ಯಲಬುರ್ಗಾ ಪಟ್ಟಣದಲ್ಲಿ ಯೋಗದಿಂದ ಮಾನಸಿಕ ಬಲವರ್ಧನೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ……

Spread the love

 ಯಲಬುರ್ಗಾ ಪಟ್ಟಣದಲ್ಲಿ ಯೋಗದಿಂದ ಮಾನಸಿಕ ಬಲವರ್ಧನೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ……

ಯಲಬುರ್ಗಾ : ಯೋಗ ಮಾಡುವುದರಿಂದ ಮನುಷ್ಯನ ದೇಹಕ್ಕೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮಾತನಾಡಿದರು ಪಟ್ಟಣದ ಸಂಗಣ್ಣ ತಂಗಿನಕಾಯಿ ಇವರಲ್ಲಿ ಪತಂಜಲಿ ಯೋಗ ಸಮಿತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆಯೋಜಿಸಿದ್ದರು ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮೂರು ಸಾವಿರ ವರ್ಷಗಳ ಹಿಂದೆ ಋಷಿಮುನಿಗಳು ಯೋಗಾಭ್ಯಾಸದ ಮೂಲಕ ದೈಹಿಕ ಸದೃಢತೆ ಹಾಗೂ ಆರೋಗ್ಯ ಕಾಪಾಡಿಕೊಂಡಿದ್ದರು ಯೋಗ ಯಾವುದೇ ಜಾತಿಗೆ ಸೀಮಿತವಾಗಿಲ್ಲ ಎಂದು ಮಾತನಾಡಿದರು ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಳವಡಿಸಿಕೊಳ್ಳಲು ನಾವು ಒಂದಾಗಿ ಕೆಲಸ ಮಾಡೋಣ ಎಂಬ ಸಂದೇಶ ನೀಡಿದ್ದರು.  ಕಿಟ್ ವಿತರಣೆ: ಪತಂಜಲಿ ಯೋಗ ಸಮಿತಿಯಿಂದ ಪತ್ರಕರ್ತರಿಗೆ ಹಾಗೂ ಅಂಗವಿಕಲರಿಗೆ ಆಹಾರದ ಕೀಟಗಳನ್ನು ವಿತರಿಸಿದರು   ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಿದ್ದ ಪ್ರಮುಖ ಮುಖ್ಯಸ್ಥರಾದ ಸಂಗಣ್ಣ ತೆಂಗಿನಕಾಯಿ ಬಸವರಾಜ್ ಉಳಗಡ್ಡಿ ಅಮರೇಶ್ ಕಲಬುರ್ಗಿ ಡಾ!! ಶರಣಪ್ಪ ಕೊಪ್ಪಳ ಡಾ. ನಂದಿತಾ ದಾನರೆಡ್ಡಿ ಜ್ಯೋತಿ ಪಲ್ಯದ ಇತರರು ಭಾಗಿಯಾಗಿದ್ದರು.

ವರದಿ –  ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *