ಹಾಲಾಪೂರ : ತೊಗರಿ ಪ್ರಾತ್ಯಕ್ಷಿತಾ ಮತ್ತು ಕೀಲು ಚೀಲಗಳ ವಿತರಣೆ ….
ಕವಿತಾಳ : ಪಟ್ಟಣ ಸಮೀಪದ ಹಾಲಾಪೂರ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಇಂದು ಬೆಳಗ್ಗೆ 2021-22 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ , ತೊಗರಿ ಪ್ರಾತ್ಯಕ್ಷಿತಾ ಮತ್ತು ಕೀಲು ಚೀಲಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಹಾಲಾಪೂರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಗೌಡ ರವರು ಮಾತನಾಡಿ ಇಂದು ಸರಕಾರ ಅನೇಕ ರೈತ ಪರ ಯೋಜನೆಗಳನ್ನು ಹಮ್ಮಿಕೊಂಡಿದೆ , ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ರೈತರು ಬೆಳೆ ವಿಮಾ ತುಂಬುವ ಸಂದರ್ಭದಲ್ಲಿ ಸರಿಯಾದ ಬೆಳೆಯನ್ನು ನಮೊದಿಸಬೇಕು, ರೈತ ಬೆಳೆದಿರುವ ಬೆಳೆ ಬೇರೆ ಇರುತ್ತದೆ , ಆದರೆ ಆನ್ ಲೈನ್ ಬೇರೆ ಬೆಳೆಯ ಬಗ್ಗೆ ನಮೊದಿಸಿತ್ತಿರಿ ಇದರಿಂದ ಇಮಗೆ ತೊಂದರೆ ಆಗುತ್ತದೆ ಅದಕ್ಕಾಗಿ ಸರಿಯಾಗಿ ವಿಮೆಯನ್ನು ತುಂಬಬೇಕು ಹಾಗೆ ಗೊಬ್ಬರವನ್ನು ಹಾಕುವಾಗ ಸರಿಯಾಗಿ ಹಾಕಬೇಕು, ಹೆಚ್ಚುಕಡಿಮೆ ಹಾಕುವುದರಿಂದ ಬೆಳೆ ಸರಿಯಾಗಿ ಬರುವುದಿಲ್ಲ, ಹೆಚ್ಚಿನ ಮಾಹಿತಿಗಾಗಿ ನಮ್ಮ ಕೇಂದ್ರಕ್ಕೆ ಬನ್ನಿ ಎಂದು ಕೃಷಿ ಅಧಿಕಾರ ಅಮರೇಗೌಡ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಗದೀಶಸ್ವಾಮಿ , ಅಮರೇಗೌಡ, ಬಸವರಾಜ ವಡಗೇರಿ, ವೆಂಕಟರಡ್ಡಿ , ಕರಿಯಪ್ಪ , ಸಹಾಯಕ ಕೃಷಿ ಅದಿಕಾರಿ ಸದ್ದಾಂ ಹುಸೇನ್ , ತಾಹೀರಬೇಗಂ, ಉಪನ್ಯಾಸಕರಾದ ನಾಗೇಶ, ಸಿದ್ದಾರ್ಥ ಪಾಟೀಲ್, ಶ್ರೀಕಾಂತ್ , ಸಿಬ್ಬಂದಿಗಳಾದ ಪ್ರವೀಣ್ಕುಮಾರ, ಮಂಜುನಾಥ , ಮುದುಕಪ್ಪ , ಹೋಬಳಿ ಕೇಂದ್ರದ ರೈತ ಬಾಂಧವರು ಇದ್ದರು.
ವರದಿ – ಆನಂದ್ ಸಿಂಗ್ ಕವಿತಾಳ