ಸರ್ಕಾರದ ವತಿಯಿಂದ ಒಂದು ಸ್ಮಾರ್ಟ್ ಬೋರ್ಡ್, ಹಾಗೂ ಗ್ರೀನ್ ಬೋರ್ಡ್ & ವಿದ್ಯಾರ್ಥಿಗಳಿಗೆ 200 ಬೆಂಚ್ ಗಳನ್ನು ಹಾಗೂ ಮತ್ತಿತರ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ….
ಕಾಗವಾಡ ಪಟ್ಟಣದ ಬಸವ ನಗರದ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ವತಿಯಿಂದ ಒಂದು ಸ್ಮಾರ್ಟ್ ಬೋರ್ಡ್, ಹಾಗೂ ಗ್ರೀನ್ ಬೋರ್ಡ್ & ವಿದ್ಯಾರ್ಥಿಗಳಿಗೆ 200 ಬೆಂಚ್ ಗಳನ್ನು ಹಾಗೂ ಮತ್ತಿತರ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರು ಚಾಲನೆ ನೀಡಿ, ಪಟ್ಟಣ ಪಂಚಾಯತ್ ವತಿಯಿಂದ ಕಾಗವಾಡ ಗ್ರಾಮದ ಎಲ್ಲ ಕುಟುಂಬಗಳಿಗೆ ಘನತ್ಯಾಜ್ಯ ಸಂಗ್ರಹಿಸಲು 6 ಸಾವಿರ ಬಕೆಟ್ಟಗಳನ್ನು ವಿತರಿಸಿದರು. ಈ ಸಮಯದಲ್ಲಿ ಕಾಗವಾಡ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೀರಣ್ಣಗೌಡ ಎಗನಗೌಡರ, ಕ್ಷೇತ್ರ ಶಿಕ್ಷಣದ ಅಧಿಕಾರಿಗಳಾದ ಶ್ರೀ ಮಲ್ಲಪ್ಪ ಮುಂಜೆ, ಪಟ್ಟಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವೀಂದ್ರ ತಾನಗೋಡ, ಪಿಡಿಓ ಶ್ರೀ ವೀರಪ್ಪ ಗಡಗಂಚಿ ಹಾಗೂ ಸ್ಥಳೀಯ ಮುಖಂಡರಾದ ಶ್ರೀ ಸುಭಾಷ ಕಠಾರೆ, ಶ್ರೀ ಪ್ರಕಾಶ ಪಾಟೀಲ, ಶ್ರೀ ಪ್ರಕಾಶ ಚೌಗುಲೆ, ಶ್ರೀ ಸಚಿನ ಕವಟಗೆ, ಶ್ರೀ ಬಾಬಾಸಾಬ ಚೌಗುಲೆ, ಶ್ರೀ ಕಾಕಾಸಾಬ ಚೌಗುಲೆ, ಶ್ರೀ ವಿಠ್ಠಲ ಪವಾರ, ಶ್ರೀ ಪ್ರಕಾಶ ದೊಂಡಾರೆ, ಶ್ರೀ ರಮೇಶ ಚೌಗುಲೆ, ಶ್ರೀ ಜಾವೇದ ಶೇಖ್, ಶ್ರೀ ಅರುಣ ಜೋಶಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