ವಿಶ್ವ ಗುರು ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ಸಾಹಿತಿ, ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಸಂಗಮೇಶ ಎನ್ ಜವಾದಿಯವರ ಹರ್ಷ.
ಚಿಟಗುಪ್ಪ : ರಾಜ್ಯದ ಮಟ್ಟಿಗೆ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಸಿಕೊಳ್ಳುವ ಕರ್ನಾಟಕ ವಿಧಾನಸೌಧದ ಆವರಣದಲ್ಲಿ ಜಗತ್ತಿನ ಪ್ರಥಮ ಸಂಸತ್ತಿನ ಜನಕ,ಜಗತ್ತಿಗೆ ಸಮಾನತೆ ಸಾರಿದ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ನಿರ್ಧಾರ ತಗೆದುಕೊಂಡ ಶ್ರೀ ಶರಣ ಬಿ. ಎಸ್.ಯಡಿಯೂರಪ್ಪನವರಿಗೆ ನಾಡಿನ ಬಸವಾಭಿಮಾನಿಗಳಿಂದ ಅಭಿಮಾನದ ಕೃತಜ್ಞತೆಗಳು. ಮಹಾ ಮಾನವತಾವಾದಿ ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಅಳವಡಿಸಲು ಘನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಕಡತ ಮಂಡಿಸಲು ಸೂಚನೆ ನೀಡಿರುವುದಕ್ಕೆ ಸಾಹಿತಿ, ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಸಂಗಮೇಶ ಎನ್ ಜವಾದಿಯವರು ಅಂತಃಕರಣದಿಂದ ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. 12ನೇ ಶತಮಾನದಲ್ಲಿ ತಳ ಸಮುದಾಯಗಳನ್ನು ಗುರುತಿಸಿ ಅವುಗಳಿಗೆ ಸಾಮಾಜಿಕ ಸ್ಥಾನಮಾನಗಳನ್ನು ಕೊಟ್ಟು, ಕಾಯಕದ ಮಹತ್ವ ವಿಶ್ವಕ್ಕೆ ಸಾರಿ, ಅದನ್ನು ನಡೆ ನುಡಿಗಳಲ್ಲಿ ಚಾಚೂ ತಪ್ಪದೇ ಪಾಲನೆ ಮಾಡುವ ಮೂಲಕ ದಯವೇ ಧರ್ಮ, ಅರಿವೇ ಗುರು, ದಾಸೋಹ ಸೇವೆ,ಮಾನವೀಯ ಮೌಲ್ಯಗಳು ಸೇರಿದಂತೆ, ಹೀಗೆ ಅನೇಕ ಸಮಾನತೆ ಸಹೋದರತೆಯ ತತ್ವಗಳು ಜಾಗತಿಕ ಮಟ್ಟದಲ್ಲಿ ಸಾರಿದ್ದ ಶ್ರೇಷ್ಠ ವ್ಯಕ್ತಿಗೆ ಪ್ರಜಾಪ್ರಭುತ್ವದ ದೇಗುಲದಲ್ಲಿ ಮನ್ನಣೆ ನೀಡುತ್ತಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ – ಸಂಪಾದಕೀಯ