ಎಸಿ ಕಚೇರಿ ಲಿಂಗಸ್ಗೂರು ಇವರ ಮುಖಾಂತರ, ಸನ್ಮಾನ್ಯ ಶ್ರೀ. ಬಿ.ಎಸ್.ಯಡಿಯೂರಪ್ಪರವರಿಗೆ, ಮುಖ್ಯಮಂತ್ರಿಗಳು ಮನವಿ …..
ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ, ದೌರ್ಜನ್ಯಕ್ಕೊಳಗಾದವರಿಗೆ ಕೂಡಲೇ ಪರಿಹಾರ ನೀಡಲು ಮತ್ತು ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಅಧಿಕಾರಿಗಳ ಕಛೇರಿ ಮುಂದೆ ಡಿಎಚ್.ಎಸ್. ಪ್ರತಿಭಟನಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ. ಈ ನಮ್ಮ ದೇಶ ಸ್ವಾತಂತ್ರö್ಯ ಗಳಿಸಿ ೭೫ ವರ್ಷ ಕಳೆದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಇನ್ನೂ ಸ್ವಾಭಿಮಾನದಿಂದ ಬದುಕುವ ಹಕ್ಕುಗಳು ದೊರೆತಿಲ್ಲ. ಪ್ರತಿದಿನ ಅರ್ಧ ಗಂಟೆಗೊಮ್ಮೆ ದಲಿತರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಸವರ್ಣಿಯರಿಂದ ದೌರ್ಜನ್ಯಕ್ಕೆ ದಲಿತರು ಒಳಗಾಗುತ್ತಿದ್ದಾರೆ. ಕೋವಿಡ್ ಕಾಲದಲ್ಲೂ …ಹೆಚ್ಚುತ್ತಿರುವ ಜಾತಿತಾರಮ್ಯ ಕೊಪ್ಪಳ ಜಿಲ್ಲೆ ಕಾರಟಗಿ ತಾಲೋಕ್, ಕುರುಬ ಹುಡುಗಿ ಯನ್ನು ಪ್ರೀತಿಸಿದ ಕಾರಣಕ್ಕೆ ಕೊಚ್ಚಿ ಕೊಲೆ ಮಾಡಲಾಗಿದೆ. ಬರಗೂರು, ವಿಜಾಪುರದ ದೇವಹಿಪ್ಪರಗಿಯ ಸಲಾದಹಳಿ,್ಳ ಮೇಲ್ ಜಾತಿ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಹೆತ್ತ ತಾಯಿಯ ಎದುರೆ ಹಳ್ಳಕ್ಕೆ ಹಾಕಿ ಅಮಾನುಷವಾಗಿ ಹೊಡೆದು ಹತ್ಯೆ ಮಾಡಿದ ಮರ್ಯಾದೆ ಹತ್ಯೆಗಳು, ಕೊಪ್ಪಳ ಜಿಲ್ಲೆಯ ಹೊಸಹಳ್ಳಿ, ತಿಗರಿ, ಹಗೆದಾಳ್ ಮತ್ತು ವಜ್ರಬಂಡಿಯಲ್ಲಿ ದಲಿತರಿಗೆ ಕ್ಷೌರ ನಿರಾಕರಣೆಸಿ ದೌರ್ಜನ್ಯ. ಚಿಕ್ಕಮಗಳೂರು ಜಿಲ್ಲೆಯ ಗೋಣಿ ಬೀಡು ಪೋಲಿಸ್ ಠಾಣೆಯಲ್ಲಿ ಕಿರಗುಂದ ಗ್ರಾಮದ ದಲಿತ ಯುವಕ ಪುನೀತ್ ಬಾಯಿಗೆ ಹುಚ್ಚೆ ಕುಡಿಸಿ ಪೋಲಿಸ್ ದೌರ್ಜನ್ಯ.. ದಲಿತ ಯುವಕರು ಬೆಂಗಳೂರು ನಗರದಲ್ಲಿ ಬ್ರಾಹ್ಮಣರು ಲಸಿಕೆ ಹಾಕಿಸುತ್ತಿದ ್ದ ಜಾಗಕ್ಕೆ ಹೋದ ಕಾರಣಕ್ಕೆ ದೌರ್ಜನ್ಯ. ದಲಿತರನ್ನು ಮನುಷ್ಯರಂತೆ ಕಾಣದ ಇಂತಹ ಅನಾಗರೀಕ ಸಮಾಜದಲ್ಲಿನ ಅರಣ್ಯ ನ್ಯಾಯದ ಸಂಕಟಗಳನ್ನು ಎದುರಿಸಿ ಬದುಕುತ್ತಿರುವ ದಲಿತರು ‘ವಾಸಿಸಲು ಮನೆಗಳಿಲ್ಲ-ಸತ್ತರೆ ಸ್ಮಶಾನಗಳಿಲ್ಲ’ ಎಂಬAತೆ ಬದುಕು ನೂಕುತ್ತಿರುವ ಸಂದರ್ಭದಲ್ಲಿ, ಕಳೆದ ಒಂದು ವರ್ಷದಿಂದ ಅಮರಿಕೊಂಡಿರುವ ಕೊರೋನ ವೈರಸ್ ದಲಿತರ ಜೀವನ ಸ್ಥಿತಿಯನ್ನು