ಶಿವ ಶರಣೆ ಶ್ರೀ ಅಕ್ಕ ಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಕಾರಿಪುರ – ಶಿರಾಳ ಕೊಪ್ಪದ ಮದ್ಯೆ ಬರುವ ಉಡುತಡಿ ಅಥವಾ ಉಡಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ ಇವರು ಜನಿಸಿದರು, ಇವರು ಬೆಳೆಯುತ್ತ ಬೆಳೆಯುತ್ತ ಸಮಾಜಿಕ ಬೇಳವಾಣಿಗೆಗೆ ಶ್ರಮಿಸುತ್ತ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ ಹೋರಾಟ ನಡೆಸಿ ಈ ಹೋರಾಟದಲ್ಲಿ ಮೊದಲಭಾರಿಗೆ ಯಶಸ್ವಿ ಕಂಡರು, ಸಿರಿಗೆರಿಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮೀಜಿಯವರಯ ಹಾಗೂ ಹಿರೇ ಜಂಬೂರಿನ ಸ್ವಾತಂತ್ರ್ಯ ಹೋರಾಟೀಲರು ಇದನ್ನು ಇವರು ಉ:ಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಸಿ, ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡೆಯಿಂದ ಎಲ್ಲವನ್ನು ತ್ಯಾಜಿಸಿ ಹೊರಟ ಅಕ್ಕಮಹಾದೇವಿ ಮುಂದೆ (ಬಸವ ಕಲ್ಯಾಣ)ದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ದರಾಮ ಮೊದಲಾದ ಶರಣರಿಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. “ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇಯಾದ ಸಾಹಿತ್ಯ ಸೇವೆಯನ್ನ ಸಲ್ಲಿಸಿದ್ದಾರೆ. ಅವರ ವಚನಗಳಲ್ಲಿ ಕೆಲವೊಂದು 1) ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್? ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ ಸುತ್ತಿ-ನಿಂದೆಗಳು ಬಂದರೆ ಮನದಲ್ಲಿ ಕೋಪದ ತಾಳದ ಸಮಾಧಾನಿಯಾಗಿರಬೇಕು.. 2) ಈಳೆ-ನಿಂಬೇ-ಮಾವು ಮೊದಲಕ್ಕೆ ಹುಳಿ ನೀರೆರೆದವರಾರಯ್ಯ? ಕಬ್ಬು-ಬಾಳೆ-ಣಾರಿವಾಳಕ್ಕೆ ಸಿಹಿ ನೇರೆರೆದವರಾರಯ್ಯ? ಕಳವೆ ಶಾಲಗೆ ಓಗರದ ಉದಕವ ನೆರೆದವರಾರಯ್ಯ? ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ ಪರಿಮಳದುದಕವ ನೆರೆದವರಾರಯ್ಯ? ಇಂತೀ ಜಲ ಒಂದೇ. ನೆಲ ಒಂದೆ ಆಕಾಶ ಒಂದೆ! ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಂಗಗಳ ಕೂಡಿ ಕೊಂಡಿದ್ದರೇನು? ತನ್ನ ಪರಿ ಬೇಗ! 3 ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು, ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು ಹದುಳಿಗರಲ್ಲದವರಲ್ಲಿ ಗಂಧಾ ಕ್ಷೇತೆಯನೊಲ್ಲೆಯಯ್ಯ ನೀನು, ಅರಿವು ಕಣ್ತೆರೆಯದವರಲ್ಲಿ zಆರತಿನೊಲ್ಲೆಯಯ್ಯ ನೀನು, ಭಾವಶುದ್ದವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು ಪರಿಣಾಮಿಗಳಿಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು, ತ್ರಿಕರಣ ಶುದ್ದವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯೆ ನೀನು, ಹೃದಯ ಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು, ಎನ್ನಲ್ಲಿ ಏನುಂಟೆಂದು ಕರಸ್ಥಲವಲನಿಂಬುಗೂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ, ಎಂದು ಅರ್ಥ ಗಂಬಿರವಾಗಿ ತಮ್ಮ ವಚನಗಳಲ್ಲಿ ತಿಳಿ ಹೇಳಿದ್ದಾರೆ,