ಚೇತನ್ ಸರ್ ನಿಜಕ್ಕೂ ನಿಮಗೇ ಬೇಕಿತ್ತಾ ??
ಅಮೆರಿಕಾದಲ್ಲೇ ಹುಟ್ಟಿ , ಅಮೆರಿಕಾದಲ್ಲೇ ಬೆಳೆದು ಯೇಲ್ ಯೂನಿವರ್ಸಿಟಿಯಂತಹ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದುಕೊಂಡ ಮೇಲೂ ಎಲ್ಲಾದರೂ ವೈಟ್ ಕಾಲರ್ ಉದ್ಯೋಗ ಮಾಡಿಕೊಂಡು ಡಾಲರ್ ಎಣಿಸಿಕೊಳ್ಳುವುದನ್ನು ಬಿಟ್ಟು ಮಣ್ಣಿನ ವಾಸನೆ ಹಿಡಿದು ಕರ್ನಾಟಕಕ್ಕೆ ಬರೋದು ಬೇಕಿತ್ತಾ ??
ಹೋಗಲಿ…ಬಂದ ಮೇಲಾದರೂ ಚಿತ್ರರಂಗದಲ್ಲಿ ಸುಮ್ಮನೆ ನಟಿಸುತ್ತಾ , ರಿಯಾಲಿಟಿ ಶೋಗಳಲ್ಲಿ ನಾಲ್ಕು ಡೈಲಾಗ್ ಹೊಡೆದು ಕುಣಿದು ದುಡ್ಡು ಮಾಡೋದು ಬಿಟ್ಟು ಹೋರಾಟ ಗೀರಾಟ ಎಲ್ಲಾ ಬೇಕಿತ್ತಾ ??
ಸಂಜೆ ಪಬ್ಬುಗಳಲ್ಲಿ ಕುಣಿದು , ಗಾಂಜಾ ಎಳೆದು ಬೆಳಿಗ್ಗೆದ್ದು ದೇಶಪ್ರೇಮಿಯಾಗಿ ಕಂಗನಾ ಥರ ಬದುಕೋದನ್ನ ಕಲಿಯೋದು ಬಿಟ್ಟು ರೈತರು , ಆದಿವಾಸಿಗಳು , ದಲಿತರು ಅಂತ ಗುಡ್ಡ ಮೇಡು ಅಂತ ಅಲೆದಾಡುವ ಕರ್ಮ ಬೇಕಿತ್ತಾ ??
ಉಳಿದ ಸೆಲೆಬ್ರಿಟಿಗಳ ಹಾಗೆ ರೆಸಾರ್ಟು ವಿದೇಶಗಳಲ್ಲಿ ಮದುವೆ ಮಾಡಿಕೊಂಡು ಜೂಮ್ ಅಂತ ಸುತ್ತಾಡಿಕೊಳ್ಳುವುದು ಬಿಟ್ಟು ಸರಳ ವಿವಾಹ ಮಣ್ಣು ಮಸಿ ಅಂತ ಆದರ್ಶ ಮೆರೆಯೋ ಅಗತ್ಯ ಇತ್ತಾ ??
ಸೋನಿಯಾ ರಾಹುಲ್ಗಳನ್ನೆಲ್ಲಾ ಒಂದಿಷ್ಟು ಹೀಯಾಳಿಸಿ ಝೆಡ್ ಪ್ಲಸ್ ಸೆಕ್ಯೂರಿಟಿ ಪಡ್ಕೊಂಡು ಧೀರ , ಶೂರ , ಮಹಾನ್ ದೇಶಪ್ರೇಮಿ ಎಂದು ಬಿಟ್ಟಿಯಾಗಿ ಸೆಗಣಿಗಳಿಂದ ಗಂಟೆ ಬಾರಿಸಿಕೊಳ್ಳುವ ಸುಖ ಅನುಭವಿಸೋದು ಬಿಟ್ಟು ರೈತರ ದಂಡಿನೊಂದಿಗೆ ಹೋಗಿ ಪೋಲೀಸರ ವ್ಯಾನ್ ಒಳಗಡೆ ಪತ್ನಿ ಸಮೇತ ದಬ್ಬಿಸಿಕೊಂಡು ಕಂಬಿ ಎಣಿಸುವ ಕೆಲಸ ನಿಜಕ್ಕೂ ಬೇಕಿತ್ತಾ ?
ಎಲ್ಲಾ ಸುಖ , ಸೌಲಭ್ಯಗಳೊಂದಿಗೆ ದೇಶಪ್ರೇಮಿ ಎಂದು ಸರ್ಟಿಫಿಕೇಟ್ ಹಿಡ್ಕೊಂಡು ಮೆರೆಯೋದಕ್ಕಿಂತ ದೇಶದ್ರೋಹಿ , ಅರ್ಬನ್ ನಕ್ಸಲ್ , ಹಿಂದೂ ವಿರೋಧಿ etc etc ಹಣೆಪಟ್ಟಿಗಳನ್ನು ಹೊತ್ತು ನಡೆಯೋದರಲ್ಲೇನು ಸುಖ ಅನ್ನೋದೇ ಅರ್ಥ ಆಗಲ್ಲ ಒಂದೊಂದ್ಸಲ ಬಹುಷಃ ಆ ಸುಖ 2 ರೂಪಾಯಿ ಗುಲಾಮಗಿರಿಗಿಂತ ತೀರಾ ಹೆಚ್ಚಿನದ್ದಿರಬೇಕು….
Anyway ಕನ್ನಡ ಚಿತ್ರರಂಗದಲ್ಲಿ ನಿಜವಾದ ಹೀರೋ ಅಂತ ಇದ್ದರೆ ಅದು ಸಧ್ಯಕ್ಕೆ ಚೇತನ್ ಮಾತ್ರ ಅನ್ನೋದನ್ನು ನಿರೂಪಿಸಿಬಿಟ್ರಿ ಮಾರಾಯ್ರೇ ..!!! Hats off Hero ❤️💙🤍🙏🏻 Chetan Ahimsa ಕೃಪೆ: youth voice