ಇನ್ನಷ್ಟು ಬರ್ಬರಗೊಳಿಸಿದೆ. ಮೊದಲೇ ಬಡತನ, ನಿರುದ್ಯೋಗ, ದಾರಿದ್ರö್ಯಗಳಿಂದ ಬಳಲುತ್ತಿದ್ದ ದಲಿತ ಸಮುದಾಯ ಕೊರೋನ ವೈರಸ್ ನಿಂದ ಜೀವ ಮತ್ತು ಜೀವನ ಎರಡನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸವರ್ಣಿಯರು ದಲಿತರ ಮೇಲೆ ಕೊರೋನ ವೈರಸ್‌ಗಿಂತ ಗಂಭಿರವಾಗಿ ದಲಿತರ ಮೇಲೆ ಮಾರಣಾಂತಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ.
ಇಡೀ ರಾಜ್ಯಾದ್ಯಂತ ದಲಿತರ ಮೇಲೆ ಎಗ್ಗಿಲ್ಲದೇ ಕೊಲೆಗಳು, ದೌರ್ಜನ್ಯಗಳು, ದಬ್ಬಾಳಿಕೆಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ದಿವ್ಯಮೌನ ವಹಿಸಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಸ್ಥಳೀಯವಾಗಿ ಪೊಲೀಸ್ ಇಲಾಖೆ ರಾಜಕೀಯ ಪಟ್ಟಭದ್ರ ಹಿತಾಶಕ್ತಿಗಳಿಗೆ ಮಣಿದು, ಅಸ್ಪೃಶ್ಯತೆ ಆಚರಣೆ ವಿರೋಧಿ ಕಾಯ್ದೆ ಅಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳದೆ ದಲಿತರನ್ನೇ ತಪ್ಪಿತಸ್ಥರಂತೆ ಮಾಡಿ, ದಲಿತರ ಮೇಲೆಯೇ ಕೇಸ್ ಗಳನ್ನು ದಾಖಲಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಕೊರೋನ ಕಾಲದಲ್ಲೂ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ ಇರುವ ಅಭಿವೃದ್ದಿ ನಿಗಮ ಮತ್ತು ಮಂಡಳಿಗಳು ಸಂಪೂರ್ಣವಾಗಿ ನಿಷ್ಕಿçÃಯವಾಗಿವೆ. ಇಂತಹ ದಲಿತ ವಿರೋಧಿ ರಾಜ್ಯ ಸರ್ಕಾರದ ಧೋರಣೆಯನ್ನು ದಲಿತ ಹಕ್ಕುಗಳ ಸಮಿತಿ-ಲಿಂಗಸ್ಗೂರು ತಾಲೂಕು ಸಂಚಾಲಕ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಈ ಕೂಡಲೇ ರಾಜ್ಯ ಸರ್ಕಾರ ಎಚ್ಛೆತ್ತುಕೊಂಡು ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಕೂಡಲೇ ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ತಪ್ಪಿತಸ್ಥರಿಗೆ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ದಲಿತ ಹಕ್ಕುಗಳ ಸಮಿತಿ-ಲಿಂಗಸ್ಗೂರು ತಾಲೂಕು ಸಂಚಾಲಕ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ಬೇಡಿಕೆಗಳು:
೧. ಕೂಡಲೇ ಮುಖ್ಯಮಂತ್ರಿಗಳು, ರಾಜ್ಯ ಮಟ್ಟದ ದಲಿತರ ಮೇಲಿನ ದೌರ್ಜನ್ಯ ವಿರೋಧಿ ಸಮಿತಿ ಸಭೆ ಕರೆಯಬೇಕು. ರಾಜಾದ್ಯಂತ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು.
