ನಿವೃತ್ತಿ ಎಂಬುದು ನೌಕರನ ವೃತ್ತಿಜೀವನದ ಸಿಂಹಾವಲೋಕನದ ಸಮಯ ಎಂದ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಶೀಲವಂತರವರು..

Spread the love

ನಿವೃತ್ತಿ ಎಂಬುದು ನೌಕರನ ವೃತ್ತಿಜೀವನದ ಸಿಂಹಾವಲೋಕನದ ಸಮಯ ಎಂದ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಶೀಲವಂತರವರು..

ಅಮೀನಗಡ: ನಿವೃತ್ತಿ ಎಂಬುದು ನೌಕರನ ವೃತ್ತಿಜೀವನದ ಸಿಂಹಾವಲೋಕನದ ಸಮಯ ಎಂದು ಹುನಗುಂದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಶೀಲವಂತರ ಅಭಿಪ್ರಾಯಪಟ್ಟರು.  ಅವರು ಸಮೀಪದ ಬೇವಿನಮಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ಶಿಕ್ಷಕರ ವೃತ್ತಿಬದುಕಿನ ಪ್ರಾರಂಭದ ಊರು ಅಲ್ಲಿನ ಜನ, ಶಿಷ್ಯಬಳಗ, ಅಲ್ಲಿನ ಸೇವಾ ಅನುಭವ ಎಂದೂ ಮರೆಯದ ಅವಿಸ್ಮರಣೀಯ ಕ್ಷಣಗಳು ಎಂದರು. ಮುಖ್ಯ ಅತಿಥಿಗಳಾಗಿದ್ದ ಜೆಡಿಎಸ್ ಧುರೀಣ ಶಿವಪ್ರಸಾದ ಗದ್ದಿ ಮಾತನಾಡುತ್ತಾ, ಗ್ರಾಮದ ಮಕ್ಕಳಿಂದ ಸಾರ್ವಜನಿಕರಿಗೆ ಅತ್ಯಂತ ಹತ್ತಿರವಿರುವ ಸರಕಾರಿ ಉದ್ಯೋಗಸ್ಥರು ಎಂದರೆ ಶಿಕ್ಷಕರು. ಮಕ್ಕಳೊಂದಿಗೆ ಮಕ್ಕಳಾಗಿ ಹಾಡುತ್ತಾ ಹಾಡುತ್ತಾ ಬದುಕಿನ ಪಾಠವನ್ನು, ನೈತಿಕ ಮೌಲ್ಯಗಳನ್ನು ಬಿತ್ತುವ ಶಿಕ್ಷಕರು ಉತ್ತಮ ಸಮಾಜ ಕಟ್ಟುವಲ್ಲಿ ಮಹತ್ವದ ಪಾತ್ರವಹಿಸುತ್ತಾರೆ ಎಂದರು. ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿದ ಪಿ ಬಿ ನೆರ್ತಿ ಹಾಗೂ ಸಹಶಿಕ್ಷಕರಾಗಿ ನಿವೃತ್ತರಾದ ಎಸ್ ಜಿ ಮಮದಾಪುರ ಅವರನ್ನು ಸ್ಥಳೀಯ ಶಾಲೆಯ ಎಸ್ ಡಿ ಎಂ ಸಿ, ಶಿಕ್ಷಕ ವೃಂದ, ಹಾಗೂ ಸುತ್ತಲಿನ ಶಾಲೆಗಳಾದ ಯರನಕೇರಿ, ಹೊನ್ನರಹಳ್ಳಿ, ಚಿಕ್ಕಯರನಕೇರಿ ಶಾಲೆಯ ಸಿಬ್ಬಂದಿ ವರ್ಗ ಗೌರವ ಸನ್ಮಾನ ಮಾಡಿ ಬೀಳ್ಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ ಬಿ ನೆರ್ತಿ, ಸೇವೆಗೆ ಸೇರಿದಾಗಿನಿಂದ ಮಕ್ಕಳೊಂದಿಗೆ ಕಾಲ ಕಳೆದ ನಮಗೆ ನಿವೃತ್ತಿಯ ಅಂಚಿಗೆ ಬಂದದ್ದೆ ಗೊತ್ತಾಗದಷ್ಟು ಸಮಯ ಬೇಗನೆ ಸರಿದಂತಾಗಿದೆ. ವೃತ್ತಿ ಜೀವನದುದ್ದಕ್ಕೂ ಸಲಹೆ-ಸಹಕಾರ, ಮಾರ್ಗದರ್ಶನ ಮಾಡಿದ ಹಿರಿಯ ಅಧಿಕಾರಿವರ್ಗ, ಎಸ್ ಡಿ ಎಂ ಸಿ, ಸಹೋದ್ಯೋಗಿಗಳು, ಮುದ್ದು ಮಕ್ಕಳನ್ನು ಮರೆಯಲಾಗದು ಎಂದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ನೂತನ ಎಸ್ ಡಿ ಎಂ ಸಿ ಯವರಿಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಗ್ರಾಮ  ಪಂಚಾಯತಿ ಅಧ್ಯಕ್ಷೆ ಅಕ್ಕಮಹಾದೇವಿ ಗೌಡಪ್ಪನವರ, ಎಸ್ ಡಿ ಎಂ ಸಿ ಅಧ್ಯಕ್ಷ ಮಹಾಂತೇಶ ಬದಾಮಿ, ತಾಲೂಕಾ ಪಂಚಾಯತಿ ಮಾಜಿ ಸದಸ್ಯೆ ಸಹನಾ ಗದ್ದಿ, ಮುಖ್ಯಗುರುಗಳಾದ ಎ ಐ ಕಂಬಳಿ, ಕೆ ಎಸ್ ಲಮಾಣಿ, ಶರಣಯ್ಯ ವಸ್ತ್ರದ, ಎಸ್ ಜಿ ಲಮಾಣಿ, ಸಿ ಎಸ್ ಭಮಸಾಗರ, ಬಿ ವೈ ಮುಂಡೇವಾಡಿ, ಎಸ್ ಬಿ ಬಿಜಾಪೂರ ಎಸ್ ಎನ್ ತೋಳಮಟ್ಟಿ ಇತರರು ಉಪಸ್ಥಿತರಿದ್ದರು.

ವರದಿ –  ಮಹೇಶ ಶರ್ಮಾ

Leave a Reply

Your email address will not be published. Required fields are marked *