇಡೀ ದೇಶದ ಪ್ರತಿಯೊಬ್ಬ ನಾಗರಿಕರೂ ಕೂಡ ಜೀವನ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ದುಡಿದು ತಿನ್ನುವವರಿಗೆ ಕೆಲಸವಿಲ್ಲದೆ ಆಯ್ದು ತಿನ್ನುವವರಿಗೆ ಅನ್ನವಿಲ್ಲದಂತೆ ಮಾಡಿಬಿಟ್ಟಿದೆ ಈ ಕೊರೊನಾ ಮಹಾಮಾರಿ.ಕಳೆದ ವರ್ಷವೂ ಸಹ ಇದೇ ರೀತಿ ಜನರಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿತ್ತು. ಈ ವರ್ಷವೂ ಅದಕ್ಕಿಂತ ಹೆಚ್ಚಾಗಿ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ . ಹೆಸರು ರೇಖಾ ಶ್ರೀನಿವಾಸ್ ಸಮಾಜ ಸೇವಕಿ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀ ದುರ್ಗಾ ಫೌಂಡೇಶನ್ ಸಮಾಜ ಸೇವಾ ಟ್ರಸ್ಟ್ ಮಾಡಿಕೊಂಡು ಸಮಾಜ ಸೇವೆಗೆ ನಿಂತಿರುವ ದಿಟ್ಟ ಮಹಿಳೆ, ಇವರ ಸಮಾಜ ಪರ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ ಪತಿ ಡಾಕ್ಟರ್ ಶ್ರೀನಿವಾಸ್.ಪ್ರತಿನಿತ್ಯ ನೂರಾರು ಜನರಿಗೆ ಕಳೆದ ವರ್ಷವೂ ಕೂಡ ಇದೇ ರೀತಿ ಸಹಾಯ ಮಾಡಿದ್ದರು.ಕರೋನಾ ಎರಡನೇ ಅಲೆಯಲ್ಲೂ ನಿರಂತರ ಎರಡು ತಿಂಗಳಿನಿಂದಲೂ ಸತತವಾಗಿ ಪ್ರತಿದಿನ ಅನ್ನ ಆಹಾರ ನೀರು ರೇಷನ್ ಕಿಟ್ ಮಾಸ್ಕ್ ಸಾನಿಟೈಸರ್ ಕೊಡೆ ನೀಡುವುದರ ಜತೆಗೆ ಕೊರೋನಾ ಸಂಕಷ್ವದ ಸಮಯದಲ್ಲಿ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನ ಮಾಡಿ ಗೌರವಿಸಿ ಜಾಗೃತಿ ಕೊರೊನಾ ಕೇವಲ ಒಬ್ಬರಿಗಷ್ಟೇ ಸಮಸ್ಯೆಯಾಗಿ ಕಾಡುತ್ತಿಲ್ಲ. ಇಡೀ ದೇಶದ ಪ್ರತಿಯೊಬ್ಬ ನಾಗರಿಕರೂ ಕೂಡ ಜೀವನ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ದುಡಿದು ತಿನ್ನುವವರಿಗೆ ಕೆಲಸವಿಲ್ಲದೆ ಆಯ್ದು ತಿನ್ನುವವರಿಗೆ ಅನ್ನವಿಲ್ಲದಂತೆ ಮಾಡಿಬಿಟ್ಟಿದೆ ಈ ಕೊರೊನಾ ಮಹಾಮಾರಿ.ಕಳೆದ ವರ್ಷವೂ ಸಹ ಇದೇ ರೀತಿ ಜನರಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿತ್ತು. ಈ ವರ್ಷವೂ ಅದಕ್ಕಿಂತ ಹೆಚ್ಚಾಗಿ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ . ಹಿಂದಿನದಿನಗಳಲ್ಲಿ ರಾಜಕೀಯ ವ್ಯಕ್ತಿಗಳು ಉದ್ಯಮಿಗಳು ಹಣವಂತರು ಶ್ರೀಮಂತರು ಕೋಟಿಗಟ್ಟಲೆ ಹಣವನ್ನು ವ್ಯಾಪಾರಕ್ಕಾಗಿ ವಿನಿಯೋಗಿಸಲು ಚಡಪಡಿಸುತ್ತಿದ್ದಾರೆ.ಕರೋನಾ ಸಂಕಷ್ಟ ಕಾಲದಲ್ಲಿಯೂ ಕೂಡ ವ್ಯಾಪಾರ ದೃಷ್ಟಿಕೋನವನ್ನು ಇಟ್ಟುಕೊಂಡು ಜೀವಿಸುತ್ತಿದ್ದಾರೆ. ಆದರೆ ರೇಖಾ ಶ್ರೀನಿವಾಸ್ ಇದೆಲ್ಲವನ್ನೂ ಬದಿಗೊತ್ತಿ ಬಡವರ ಸೇವೆಗಾಗಿ ಸದಾ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ರಾಜಕೀಯವಾಗಿ ರಾಜ್ಯದಲ್ಲಿ ಬಲಿಷ್ಠರಾದವರಿದ್ದಾರೆ. ರಾಜ್ಯ ಮತ್ತು ದೇಶಾದ್ಯಂತ ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಉದ್ಯಮಿಗಳಿದ್ದಾರೆ. ಅವರೆಲ್ಲರೂ ಮನಸ್ಸು ಮಾಡಿದರೆ ಕರೊನಾ ಸಂದರ್ಭದಲ್ಲಿ ಬಡವರ ಸೇವೆಗಾಗಿ ನಿಲ್ಲಬೇಕಿತ್ತು. ಆದರೆ ಅವರಾರು ಸೇವಾ ಮನೋಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ವರದಿ – ಮಹೇಶ ಶರ್ಮಾ