೨. ಸಿಂಧನೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕೀಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೇಗೆ ಒಳಪಡಿಸಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಸೂಕ್ತ ಪರಿಹಾರ ಮತ್ತು ರಕ್ಷಣೆ ಒದಗಿಸಬೇಕು.
೩. ದಲಿತರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಎಸ್.ಸಿ/ಎಸ್,ಟಿ ದೌರ್ಜನ್ಯ ತಡೆ ಕಾಯ್ದೆಅಡಿಯಲ್ಲಿ ಬಂಧಿಸಬೇಕು.
೪. ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಕೂಡಲೇ ತಲಾ ೫ ಲಕ್ಷ ಪರಿಹಾರ ನೀಡಬೇಕು.
೫. ಜಿಲ್ಲಾಧಿಕಾರಿಗಳು ಕೂಡಲೇ ಜಿಲ್ಲಾ ಮಟ್ಟದಲ್ಲಿ ದಲಿತರ ಮೇಲಿನ ದೌರ್ಜನ್ಯ ವಿರೊಧಿ ಸಮಿತಿಗಳನ್ನು ಕರೆದು ಪರಿಶೀಲಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು.
೬. ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ಯೊಜನೆಯನ್ನು ಪುನರ್ ಮೌಲೀಕರಿಸಿ ರೂಪಿಸಬೇಕು. ಅರ್ಹ ಬಡ ದಲಿತರಿಗೆ ನೇರವಾಗಿ ಆರ್ಥಿಕ ನೆರವು ನೀಡಬೇಕು.
ಈ ಮೇಲಿನ ಬೇಡಿಕೆಗಳ ಈಡೇರಿಸುವ ಜೊತೆಗೆ ದಲಿತರ ಮುಂದಿರುವ ಸಮಸ್ಯೆ-ಸವಾಲುಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು, ದಲಿತ ಹಕ್ಕುಗಳ ಸಮಿತಿ-ಕರ್ನಾಟಕ, ರಾಜ್ಯ ಸಮಿತಿಯ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಬೇಕೆಂದು ರಾಜ್ಯಾದ್ಯಂತ ಜಿಲ್ಲಾ-ತಾಲ್ಲೂಕು ಮಟ್ಟದ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ. ಈ ಸಂದರ್ಭದಲ್ಲಿ ಡಿಹೆಚ್ ಎಸ್ ಸಂಚಾಲಕ ರಮೇಶ ವೀರಾಪೂರು, ಮುಖಂಡರಾದ ಶಿವಪ್ಪ, ಯಲ್ಲಾಲಿಂಗ ಕುಣೆಕೆಲ್ಲೂರು, ಅನಿಲ್ ಕುಮಾರ್, ರಮೇಶ ಭಜಂತ್ರಿ ವೀರಾಪೂರು, ಮುತ್ತುರಾಜ್ ವೀರಾಪೂರು, ಬಾಬಾಜಾನಿ, ಜಗಧೀಶ ಯಂಕೋಚಿ, ಶರಣಬಸವ, ಮೌನೇಶ ಸೇರಿದಂತೆ ಅನೇಕರಿದ್ದರು..
ವರದಿ – ಸಂಪಾದಕೀಯ