ಕವಿತಾಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮೃತ ರಾಥೋಡ್ ವರ್ಗಾವಣೆ ರದ್ದುಗೊಳಿಸಲು ಆಗ್ರಹ……
ಕವಿತಾಳ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯಾದ ಡಾ. ಅಮೃತ್ ರಾಠೋಡ್ ರವರನ್ನು ತೋರಣದಿನ್ನಿಗೆ ನಿಯೋಜನೆ ಮಾಡಿರುವ ಆದೇಶ ವನ್ನು ಕೂಡಲೇ ರದ್ದು ಪಡಿಸಿ ಈಗಿರುವ ಸ್ಥಾನದಲ್ಲೆ ಮುಂದುವರಿಯಿಸಬೇಕೆಂದು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ( DYFI ), ಭಾರತ ವಿದ್ಯಾರ್ಥಿ ಫೆಡರೇಷನ್ ( SFI ), ಜೈ ಭಾರತ ಸಂಘಟನೆ, ಕವಿತಾಳ ನವ ನಿರ್ಮಾಣ ವೇದಿಕೆ, ಇತರೆ ಸಂಘಟನೆಗಳು ಸೇರಿ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಹೋರಾಟವನ್ನು ಮಾಡಿದರು. ಹೋರಾಟ ವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷ ಹಾಗೂ ಕವಿತಾಳ ನವ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಡಾ. ಅಮೃತ್ ರಾಠೋಡ್ 2018 ರ ನವೆಂಬರ್ ತಿಂಗಳಿನಲ್ಲಿ ಕವಿತಾಳ ಪಟ್ಟಣಕ್ಕೆ ಸೇವೆಗೆ ಹಾಜರಾದ ಅವರು 2019ರ ಜೂನ್ ತಿಂಗಳಲ್ಲಿ ಕವಿತಾಳ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಜವಾಬ್ದಾರಿ ತೆಗೆದುಕೊಂಡ ನಂತರ ದಕ್ಷತೆ ಹಾಗೂ ಪಾರದರ್ಶಕತೆಯಿಂದ ಹಗಲಿರುಳು ಕೆಲಸವನ್ನು ಮಾಡಿ ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಮಾಡಿದರು. ದಿನದ 24 ಘಂಟೆಗಳ ಕಾಲ ಸೇವೆಗೆ ಲಭ್ಯವಾಗುತ್ತಿದ್ದರು ಇದೆಲ್ಲದರ ಪರಿಣಾಮವಾಗಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹಾವು ಕಡಿತದಿಂದ ಉಂಟಾಗುವ ಸಾವುಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದವು, ಸುಸಜ್ಜಿತ ಹೆರಿಗೆ ಆಗಿದ್ದವು ಹಾಗೂ ಆಸ್ಪತ್ರೆಯ ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡಿದ್ದರು, ಕೊರೋನಾ ತಡೆಗಟ್ಟಲು ಇವರು ಮಾಡಿದ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಸಿಬ್ಬಂದಿಗಳನ್ನು ಸಹಕಾರಕ್ಕೆ ತೆಗೆದುಕೊಂಡು ಒಂದು ಉತ್ತಮವಾದ ಆರೋಗ್ಯ ಸೇವೆಯನ್ನು ಜನತೆಗೆ ಒದಗಿಸಿದ್ದರು. ಇಂತಹ ವೈದ್ಯ ಅಧಿಕಾರಿಯನ್ನು ಕೊರೋನಾದ ಮಹಾ ಮಾರಿಯ ಈ ಸಂಕಷ್ಟದ ಪರಿಸ್ಥಿತಿ ಯಲ್ಲಿ ಏಕಾಏಕಿ ಮಸ್ಕಿ ಶಾಸಕರ ಒತ್ತಡಕ್ಕೆ ಮಣಿದು ಅವರ ಮೌಖಿಕ ಮೂಲಸ್ಥಳ ತೋರಣದಿನ್ನಿಗೆ ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದನ್ನು