ತಾವರಗೇರಾ ಪಟ್ಟಣದ ಶ್ರೀ ಶ್ಯಾಮೀದಲಿ ಉರುಸ್ ರದ್ದಾದ ಅಂಗವಾಗಿ ಠಾಣೆಯಲ್ಲಿ ಶಾಂತಿ ಸಭೆ..
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಅದ್ದೂರಿಯಾಗಿ ನೆಡೆಯುವ. ಉರುಸ್ ಈ ಬಾರಿ ಲಾಕಡೌನ ನಿಮಿತ್ಯವಾಗಿ ಕೊಪ್ಪಳ ಜಿಲ್ಲಾಡಳಿತ ರದ್ದುಗೊಳಿಸಿದೆ ಆ ನಿಟ್ಟಿನಲ್ಲಿ ಇಂದು ತಾವರಗೇರ ಠಾಣೆಯಲ್ಲಿ ಪಟ್ಟಣದ ಸರ್ವ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಮಾತನಾಡಿದ ಉದ್ಯಮಿ ಬಸನಗೌಡ ಮಾಲಿ ಪಾಟೀಲ ಪ್ರತಿ ವರ್ಷದಂತೆ ನಡೆಯಬೇಕಿದ್ದ ಉರುಸ್ ಇಂದು ಕೋವಿಡ್ ಲಾಕಡೌನ ನಿಯಮಿತವಾಗಿ ಜಿಲ್ಲಾಡಳಿತ ರದ್ದುಗೊಳಿಸಿದೆ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದರು. ನಂತರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀ ಶಂಕರ್ ಕಾಳೆ ಮಾತನಾಡಿ ಯಾವುದೇ ಕಾರಣಕ್ಕೂ ದರ್ಗಾಗಳಲ್ಲಿ ಪೂಜೆ ಸಲ್ಲಿಸುವುದಕ್ಕೆ ಅವಕಾಶ ನಿಡುವದಿಲ್ಲ ಜಿಲ್ಲಾಧಿಕಾರಿಗಳ ಆದೇಶದಂತೆ ನಿಯಮಗಳನ್ನು ಪಾಲನೆ ಮಾಡಬೇಕೆಂದುರು ನಂತರ ಪಟ್ಟಣ ಪಂಚಾಯ್ತಿ ಸದಸ್ಯರಾದ ಚಂದ್ರಶೇಖರ್ ನಾಲತ್ವಾಡ್ ಸ್ಥಳೀಯ ಪ್ರಭಾರ ಠಾಣಾಧಿಕಾರಿಯಾದ ಮಲ್ಲಪ್ಪ ವಜ್ರದ ಮಾತನಾಡಿ ಜಿಲ್ಲಾಡಳಿತ ಆದೇಶದಂತೆ ಕೋವಿಡ್ ಮಾರ್ಗಸೂಚಿಯಂತೆ ಪಟ್ಟಣದ ಜನತೆ ಸಹಕರಿಸಬೇಕು ಎಂದರು ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿ ಸೂರ್ಯಕಾಂತ ದೇಸಾಯಿ ಹಾಗೂ ಎರಡು ದರ್ಗಾದ ಮುಜಾವರಗಳು ಮತ್ತು ಪಟ್ಟಣದ ವಿವಿಧ ಸಮಾಜದ ಮುಖಂಡರು ಗಳು ಭಾಗಿಯಾಗಿದ್ದರು ಪೋಲಿಸ್ ಸಿಬ್ಬಂದಿ ಗುಂಡಪ್ಪ ಸ್ವಾಗತಿಸಿದರು ಹನುಮಗೌಡ ವಂದಿಸಿದರು ಬಸವರಾಜ ಇಂಗಳದಾಳ ನಿರೂಪಿಸಿದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ
ಕರ್ನಾಟಕದ ಪ್ರತಿ ಜಿಲ್ಲೆ ಹಾಗೂ ತಾಲೂಕು, ಪ್ರತಿ ಹಳ್ಳಿ/ಹಳ್ಳಿಗಳಿಂದ ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಪರ್ಕಿಸಿರಿ.
ಆರ್.ಬಿ.ಅಲಿಆದಿಲ್ ಸಂಪಾದಕರು ಅಮಾಜಪ್ಪ ಹೆಚ್.ಜಿ. ಉಪ-ಸಂಪಾದಕರು
ಮೋ.ನಂ / 9535969428 ಮೋ.ನಂ / 8861279127