ಸಸಿ ನೆಟ್ಟು ಕಂದಾಯ ದಿನಾಚರಣೆ ಆಚರಿಸಿದ ಶ್ರೀ ಮಾನ್ಯ ತಹಶೀಲ್ದಾರ್ ಎಂ.ಸಿದ್ದೇಶರವರು…
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಹಶೀಲ್ದಾರ್ ಕಾರ್ಯಲಯದಲ್ಲಿ ಇಂದು ಕಂದಾಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿ ನೆಟ್ಟು ನೀರು ಹಾಕುವ ಮುಖಾಂತರ ಕಂದಾಯ ದಿನಾಚರಣೆ ಆಚರಿಸಿದರು ಹಸಿರೆ ಬಾಳಿನ ಉಸಿರು ಹಸಿರು ಜೀವದ ಉಸಿರು ಸಸಿ ನೆಡಿ ವರ ಪಡಿ ಎಂಬಂತೆ ಪ್ರತಿಯೊಂದು ಜೀವ ಜಲವು ಬದಕಲು ಗಿಡ ಮರಗಳನ್ನು ಉಳಿಸೋಣ ಮರ ಗಿಡಗಳನ್ನು ಕಡಿದು ಮಳೆಯನ್ನು ಕಳೆಯದೆ ಉಸಿರಿಗೆ ಹಸಿರನ್ನು ಉಳಿಸುವ ಪ್ರಯತ್ನ ಮಾಡೋಣ ಹಸಿರು ಮಾನವನ ಉಸಿರು ಇಂದು ಸಸಿಯಾಗಿ ನೆಟ್ಟು ಗಿಡ ಮುಂದಿನ ದಿನಗಳಲ್ಲಿ ಕಾಡು ಆಗಿ ಬೆಳೆದು ನಾಡಿಗೆ ಮಳೆ ನಿಡುತ್ತದೆ ಮನು ಕುಲದ ಒಳಿತಿಗಾಗಿ ಗಿಡ ಮರ ರಕ್ಷಿಸಿ ಶುದ್ಧ ಗಾಳಿ ನಿರು ಬೆಳಕಿಗೆ ನಾವೇ ಸಾಕ್ಷಿಯಾಗಬೇಕಿದೆ ಅರಣ್ಯ ನಾಶವನ್ನು ನಿಲ್ಲಿಸಿ ಬರುಡಾಗಿರುವ ಭೂಮಿಯಲ್ಲಿ ಹೊಸದಾಗಿ ಕಾಡನ್ನು ಬೆಳಸಿ ನಾಡನ್ನು ಉಳಿಸಬೇಕು ಎಂದರು ವೃಕ್ಷೋ ರಕ್ಷತಿ ರಕ್ಷಿತ ಎಂಬಂತೆ ಮರಗಳನ್ನು ರಕ್ಷಿಸುವವರನ್ನು ಮರವು ರಕ್ಷಿಸುತ್ತಿದೆ ಎಂಬ ಮಾತನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು ಭೂಮಿಯನ್ನು ಸಾಧ್ಯವಾದಷ್ಟು ಹಸಿರಾಗಿಸಲು ಯತ್ನಿಸಬೇಕು ಎಂದರು ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ.ಸಿದ್ದೇಶ ಹಾಗೂ ಸರ್ವ ಸಿಬ್ಬಂದಿ ಬಳಗದವರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