ನಾವುಗಳು ಬಲವಾಗಿ ಖಂಡಿಸುತ್ತೇವೆ ಕೂಡಲೇ ಆದೇಶ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು. ನಂತರ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಕಿರಿಲಿಂಗಪ್ಪ ಮಾತನಾಡಿ ಕವಿತಾಳ ಪಟ್ಟಣ ಸುಮಾರು 25000 ಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ಹತ್ತಾರು ಹಳ್ಳಿಗಳನ್ನು ಹೊಂದಿ ಒಂದು ಕೇಂದ್ರ ಬಿಂದು ಇಲ್ಲಿನ ಜನತೆಯ ಆರೋಗ್ಯ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಸೇರಿ ಇತರೆ ಹೆಚ್ಚುವರಿ ವೈದ್ಯರ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂದರು. ಕವಿತಾಳ ನವ ನಿರ್ಮಾಣ ವೇದಿಕೆಯ ಗೌರವಧ್ಯಕ್ಷರಾದ ಭೀಮನಗೌಡ ವಂದ್ಲಿ ಮಾತನಾಡಿ ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆದು, ವೈದ್ಯರನ್ನು ಕವಿತಾಳದಲ್ಲೆ ಮುಂದುವರಿಸಿ ಯಥಾಸ್ಥಿತಿ ಯನ್ನು ಕಾಪಾಡಿ ಆಸ್ಪತ್ರೆಗೆ ಬೇಕಾಗ ಆಗತ್ಯ ಮೂಲಭೂತ ಸೌಕರ್ಯಗಳನ್ನು, ಖಾಲಿ ಇರುವ ವೈದ್ಯರನ್ನು ಹಾಗೂ ಇತರೆ ಆಗತ್ಯ ಸೌಲಭ್ಯಗಳನ್ನು ಒದಗಿಸಿ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಅನುಕೂಲ ಮಾಡಿಕೊಬೇಕೆಂದು ಒತ್ತಾಯಿಸಿದರು. ಜೈ ಭಾರತ್ ಸಂಘಟನೆಯ ಅಧ್ಯಕ್ಷರಾದ ಜಹಾಂಗೀರ್ ಪಾಷ, ವಾಲ್ಮೀಕಿ ಸಂಘಟನೆಯ ಮುಖಂಡರಾದ ಭೀಮಣ್ಣ ನಾಯಕ ಕಾಚಾಪುರ, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಸೇರಿದಂತೆ ಇತರರು ಮಾತನಾಡಿದರು. ಹೋರಾಟದ ಮನವಿಯನ್ನು ಡಿಎಚ್ಒ ಪರವಾಗಿ ಸ್ಥಳಕ್ಕೆ ಬಂದಿದ್ದ ತಾಲೂಕು ವೈದ್ಯಾಧಿಕಾರಿಯಾದ ಚಂದ್ರಶೇಖರಯ್ಯ ಸ್ವಾಮಿ ಇವರಿಗೆ ನೀಡಿ ಅವರಿಂದ ಲಿಖಿತ ಭರವಸೆಯನ್ನು ಪಡೆದುಕೊಂಡು ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಟ್ಟರು. ಈ ಸಂಧರ್ಭದಲ್ಲಿ DYFI ನಗರ ಘಟಕದ ಅಧ್ಯಕ್ಷರಾದ ಮೊಹಮ್ಮದ್ ರಫಿ, SFI ನಗರ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಜೈ ಭಾರತ ಸಂಘಟನೆಯ ಅಧ್ಯಕ್ಷರಾದ ಜಹಾಂಗೀರ್ ಪಾಷಾ, ಮುಖಂಡರಾದ ಶೇಖರಪ್ಪ ಸಾಹುಕಾರ್, ಈಶಪ್ಪ ಕಾಮರೆಡ್ಡಿ, ಸಂಗಪ್ಪ, ಜಾವೀದ್ ಎಂ.ಎಸ್. ಸುರೇಶ್, ವೆಂಕಟೇಶ ಶಂಕ್ರಿ, ವೆಂಕಟೇಶ, ನಾಗಮೋಹನ್ ಸಿಂಗ್, ಮಹಾದೇವ, ಹನುಮನಗೌಡ ನಾಯಕ, ಖಾಜಾನಗೌಡ ಸಿರವಾರ, ಕೃಷ್ಣಾ, ಸಂತೋಷ, ಆಜಪ್ಪ, ಅಯ್ಯಾಳ್ಳಿ, ಕಿರಿಲಿಂಗಪ್ಪ ಎಂ, ಶರಣಪ್ಪ ಸೇರಿದಂತೆ ಅನೇಕರಿದ್ದರು..
ವರದಿ – ಆನಂದ್ ಸಿಂಗ್ ಕವಿತಾಳ