ಆರ್. ಎಂ. ಎಲ್. ನಗರದ ನ್ಯಾಯಬೆಲೆ ಅಂಗಡಿ ಕುರಿತು ವಿನಾಕಾರಣ ದೂರು ನೀಡಿ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ….
ಕೆ.ನಾಗರಾಜ್ ಬಡಿತ ವಿತರಕರು ಸ್ಟೋರ್ ನಂಬರ್.125 ಆರ್.ಎಂ.ಎಲ್. ನಗರ ವ್ಯಾಪ್ತಿಗೆ ಸಂಬಂಧಿಸಿದ್ದು ಕಳೆದ 40 ವರ್ಷಗಳಿಂದ ವಾರ್ಡ್ ಗೆ ಸಂಬಂಧಪಟ್ಟ ನಾಗರಿಕರಿಗೆ ಆಹಾರ ಇಲಾಖೆಯ ಪಡಿತರ ವಿತರಕರಾಗಿ ಇದುವರೆಗೂ ಆಹಾರ ಧಾನ್ಯ ಪಂಡಿತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗದಂತೆ ಅಧಿಕಾರಿಗಳ ಮಾರ್ಗಸೂಚಿಯಂತೆ ವಿಸ್ತರಿಸುತ್ತಾ ಬಂದಿರುವುದು ಆದರೆ ಇತ್ತೀಚೆಗೆ ಆಹಾರ ನಿರೀಕ್ಷಕರು, ಕೆಲ ಅಧಿಕಾರಿಗಳು ಸೇರಿದಂತೆ ಉದ್ದೇಶಪೂರ್ವಕವಾಗಿ ಸ್ಟೋರ್ ಮಾಲೀಕರಾದ ಕೆ.ನಾಗರಾಜ್ ರವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮೇ 22-5-2021 ರಂದು ಅಧಿಕಾರಿಗಳು ಕೆ.ನಾಗರಾಜ್ ರವರ ನ್ಯಾಯಬೆಲೆ ಅಂಗಡಿಗೆ ಏಕಾಏಕಿ ದಾಳಿ ಮಾಡುವುದಲ್ಲದೆ ಅಕ್ರಮವಾಗಿ ಆಹಾರ ಧನ್ಯ ಮಾಡಿರುವುದು ಎಂದು ದಬ್ಬಾಳಿಕೆ ನಡೆಸುತ್ತಿರುವ ಸಮಯದಲ್ಲಿ ಕೆ.ನಾಗರಾಜ್ ರವರು ಪ್ರಶ್ನಿಸಿದ್ದಕ್ಕೆ ಸ್ಥಳಕ್ಕೆ ಬಂದ ಅಧಿಕಾರಿಗಳು ಈ ಕೂಡಲೇ ಅಂಗಡಿ ಲೈಸೆನ್ಸ್ ಅನ್ನು ರದ್ದು ಪಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದು, ಮತ್ತು ಜಿಲ್ಲಾಡಳಿತಕ್ಕೂ ಕೂಡ ತಪ್ಪು ಮಾಹಿತಿ ನೀಡುವ ಮೂಲಕ ಲೈಸೆನ್ಸ್ ರದ್ದುಗೊಳಿಸುವ ಪ್ರಯತ್ನದಲ್ಲಿ ವಿಫಲರಾಗಿರುತ್ತಾರೆ. ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಕೆ.ನಾಗರಾಜ್ ರವರಿಗೆ ಯಥಾ ರೀತಿಯಲ್ಲಿ ಪಡಿತರದಾರರಿಗೆ ವಿತರಣೆ ಮಾಡಲು ಸೂಚಿಸಿದ್ದು, ಆದರೆ ದಿನಾಂಕ 18-6-2021 ರಂದು F.C.I. ಗೌಡನಿಂದ ಪಡಿತ ದಾರರಿಗೆ ವಿಚಾರಣೆಗೆಂದು ಲಾರಿಯಲ್ಲಿ ತರಿಸಿದ ಅಕ್ಕಿಯನ್ನು ಆಹಾರ ನಿರೀಕ್ಷಕರು ವಶಪಡಿಸಿಕೊಂಡು ಹರಾಜು ಮಾಡುವುದಾಗಿ ಕಾನೂನುಬಾಹಿರ ಚಟುವಟಿಕೆ ಮಾತುಗಳನ್ನು ತಿಳಿಸುತ್ತಾರೆ, ಮತ್ತು ವಿಕೆ ಸಂಬಂಧಪಟ್ಟಂತೆ ಕೆಲ ಕಿಡಿಗೇಡಿಗಳು ವಿನಾಕಾರಣ ಅಮಾಯಕರಾದ ಕೆ.ನಾಗರಾಜ್ ಅವರ ಮೇಲೆ ವಿನಾಕಾರಣ ದೂರ ದಬ್ಬಾಳಿಕೆ ನಡೆಸುತ್ತದೆ ಬಂದಿರುತ್ತಾರೆ, ಅದರಿಂದ ನಮ್ಮ ಸಮಿತಿಯು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ವಿನಾಕಾರಣ ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಗಳು ಸೇರಿದಂತೆ ಕೆಲ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಮಾಯಕರಾದ ಕೆ.ನಾಗರಾಜ್ ರವರಿಗೆ ನ್ಯಾಯ ಒದಗಿಸುವ ಮೂಲಕ ಮುಂದೆ ಯಾವುದೇ ರೀತಿಯಲ್ಲೂ ಆಹಾರ ಅಧಿಕಾರಿಗಳಿಂದ ವಿನಾಕಾರಣ ತೊಂದರೆ ಆಗದಂತೆ K.ನಾಗರಾಜರವರಿಗೆ ಯಥಾಪ್ರಕಾರ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಾಗಿ ಕೇಳಿಕೊಳ್ಳುತ್ತೇವೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸಮಿತಿಯು ಮುಂದಿನ ದಿನಗಳಲ್ಲಿ ಉಗ್ರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ವರದಿ – ಮಹೇಶ ಶರ್ಮಾ