ಬಾಲನಟಿ ಭೈರವಿಯ ಮನವಿಗೆ ಸ್ಪಂದಿಸಿದ ದಾನಿಗಳು.
ನಮ್ಮ ಮನವಿಗೆ ಓಗೊಟ್ಟು ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡಿದಂತಹ ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾ ಹೊಸಹಳ್ಳಿ ಪಂಚಾಯಿತಿ ಪಿ.ಡಿ.ಒ. ಪ್ರಕಾಶ್ ಮತ್ತು ಬಾಲನಟಿ ಗನಿಕ ಅವರ ಕುಟುಂಬದವರಿಗೆ ಬಾಲನಟಿ ಭೈರವಿ ಧನ್ಯವಾದಗಳನ್ನು ತಿಳಿಸಿದಳು. ಭೈರವಿ ಇಂದು ಲಗ್ಗೆರೆಯಲ್ಲಿ ನಡೆದ ಕೊರೋನಾ ಕಾರಣ ಸಂಕಷ್ಟದಲ್ಲಿ ಇರುವ ಬಡ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದಳು. ಇದೇ ಸಂದರ್ಭದಲ್ಲಿ ಮಾತನಾಡಿದ ಬಾಲನಟಿ ಗನಿಕ ನನ್ನ ಗೆಳತಿ ಗಿಣಿರಾಮ ಧಾರಾವಾಹಿ ಖ್ಯಾತಿಯ ಬಾಲನಟಿ ಭೈರವಿ ಕುಟುಂಬ ಬಡಕಲಾವಿದರಿಗೆ ಸಹಾಯ ಮಾಡುವುದನ್ನು ನೋಡಿ ನಮ್ಮ ಕುಟುಂಬದ ವತಿಯಿಂದ ನನ್ನ ಅಭಿನಯದಿಂದ ಬಂದ ಹಣದಲ್ಲಿ 10 ಜನರಿಗೆ ಕಿಟ್ ಕೊಡಿಸಿದ್ದಾಗಿ ತಿಳಿಸಿದಳು. ಇದೇ ಸಂದರ್ಭದಲ್ಲಿ ಕಿಟ್ ಸ್ವೀಕರಿಸಿ ಮಾತನಾಡಿದ ನಟಿ ಕವಿತ ಸರ್ಕಾರದ ನೆರವು ಗುರುತು ಚೀಟಿ ಇಲ್ಲದ ಕಲಾವಿದರಿಗೆ ತಲುಪದೇ ಇರುವ ಈ ಸಂದರ್ಭದಲ್ಲಿ ಬಾಲನಟಿ ಭೈರವಿ ತನ್ನ ಅಭಿನಯದಿಂದ ಗಳಿಸಿದ ಹಣದಲ್ಲಿ ನೂರಾರು ಜನರಿಗೆ ಕಿಟ್ ಒದಗಿಸಿ ಮಾನವೀಯತೆ ಮರೆದಿದ್ದಾಳೆ ಎಂದು ತಿಳಿಸಿದರು. ಸಂಚಾರಿ ಸತ್ಯ ಪತ್ರಿಕೆಯ ವರದಿಗಾರ ರಘು ಮಾತನಾಡಿ ಬಾಲನಟಿ ಭೈರವಿ ತಾನು ನೆರವು ನೀಡಿದ್ದಲ್ಲದೆ, ತನ್ನ ಪರಿಚಯದವರಲ್ಲಿ ಮನವಿ ಮಾಡಿ ಮತ್ತಷ್ಟು ಕಲಾವಿದರಿಗೆ ನೆರವು ಕೊಡಿಸುತ್ತಿರುವುದು ಸಹ ಪ್ರಶಂಸನೀಯ, ಆ ಪುಟ್ಟ ಬಾಲಕಿಯ ಮನವಿಗೆ ಸ್ಪಂದಿಸಿದ ದಾನಿಗಳಿಗೂ ಆ ಭಗವಂತ ಮತ್ತಷ್ಟು ದಾನ ನೀಡುವಂತೆ ಪ್ರೇರೆಪಿಸಲಿ ಎಂದರು. ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕರಾದ ಕೃಷ್ಣಮೂರ್ತಿ, ಹಾಗೂ ರಮೇಶ್ ಜಯಸಿಂಹ, ಹಾಗೂ ಯುವ ಮುಖಂಡ ಜ್ಞಾನೇಶ್, ಪ್ರೀತಿ ಬೇಸೆದ ಕರೋನಾ ಕಿರುಚಿತ್ರದ ನಾಯಕ ನಟ ಮೌನೇಶ್ ರಾಥೋಡ್, ಮುಂತಾದವರು ಭಾಗವಹಿಸಿದ್ದರು.
ವರದಿ:-ಮೌನೇಶ್ ರಾಥೋಡ್ ಬೆಂಗಳೂರು